
ಬೀದರ್: ಫೆ.20:ಜೈ ಭಾರತ ಮಾತಾ ರಾಷ್ಟ್ರೀಯ ಸೇವಾ ಸಮಿತಿಯು ಅಲಂಕೃತ ವಾಹನದಲ್ಲಿ ಶಿವಾಜಿ ಮಹಾರಾಜರ ಭಾವಚಿತ್ರದ ಭವ್ಯ ಮೆರವಣಿಗೆಯೊಂದಿಗೆ ಶಿವಾಜಿ ಮಹಾರಾಜರ ಜಯಂತಿಯನ್ನು ನಗರದಲ್ಲಿ ಗುರುವಾರ ಅರ್ಥಪೂರ್ಣವಾಗಿ ಆಚರಿಸಿತು.
ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ಹವಾ ಮಲ್ಲಿನಾಥ ಮಹಾರಾಜರ ನೇತೃತ್ವದಲ್ಲಿ ಮಲ್ಕಾಪುರ ಸಮೀಪದ ಭಾವಲಿಂಗ ಆಶ್ರಮದಿಂದ ನಗರದ ಪ್ರಮುಖ ಬೀದಿಗಳ ಮೂಲಕ ನೌಬಾದ್ ಬಳಿಯ ಔದುಂಬರಲಿಂಗ ಆಶ್ರಮದ ವರೆಗೆ ಮೆರವಣಿಗೆ ನಡೆಸಲಾಯಿತು.
ಮೆರವಣಿಗೆ ಉದ್ದಕ್ಕೂ ಅಲ್ಲಲ್ಲಿ ಪಟಾಕಿಗಳನ್ನು ಸಿಡಿಸಲಾಯಿತು. ಶಿವಾಜಿ ಮಹಾರಾಜರಿಗೆ ಜಯವಾಗಲಿ ಎನ್ನುವ ಘೋಷಣೆಗಳನ್ನು ಕೂಗಲಾಯಿತು. ಸಾರ್ವಜನಿಕರಿಗೆ ಪ್ರಸಾದ, ನೀರಿನ ಬಾಟಲಿ ವಿತರಿಸಲಾಯಿತು. ಮಾರ್ಗ ಮಧ್ಯೆ ಇರುವ ವೃತ್ತಗಳ ಮೂರ್ತಿಗಳಿಗೆ ಹವಾ ಮಲ್ಲಿನಾಥ ಮಹಾರಾಜರು ಮಾಲಾರ್ಪಣೆ ಮಾಡಿ ಗೌರವಿಸಿದರು.
ಮಾತೆ ಭಾಗೀರಥಿ, ಜೈ ಭಾರತ ಮಾತಾ ರಾಷ್ಟ್ರೀಯ ಸೇವಾ ಸಮಿತಿಯ ಭಾಲ್ಕಿ ತಾಲ್ಲೂಕು ಅಧ್ಯಕ್ಷ ಪಪ್ಪು ಪಾಟೀಲ ಖಾನಾಪುರ, ಶಿವಕುಮಾರ ಮದನೂರು, ಗಂಗಾಧರ ಶಾಸ್ತ್ರಿ, ಸಾಯಿಕುಮಾರ ಶಾಸ್ತ್ರಿ, ಗುರುಸಿದ್ದಪ್ಪ, ರಾಜಕುಮಾರ, ಮಾಣಿಕ ಮೇತ್ರೆ, ಅನಿಲ್ ಭಾಲ್ಕಿ, ಗಣಪತಿ, ಭಗವಾನ್, ವಿಲಾಸ್, ಗುರುನಾಥ, ರವಿ ಮಲ್ಕಾಪುರ, ಚಂದ್ರಕಾಂತ, ಸಂದೇಶ್ ಪವಾರ್, ನಾಗೇಶ ಬೇಮಳಖೇಡ, ಸಂಗಮೇಶ, ವೀರಶೆಟ್ಟಿ ಕೊಳಾರ, ಮಲ್ಲು, ರಿಷಿಕಾಂತ, ಮಂಜುನಾಥ ಬೇಮಳಖೇಡ, ಅಮರ, ವಿಷ್ಣುಕಾಂತ, ಉಮೇಶ, ಸಿದ್ಧಾರ್ಥ್ ತಲ್ವಾರೆ, ದತ್ತು, ಸತೀಶ್ ಪಾಟೀಲ, ಲೋಕೇಶ್, ಪ್ರಣವ್ ಮತ್ತಿತರರು ಪಾಲ್ಗೊಂಡಿದ್ದರು.



























