
ಲಕ್ಷ್ಮೇಶ್ವರ,ಜ24: ಪಟ್ಟಣದ ತಾಯಿ ಪಾರ್ವತಿ ಮಕ್ಕಳ ಬಳಗದ ಶ್ರೀಮದ್ ರಂಭಾಪುರಿ ಜಗದ್ಗುರು ಗಂಗಾಧರ ಪದವಿ ಪೂರ್ವ ಸ್ವತಂತ್ರ ಮಹಿಳಾ ಕಾಲೇಜಿನ ಪ್ರಾಚಾರ್ಯರು ಮತ್ತು ಸಿಬ್ಬಂದಿ ವರ್ಗ ಕಾಲೇಜಿನಲ್ಲಿ ಅಭ್ಯಸಿಸಲು ಬರುತ್ತಿರುವ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರ ಗ್ರಾಮಗಳ ಮನೆ ಮನೆಗೆ ಭೇಟಿ ನೀಡಿ ಪಾಲಕರು ಮತ್ತು ವಿದ್ಯಾರ್ಥಿನಿಯರೊಂದಿಗೆ ಅವರ ಶೈಕ್ಷಣಿಕ ಪ್ರಗತಿ ಕುಂದು ಕೊರತೆ ಮತ್ತು ಸಮಸ್ಯೆಗಳ ಬಗ್ಗೆ ಆಲಿಸಿ ಸೂಕ್ತ ಸಲಹೆ ಸೂಚನೆ ನೀಡುತ್ತಿದ್ದಾರೆ.
ತಾಲೂಕಿನ ರಾಮಗಿರಿ ಗುಲಗಂಜಿಕೊಪ್ಪ ಗೋನಾಳ ಹಾಗೂ ಕುಂದಗೋಳ ತಾಲೂಕಿನ ಹರಲಾಪುರ ಕಳಸ ಸಂಕ್ಲಿಪುರ ಗ್ರಾಮಗಳಿಗೆ ತೆರಳಿ ಪ್ರಾಚಾರ್ಯ ಸರಸ್ವತಿ ಹುಲ್ಲಣ್ಣ ವರ್ ನೇತೃತ್ವದಲ್ಲಿ ಪ್ರಾಧ್ಯಾಪಕರು ಮನೆ ಮನೆಗೆ ಭೇಟಿ ನೀಡಿ ವಿದ್ಯಾರ್ಥಿಯರ ಪೆÇೀಷಕರೊಂದಿಗೆ ಪಾಲಕರೊಂದಿಗೆ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಮಾಹಿತಿ ಪಡೆದುಕೊಂಡು ಅವರಿಗೆ ಪರೀಕ್ಷೆಗಳು ಸಮೀಪಿಸುತ್ತಿರುವುದರಿಂದ ಹೆಚ್ಚಿನ ಅವಧಿಯನ್ನು ಓದಲು ಬಿಡುವಂತೆ ಮನವಿ ಮಾಡುವುದರೊಂದಿಗೆ ವಿದ್ಯಾರ್ಥಿನಿಯರಿಗೆ ಪೆÇ್ರೀತ್ಸಾಹ ನೀಡಿ ಯಾವುದೇ ವಿಷಯದಲ್ಲಿ ಸಮಸ್ಯೆಗಳು ಕಂಡು ಬಂದರೆ ಸಂಬಂಧ ಪಟ್ಟ ವಿಷಯ ಪ್ರಾಧ್ಯಾಪಕರೊಂದಿಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳುವಂತೆ ಸೂಚಿಸಿದರು.























