
ಸೇಡಂ, ಡಿ, 03: ತಾಲೂಕಿನ ಕೋನಾಪೂರ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಕಲಿತಿರುವ 1962 ರಿಂದ 2024 ರ ಸಾಲಿನ ಎಲ್ಲಾ ಹಳೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಶಾಲೆಯಲ್ಲಿ ಸರಸ್ವತಿ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಗ್ರಾಮದಲ್ಲಿ ಮೂರ್ತಿಯ ಭವ್ಯ ಮೆರವಣಿಗೆ ವಿಜೃಂಭಣೆಯಿಂದ ಜರುಗಿತ್ತು. ಭವ್ಯ ಮೆರವಣಿಗೆಯಲ್ಲಿ ವಾದ್ಯ ಸಂಗೀತದೊಂದಿಗೆ ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಗಳು, ಈ ವೇಳೆಯಲ್ಲಿ ರಾಕೇಶ್ ಕುಮಾರ್, ವೆಂಕಟೇಶ್ ಅಂಬಾಟಿ ,ಕಾಶಿನಾಥ್ ಕ್ಲಸ್ಟರ್ ಶಾಲೆಯ ಎಲ್ಲಾ ಮುಖ್ಯ ಗುರುಗಳು ಹಾಗೂ ಸಹ ಶಿಕ್ಷಕರು ಅಶೋಕ್ ಅಂಬಾಟಿ ಅಧ್ಯಕ್ಷರು, ಗೌರವ ಅಧ್ಯಕ್ಷರು ಶ್ರೀನಿವಾಸ್ ಜೋಗಿ, ಹಳೆಯ ವಿದ್ಯಾರ್ಥಿಗಳ ಸಂಘ ಹಾಗೂ ಗ್ರಾಮದ ಎಲ್ಲಾ ಹಳೆಯ ವಿದ್ಯಾರ್ಥಿಗಳು, ಗ್ರಾಮ ಪಂಚಾಯತ್ ಪಿಡಿಓ ದೇವಿಂದ್ರ ನಾಯಕ್ ಗ್ರಾಮ ಪಂಚಾಯತ್ ಸದಸ್ಯರಾದ ರಾಮುಲು ಯಾದವ್,ಶ್ರೀನಿವಾಸ್ ಕಂದೂರ್, ಪಾರ್ವತಿ ಶರಣಪ್ಪ, ಶಂಕರ್ ನಾಯಕ್, ಲಕ್ಷ್ಮಿ ಲಕ್ಷಮಪ್ಪ ಬೋಯೀನ್,ಯಂಕಟಮ್ಮ ಮೊಗಲಪ್ಪಾ ಗ್ರಾಮದ ಶಿಕ್ಷಣ ಪ್ರೇಮಿಗಳಾದ ರಮೇಶ್ ಕಂದೂರ್,ಶ್ರೀನಿವಾಸ್ ಕುಲಕರ್ಣಿ, ಭೀಮಶಪ್ಪ ದ್ಯಾವನ್ ಬೋಯಿನ್, ಚಂದ್ರಪ್ಪ ಅಂಬಾಟಿ, ನಾರಾಯಣ ಕಲಾಲ್. ಅಂಗವನವಾಡಿ ಕಾರ್ಯಕರ್ತೆಯರು, ಶಾಲೆಯ ಪಾಲಕ ಹಾಗು ಪೆÇೀಷಕರು ಹಿರಿಯ ವ್ಯಕ್ತಿಗಳು ವಿದ್ಯಾರ್ಥಿಗಳು ಭಾಗವಹಿಸಿದರು.

























