
ಮುದ್ದೇಬಿಹಾಳ: ಸರ್ಕಾರಿ ಶಾಲೆಗಳಲ್ಲಿನ ಕರಾಟೆ ಮತ್ತು ಯೋಗ ಶಿಕ್ಷಕರ ನೇಮಕಾತಿಯಲ್ಲಿ ಪ್ರತ್ಯೇಕ ಮಾನದಂಡ ರೂಪಿಸಿ ಕರಾಟೆ ಶಿಕ್ಷಕರಿಗೆ ನ್ಯಾಯ ಒದಗಿಸಬೇಕು ಎಂದು ರಾಜ್ಯ ಕರಾಟೆ ಶಿಕ್ಷಕರ ಸಂಘದ ಪದಾಧಿಕಾರಿಗಳು ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷಿ÷್ಮ ಚೌಧರಿ ಅವರಿಗೆ ಮನವಿ ಸಲ್ಲಿಸಿದರು.
ಬಳ್ಳಾರಿಯಲ್ಲಿ ನಡೆಯಲಿರುವ ನಾರಿಶಕ್ತಿ ರಾಜ್ಯಮಟ್ಟದ ಕರಾಟೆ ಸ್ಪರ್ಧೆಗೆ ಆಹ್ವಾನಿಸುವ ಕುರಿತು ಶುಕ್ರವಾರರಂದು ಮುದ್ದೇಬಿಹಾಳದಿಂದ ತೆರಳಿದ್ದ ರಾಜ್ಯ ಕರಾಟೆ ಶಿಕ್ಷಕರ ಸಂಘದ ಪ್ರ. ಕಾರ್ಯದರ್ಶಿ ಕಟ್ಟಿಸ್ವಾಮಿ ಬಳ್ಳಾರಿ ಹಾಗೂ ರಾಜ್ಯ ವಕ್ತಾರ ಶಿವಕುಮಾರ ಶಾರದಳ್ಳಿ ಅವರ ನೇತೃತ್ವದ ನಿಯೋಗವು ಮಹಿಳಾ ಆಯೋಗದ ಅಧ್ಯಕ್ಷರನ್ನು ಭೇಟಿ ಮಾಡಿ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರಲ್ಲದೇ ೪೦೦ಕ್ಕೂ ಹೆಚ್ಚು ಪಿಎಂ ಶ್ರೀ ಯೋಜನೆಯಡಿಯಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಹೆಣ್ಣುಮಕ್ಕಳಿಗೆ ಕರಾಟೆ ಮತ್ತು ಯೋಗ ತರಬೇತಿ ನೀಡುವ ನೇಮಕಾತಿ ಪ್ರಕ್ರಿಯೆಯಲ್ಲಿ ಕರಾಟೆ ಶಿಕ್ಷಕರಿಗೆ ಆಗುತ್ತಿರುವ ತಾರತಮ್ಯವನ್ನು ನಿಯೋಗ ವಿವರಿಸಿತು.
ಕರಾಟೆ ಮತ್ತು ಯೋಗ ವಿಭಿನ್ನ ತರಬೇತಿ ಕ್ಷೇತ್ರಗಳಾಗಿರುವುದರಿಂದ ಅರ್ಹತೆ ಹಾಗೂ ತರಬೇತಿ ವಿಧಾನಗಳನ್ನು ಆಧರಿಸಿ ಪ್ರತ್ಯೇಕ ಮಾನದಂಡ ರೂಪಿಸಬೇಕು ಕರಾಟೆ ಶಿಕ್ಷಕರಿಗೆ ಅವರ ಕ್ಷೇತ್ರಕ್ಕೆ ಅನುಗುಣವಾಗಿ ಅರ್ಹತೆ ಮತ್ತು ನ್ಯಾಯಯುತ ಅವಕಾಶ ಕಲ್ಪಿಸಬೇಕು ಈ ಕುರಿತು ಸಂಭAದಪಟ್ಟ ಸರ್ಕಾರಿ ಅಧಿಕಾರಿಗಳಿಗೆ ಸೂಕ್ತ ನಿರ್ಧೇಶನ ನೀಡುವಂತೆ ಮೌಖಿಕವಾಗಿ ನಿಯೋಗದಿಂದ ಮನವಿ ಮಾಡಲಾಯಿತು.
ಮನವಿಗೆ ಸ್ಪಂದಿಸಿದ ಡಾ. ನಾಗಲಕ್ಷಿ÷್ಮ ಚೌಧರಿ ಅವರು ಸಂಬAಧಪಟ್ಟ ಅಧಿಕಾರಿಗಳಿಗೆ ಪತ್ರ ಬರೆಯುವ ಭರವಸೆಯನ್ನು ನೀಡಿದರು.
ಈ ಸಮಯದಲ್ಲಿ ಸಂಘದ ಮುತ್ತು ಟಕ್ಕಳಕಿ, ಗುರುನಾಥ್, ರಜತ್ ನಾಗರಾಜ್, ಸಂಜನಾ ಕುಮಾರಿ ಹಾಗೂ ಪ್ರೇಮ ಉಪಸ್ಥಿತರಿದ್ದರು.





















