“ಅಜ್ಜ ಅಜ್ಜಿಯರ ಸಿರಿಗಳು” ನಾಟಕ ಪ್ರದರ್ಶನ

ಕಲಬುರಗಿ,ನ.29- ಪಿಎಂಶ್ರೀ ಕೇಂದ್ರೀಯ ವಿದ್ಯಾಲಯದಲ್ಲಿ ಅಜ್ಜ ಅಜ್ಜಿಯರ ಸಿರಿಗಳು ಕನ್ನಡ ನಾಟಕ ಪ್ರದರ್ಶನ ಶುಕ್ರವಾರ ಆಯೋಜಿಸಲಾಗಿತ್ತು.
ಶಾಲೆಯ ಪ್ರಾಚಾರ್ಯ ಭೂಪೇಂದ್ರ್ ಬುರಾಡಿಯಾ ಅವರು ದೀಪ ಬೆಳಗಿಸುವ ಮೂಲಕ ಅಜ್ಜ ಅಜ್ಜಿಯರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮುಖ್ಯಗುರು ಕೆ.ಕಲಕೇರಿ ಅವರು ಪ್ರಾಸ್ತವಿಕವಾಗಿ ಮಾತನಾಡಿದರು. 4 ಹಾಗೂ 5ನೇ ತರಗತಿ ಮಕ್ಕಳುÀ ಅಜ್ಜ ಅಜ್ಜಿಯ ಸಿರಿಗಳು ಕನ್ನಡ ನಾಟಕ ಪ್ರಸ್ತುತಪಡಿಸಿದರು.
ನಂತರ ಅಜ್ಜ ಅಜ್ಜಿಯರ ಒಡನಾಟ, ಪ್ರೀತಿ ಕುರಿತ ನಾಟಕ ಪ್ರಸ್ತುತಪಡಿಸಿದರು. ವಿದ್ಯಾರ್ಥಿಗಳು ನೃತ್ಯ ಮಾಡಿದರು. ಅಜ್ಜ ಅಜ್ಜಿಯರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಮೊಮ್ಮಕಳಿಗೆ ಎರಡನೇ ಪೆÇೀಷಕರಾಗಿ ಜವಾಬ್ದಾರಿ ಹೊಂದಿರುವ ಕುರಿತು ತಿಳಿಸಿದರು.
ಶಿಕ್ಷಕಿ ಅರುಣಾ ಹಾಗೂ ಅರ್ಷದ್ ಅವರು ಅಜ್ಜ ಅಜ್ಜಿಯರಿಗೆ ಪಾಸಿಂಗ ಬಾಲ್,ಸ್ಟ್ರಾ ಪಿಕ ಪೇಪರ್ ಆಟಗಳನ್ನು ಆಡಿಸಿದರು. ವಿಜೇತರಿಗೆ ಪ್ರಾಂಶುಪಾಲರು ಬಹುಮಾನಗಳನ್ನು ನೀಡಿದರು. ಅಜ್ಜ ಅಜ್ಜಿಯರ ಪಾತ್ರ ಹಿರಿದಾಗಿದೆ.ನಿಮ್ಮ ಕೊಡುಗೆ ಅಪಾರ ಎಂದು ಪ್ರಾಚಾರ್ಯರು ಕೊಂಡಾಡಿದರು.
ಹಿಮಾಂಶು ಶೈನಿ, ಅಪರ್ಣಾ, ಸುಷ್ಮಾ, ಶ್ರೀಶಾ, ಕರಿಷ್ಮಾ, ಅಶ್ವಿನಿ, ರೇಣಾಕಾ ಎಲ್ಲಾ ಶಿಕ್ಷಕರಿದ್ದರು. ಶಿಕ್ಷಕ ಕಲ್ಯಾಣಪ್ಪ ಅವರು ನಿರೂಪಿಸಿದರು. ಲಕ್ಷ್ಮೀಕಾಂತ ಅಜ್ಜಅಜ್ಜಿ ಸ್ವರಚಿತ ಗೀತೆಯೊಂದಿಗೆ ವಂದಿಸಿದರು.