
ನಿಡಗುಂದ: ಚಿಂಚೋಳಿ ತಾಲೂಕಿನ ಹಲಕೋಡ ಗ್ರಾಮದ ಶ್ರೀ ಸಿದ್ದೇಶ್ವರ ದೇವರ ಜಾತ್ರೆಯು ಪ್ರತಿ ವರ್ಷದಂತೆ ಈ ವರ್ಷವೂ ಕೂಡ ನಡುವಿನ ಸೋಮವಾರ ಜಾತ್ರೆ ಜರಗಿತು ಜಾತ್ರೆ ಅಂಗವಾಗಿ ಶ್ರೀ ಸಿದ್ದೇಶ್ವರ ದೇವಾಲಯದಲ್ಲಿ ಭಾನುವಾರ ರಾತ್ರಿ ಹಲಕೋಡ ಗ್ರಾಮಸ್ಥರಿಂದ ಭಜನೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು ಸೋಮವಾರ ಬೆಳಗ್ಗೆ 5:00ಗೆ ಶ್ರೀ ಸಿದ್ದೇಶ್ವರ ದೇವರ ರುದ್ರಾಭಿಷೇಕ ಕಾರ್ಯಕ್ರಮ ಜರಗಿತು ನಂತರ ಬೆಳಗ್ಗೆ 9:00 ಗಂಟೆಗೆ ಹಲಕೋಡ ಗ್ರಾಮದ ವೀರೇಶ್ ಮಠಪತಿ ಸ್ವಾಮಿ ಅವರ ಮನೆಯಿಂದ ಶ್ರೀ ಸಿದ್ದೇಶ್ವರ ದೇವಾಲಯದ ವರೆಗೂ ಪಲ್ಲಕ್ಕಿ ಉತ್ಸವ ಜರಗಿತು ಪಲ್ಲಕ್ಕಿ ಮೆರವಣಿಗೆಯಲ್ಲಿ ಅನೇಕ ಪುರಂದರು ಮತ್ತು ಭಜನೆ ತಂಡದವರು ಭಾಜ ಬಜಂತ್ರಿಯವರು ಅನೇಕ ಭಕ್ತರು ಪಲ್ಲಕ್ಕಿ ಉತ್ಸವದಲ್ಲಿ ಭಾಗಿಯಾಗಿದ್ದರು ನಂತರ 11 ಗಂಟೆಯಿಂದ ಜಾತ್ರೆಗೆ ಬಂದ ಭಕ್ತರಿಗೆ ಪ್ರಸಾದ ವಿತರಣೆ ಮಾಡಿದರು ಜಾತ್ರೆ ಕಾರ್ಯಕ್ರಮದಲ್ಲಿ ಅನೇಕ ಸಾವಿರಾರು ಜನಸಂಖ್ಯೆಯಲ್ಲಿ ಭಕ್ತರು ಬಂದು ಹಲಕೋಡ ಶ್ರೀ ಸಿದ್ದೇಶ್ವರ ದೇವರ ದರ್ಶನನ್ನು ಪಡೆದರು






























