ವಿರಕ್ತ ಅಜ್ಜನ ಮೂರ್ತಿಯ ಭವ್ಯ ಶೋಭಾಯಾತ್ರೆ ; ಪ್ರತಿಷ್ಠಾಪನೆ

ಪ್ರವೀಣ್ ಘೋರ್ಪಡೆ
ತಾಳಿಕೋಟೆ:ಜೂ.೩೦: ಪಟ್ಟಣದ ಶ್ರೀ ಖಾಸ್ಗತೇಶ್ವರ ಮಠದ ಲಿಂಗೈಕ್ಯ ಶ್ರೀ ವಿರಕ್ತ ಮಹಾಸ್ವಾಮಿಗಳ ಮೂರ್ತಿ ಭವ್ಯ ಮೆರವಣಿಗೆಯ ಮೂಲಕ ಭಕ್ತಾಧಿಗಳು ಶ್ರೀ ಖಾಸ್ಗತ ನಾಮಾಂಕಿತ ಜಪಿಸುವದರೊಂದಿಗೆ ಶ್ರೀಮಠಕ್ಕೆ ಆಗಮಿಸಿ ಶ್ರೀಮಠದ ಆವರಣದಲ್ಲಿ ರವಿವಾರರಂದು ಮೂರ್ತಿ ಪ್ರತಿಷ್ಠಾಪಿಸಲಾಯಿತು.
ಪಟ್ಟಣದ ಮಿಣಜಗಿ ಕ್ರಾಸ್‌ನಲ್ಲಿರುವ ಕೌಟಿಲ್ಯ ಅಕಾಡೆಮಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರಾಜು ಸಜ್ಜನ ಹಾಗೂ ಶಿಕ್ಷಕ ಅಶೋಕ ಸಜ್ಜನ ಅವರ ಕುಟುಂಭಸ್ಥರ ನೇತೃತ್ವದಲ್ಲಿ ಸಿದ್ದಗೊಂಡಿರುವ ಶ್ರೀ ವಿರಕ್ತ ಮಹಾಸ್ವಾಮಿಗಳ ಭವ್ಯ ಮೂರ್ತಿಯನ್ನು ತಾಳಿಕೋಟೆಯ ಶ್ರೀ ಬಸವೇಶ್ವರ ವೃತ್ತ ಕರೆತರಲಾಯಿತು. ನಂತರ ಶ್ರೀಮಠದ ಬಾಲ ಶಿವಯೋಗಿ ಶ್ರೀ ಸಿದ್ದಲಿಂಗ ದೇವರು ವಿರಕ್ತಶ್ರೀಗಳ ಮಹಾ ಮೂರ್ತಿಗೆ ಪುಷ್ಪಹಾರ ಹಾಕಿ ಗೌರವಿಸುವದರೊಂದಿಗೆ ಬರಮಾಡಿಕೊಂಡು ಭವ್ಯ ಶೋಭಾಯಾತ್ರೆಗೆ ಚಾಲನೆ ನೀಡಿದರು.
ಮೇರವಣಿಗೆಯಲ್ಲಿ ಬಾಜಾ ಭಜಂತ್ರಿ ಅಲ್ಲದೇ ಯುವ ಸಮೂಹದ ಬೈಕ್ ರ‍್ಯಾಲಿ ಶ್ರೀ ಖಾಸ್ಗತ ಎಂಬ ಜಯ ಘೋಷಗಳು ಗಮನ ಸೇಳೆದವಲ್ಲದೇ ಮೇರವಣಿಗೆಯು ಬಸ್ ನಿಲ್ದಾಣದ ಮುಂಭಾಗದ ರಸ್ತೆಗುಂಟಾ ಹಾಯ್ದು, ಮಹಾರಾಣಾಪ್ರತಾಪ ಸರ್ಕಲ್, ಶಿವಾಜಿ ಮಹಾರಾಜ ಸರ್ಕಲ್, ವಿಠ್ಠಲ ಮಂದಿರ ರಸ್ತೆ, ಕತ್ರಿ ಭಜಾರ ಮೂಲಕ ಶ್ರೀ ಖಾಸ್ಗತೇಶ್ವರ ಮಠಕ್ಕೆ ತಲುಪಿತು.
ನಂತರ ಭಕ್ತಾಧಿಗಳು ಸಿದ್ದಲಿಂಗಶ್ರೀಗಳ ನೇತೃತ್ವದಲ್ಲಿ ಶ್ರೀಮಠದ ಆವರಣದಲ್ಲಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು.
ಮೇರವಣಿಗೆಯ ನೇತೃತ್ವವನ್ನು ಪಟ್ಟಣದ ಮುಖಂಡರುಗಳು, ಶ್ರೀ ಖಾಸ್ಗತೇಶ್ವರ ಮಠದ ಭಕ್ತಾಧಿಗಳು, ಯುವಕರು, ಹಾಗೂ ಸಜ್ಜನ ಪರಿವಾರದ ಕುಟುಂಭಸ್ಥರು ವಹಿಸಿದ್ದರು.