
ತಾಳಿಕೋಟೆ:ಮೇ.೨೨: ಇತ್ತೀಚಗೆ ಜರುಗಿದ ಭಾರತ ಮತ್ತು ಪಾಕಿಸ್ಥಾನ ಯುದ್ದದಲ್ಲಿ ನೇರವಾಗಿ ಭಯೋತ್ಪಾದಕರ ಉದ್ದಟತನವನ್ನು ಗುರುತಿಸಿಕೊಂಡ ಭಾರತೀಯ ಸೈನ್ಯ ಉದ್ದಟತನ ಪ್ರದರ್ಶಿಸಿದ ಭಯೋತ್ಪಾದಕರನ್ನೇ ಗುರಿಯನ್ನಾಗಿಟ್ಟುಕೊಂಡು ಅವರ ಇಡೀ ವಂಶವನ್ನೇ ನಾಶ ಮಾಡಲು ಸಿದ್ದರಾದ ಸೈನ್ಯ ಪ್ರಧಾನಿ ನರೇಂದ್ರ ಮೋದಿ ಅವರು ಸೈನ್ಯಕ್ಕೆ ನೀಡಿದಂತಹ ವಾಗ್ದಾನವೇ ಕಾರಣವಾಯಿತು ಮೋದಿ ಅವರು ಮಾಡಿದ ವಾಗ್ದಾನ ಸಾಮಾನ್ಯವಲ್ಲಾ ಇದು ಭಾರತೀಯ ದೇಶ ಅಷ್ಟೇ ಅಲ್ಲಾ ನರಮೇದದಂತಹ ಕಾರ್ಯವೆಸಗಿದ ಭಯೋತ್ಪಾದಕರನ್ನು ಮುಟ್ಟುಗೋಲು ಹಾಕಿ ನಮ್ಮ ದೇಶದ ಸಿಂಧೂರ ರಕ್ಷಣೆಗೆ ಮೋದಿ ಅವರು ಮುಂದಾಗಿರುವದನ್ನು ನೋಡಿದರೆ ಭಾರತ ಮಾತೆಯೂ ಹೆಮ್ಮೆಯ ಪುತ್ರನನ್ನು ನೀಡಿದ್ದಾಳೆಂಬುದು ಇಡೀ ನಮ್ಮ ದೇಶದ ಜನತೆಗೆ ಗೊತ್ತಾಗಿದೆ ಎಂದು ಮಾಜಿ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಅವರು ನುಡಿದರು.
ಬುಧವಾರರಂದು ಪಟ್ಟಣದ ಶ್ರೀ ವಿಠ್ಠಲ ಮಂದಿರದಲ್ಲಿ ಇದೇ ದಿ.೨೬ ಸೋಮವಾರರಂದು ಯುದ್ದದಲ್ಲಿ ಜಯ ಸಾದಿಸುವದರೊಂದಿಗೆ ಭಯೋತ್ಪಾದಕರನ್ನು ಭಾರತೀಯ ಸೈನ್ಯದವರು ನಿರ್ಮೂಲನೆ ಮಾಡಿದಕ್ಕೆ ಹರ್ಷೋದ್ಗಾರಕ್ಕಾಗಿ ಪಟ್ಟಣದಲ್ಲಿ ತಿರಂಗಾ ದ್ವಜಗಳ ಭವ್ಯ ಮೆರವಣಿಗೆ ಜರುಗಿಸುವ ಕುರಿತು ಕರೆಯಲಾದ ಪಕ್ಷಬೇದ ಮರೆತ ಹಾಗೂ ಜಾತಿ ಬೇದ ಮರೆತ ಜರುಗಿದ ಪೂರ್ವ ಭಾವಿ ಸಭೆಯಲ್ಲಿ ಮಾತನಾಡುತ್ತಿದ್ದ ಅವರು ರಾಷ್ಟçದ ಬದ್ದತೆಗಾಗಿ ನಮ್ಮ ನಾಗರಿಕರು ಸಜ್ಜಾಗಬೇಕಾಗಿದೆ ಭಾರತದಲ್ಲಿ ಭಯೋತ್ಪಾದನೆಯನ್ನು ಅಟ್ಟಡಗಿಸುತ್ತೇವೆಂಬ ಭಾವನೆ ನಮ್ಮೇಲ್ಲರಲ್ಲಿ ಬರಬೇಕಾಗಿದೆ ಈ ಕುರಿತು ಘೋಷಣೆಯೊಂದಿಗೆ ತಿರಂಗಾ ಯಾತ್ರೆ ಜರುಗಲಿದೆ ಎಂದರು. ರಾಷ್ಟçದ ಹಿರಿಯರು ತಿರ್ಮಾನಿಸಿದಂತೆ ರಾಷ್ಟಿçÃಯ ಜಾಗೃತಿಗಾಗಿ ಎಲ್ಲ ಗ್ರಾಮಗಳ ಮತ್ತು ಪಟ್ಟಣಗಳಲ್ಲಿಯ ಯಾವುದೇ ಜಾತಿ ಬೇದವಿಲ್ಲದೇ ಈ ಒಂದು ಕಾರ್ಯಕ್ರಮದಲ್ಲಿ ಮುಂದಾಗಬೇಕಾಗಿದ್ದು ಈ ಕುರಿತು ಎಲ್ಲರೂ ಒಗ್ಗೂಡುವ ಕಾರ್ಯಕ್ಕಾಗಿ ಜಾಗೃತಿ ಮೂಡಿಸಬೇಕೆಂದು ದೇಶಾಭಿಮಾನಿಗಳಿಗೆ ಸಲಹೆ ನೀಡಿದರು.
ಈಗಾಗಲೇ ಮುದ್ದೇಬಿಹಾಳದಲ್ಲಿ ಜರುಗಿದ ತಿರಂಗಾ ಯಾತ್ರೆ ಯಶಸ್ವಿಯಾಗಿ ಜರುಗಿದ್ದು ವಿವಿಧ ರಂಗದಲ್ಲಿದ್ದವರಿಗೆ ಸೇನೆಯಲ್ಲಿ ಸೇವೆಗೆ ಮುಂದಾಗಿದ್ದ ಸೈನಿಕರ ಕುಟುಂಬದವರಿಗೆ ಸನ್ಮಾನಿಸಿ ಗೌರವಿಸುವಂತಹ ಕಾರ್ಯವನ್ನು ಮಾಡಲಾಗಿದೆ ಈ ಕುರಿತು ತಾಳಿಕೋಟೆ ಭಾಗದಲ್ಲಿಯೂ ಕೂಡಾ ಪಕ್ಷಾತೀತವಾಗಿ ಹಾಗೂ ಹಿಂದೂ ಮುಸ್ಲಿಂ ಎನ್ನದೇ ಬೇದ ಭಾವವಿಲ್ಲದೇ ಈ ತಿರಂಗಾ ಯಾತ್ರೆಯಲ್ಲಿ ಪಾಲ್ಗೊಳ್ಳಬೇಕೆಂದರು. ಅಬ್ದುಲ್‌ಕಲಾಂ ಅವರು ದೇಶಕ್ಕಾಗಿ ಮಾಡಿದಂತಹ ಸೇವೆ ಹಾಗೂ ಯುದ್ದ ಸಮಯದಲ್ಲಿ ಏನೇನು ಬೇಕು ಎನ್ನುವ ಕುರಿತು ಸಹ ಆ ಸಾಮಗ್ರಿಗಳನ್ನು ಸಂಗ್ರಹಣೆ ಮಾಡಿ ಇಟ್ಟುಕೊಂಡAತಹ ವಿಷಯವನ್ನು ಪ್ರಸ್ಥಾಪಿಸಿದ ಎ.ಎಸ್.ಪಾಟೀಲರು ಈಗ ನಮ್ಮ ಉದ್ದೇಶ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಉದ್ದೇಶ ಪಾಕಿಸ್ಥಾನವನ್ನು ಹಾಳು ಮಾಡುವಂತಹದಲ್ಲಾ ನಮ್ಮ ಮೇಲೆ ದಾಳಿ ಮಾಡಿದ ಭಯೋತ್ಪಾದಕರನ್ನು ನಾಶ ಮಾಡುವಂತಹದ್ದಾಗಿದೆ ಎಂದರು. ಈಗಾಗಲೇ ಪಾಕಿಸ್ಥಾನವು ಭಾರತದ ಜೊತೆ ಎರಡು ಸಲ ತನ್ನ ಚಾಳಿಯನ್ನು ತೋರಿಸಿದೆ ೩ನೇ ಸಲ ನರೇಂದ್ರ ಮೋದಿ ಅವರು ೧೪೦ ಕೋಟಿ ಜನತೆಯೇ ನನ್ನ ಕುಟುಂಭವೆAದು ಭಾವಿಸಿದ್ದಾರೆ ಈ ಕಾರಣದಿಂದಲೇ ೨೬ ಜನ ಮಹಿಳೆಯರ ಸಿಂಧೂರ ಅಳಿಸಿದ ಭಯೋತ್ಪಾದಕರಿಗೆ ಈಗಾಗಲೇ ತಕ್ಕ ಪಾಠ ಕಲಿಸಲಾಗಿದೆ ಅಲ್ಲದೇ ಅವರ ತರಬೇತಿ ಸೇಂಟರ್‌ನ್ನೂ ಕೂಡಾ ಒಡೆದು ನಾಶ ಮಾಡಲಾಗಿದೆ ಆದರೂ ಕೂಡಾ ಇನ್ನೂ ಅವರು ಎಲ್ಲೇಲ್ಲಿ ಅಡಗಿದ್ದಾರೆಂಬ ಮಾಹಿತಿಯೂ ಕೂಡಾ ಸಂಗ್ರಹಿಸುತ್ತಾ ಅವರ ಹುಟ್ಟಡಗಿಸುವ ಕಾರ್ಯ ಮುಂದುವರೆದಿದೆ ಎಂದರು.
ಯುದ್ದ ಅಂದರೆ ವಿಶ್ವದಲ್ಲಿ ಭಾರತ ಹಿಂದೆ ಬಿಳ್ಳುವಂತಹದಲ್ಲಾ ಹೆಚ್ಚಾಗಿ ಶಾಂತಿಯನ್ನೇ ಬಯಸುವಂತಹ ದೇಶ ನಮ್ಮದಾಗಿದೆ ಎಂದರು. ಆದರೆ ನಮಗೆ ಯಾವ ದೇಶದವರಾಗಲಿ ತಡವಿ ಉದ್ದಟತನವನ್ನು ತೋರಿದರೆ ಎಂದಿಗೂ ಅವರನ್ನು ಬಿಡುವದಿಲ್ಲಾ ಇತ್ತೀಚಗೆ ನಡೆದ ಈ ಯುದ್ದಕ್ಕೆ ಕಾರಣ ಭಯೋತ್ಪಾದಕರ ಕೇಂದ್ರವನ್ನು ಒಡೆದು ಹಾಕುವ ಕೇವಲ ಉದ್ದೇಶ ಅಷ್ಟೇ ಆಗಿತ್ತು ಆದರೂ ಕೂಡಾ ಮೋದಿ ಅವರ ಈ ಒಂದು ಒಳ್ಳೆಯ ಕಾರ್ಯಕ್ಕೆ ಯರ‍್ಯಾರೋ ಏನೇನೋ ಮಾತನಾಡಿದರೂ ಅದಕ್ಕೆ ಬೆಲೆ ಕೊಡದೇ ಪ್ರಧಾನಿ ಸ್ಥಾನ ಅಲಂಕರಿಸಿದ ಮೇಲೆ ಪ್ರಧಾನಿ ಅವರೂ ಕೂಡಾ ರಕ್ಷಣಾ ಕಾರ್ಯಕ್ಕೆ ಅಗತ್ಯವಿದ್ದ ಶಸ್ತಾçಸ್ತçಗಳನ್ನು ಸಂಗ್ರಹಿಸಿ ಯಾರೂ ಕೂಡಾ ನಮ್ಮ ದೇಶದ ಹೆಸರನ್ನು ತೆಗೆಯದಂತೆ ಮುನ್ನೇಚ್ಚರಿಕೆ ವಹಿಸಿಕೊಂಡಿರುವದು ದೇಶದ ಹಿತ ಕಾಯುವಂತಹ ಕಾರ್ಯವಾಗಿದೆ ಎಂದರು.
ಹಿAದೂ ಬಾಂದವರಲ್ಲಿ ರಾಷ್ಟಿçÃಯ ಜಾಗೃತಿ ಎಂಬುದು ಹೆಚ್ಚಾಗಿರಲಿ ಕಾರಣ ರಾಷ್ಟçದ ಭದ್ರತೆಗಾಗಿ ಯಾವಾಗಲೂ ನಾಗರಿಕರು ಸಜ್ಜಾಗಿರಬೇಕೆಂದು ಹೇಳಿದ ಮಾಜಿ ಶಾಸಕ ನಡಹಳ್ಳಿ ಅವರು ಯುದ್ದದ ಸಾಮಗ್ರಿಗಳನ್ನು ಸಂಗ್ರಹಿಸಿಕೊAಡAತಹ ಆಯಾ ಸಾಮಗ್ರಿಗಳ ಕುರಿತು ವಿವರಣೆ ನೀಡಿದ ಅವರು ಈ ಸಲ ಭಯೋತ್ಪಾದಕರು ತಮ್ಮ ಉದ್ದಟತನ ಮುಂದುವರೆಸಿದರೆ ನಮ್ಮ ಸೈನಿಕರು ಸರ್ವ ನಾಶ ಮಾಡಲಿದ್ದಾರೆಂದರು.
ತಿರAಗಾ ಯಾತ್ರೆಯ ಮೇರವಣಿಗೆ : ಇದೇ ದಿ. ೨೬ ರಂದು ತಾಳಿಕೋಟೆ ಪಟ್ಟಣದಲ್ಲಿ ಜರುಗಲಿರುವ ತಿರಂಗಾ ಭವ್ಯ ಯಾತ್ರೆಯ ಮೆರವಣಿಗೆಯು ಪಕ್ಷಾತೀತವಾಗಿ ಹಿಂದೂ-ಮುಸ್ಲಿA ಎಂಬ ಜಾತಿ ಬೇದ ವಿಲ್ಲದೇ ಎಲ್ಲರೂ ಒಗ್ಗೂಡಿ ಶಿವಾಜಿ ಮಹಾರಾಜರ ವೃತ್ತದಿಂದ ರಾಷ್ಟç ದ್ವಜವನ್ನು ಕೈಯಲ್ಲಿ ಹಿಡಿದುಕೊಂಡು ಭಾರತ ಮಾತೆಯ ಜೈ ಘೋಷಣೆಗಳೊಂದಿಗೆ ಮದ್ಯಾಹ್ನ ೩ ಗಂಟೆಗೆ ಮೆರವಣಿಗೆಯು ಪ್ರಾರಂಭವಾಗಿ ರಾಣಾಪ್ರತಾಪ ಸರ್ಕಲ್, ಬಸ್ಟಾö್ಯಂಡ ಮಾರ್ಗ, ಬಸವೇಶ್ವರ ಸರ್ಕಲ್ ಮಾರ್ಗ, ಡಾ.ಬಿ.ಆರ್.ಅಂಬೇಡ್ಕರ ವೃತ್ತದ ಮೂಲಕ ಶರಣಮುತ್ಯಾರ ದೇವಸ್ಥಾನದ ಮುಂಭಾಗದ ರಸ್ತೆಗುಂಟಾ ಹಾಯ್ದು ಅಂಬಾಭವಾನಿ ಮಂದಿರ ರಸ್ತೆ, ಕತ್ರಿ ಭಜಾರ ಮಾರ್ಗವಾಗಿ ಬಾಲಾಜಿ ಮಂದಿರ ರಸ್ತೆ, ವಿಠ್ಠಲ ಮಂದಿರ ರಸ್ತೆಯ ಮೂಲಕ ಶಿವಾಜಿ ಮಹಾರಾಜರ ವೃತ್ತದಲ್ಲಿ ಈ ಭವ್ಯ ಮೆರವಣಿಗೆಯು ಸಭೆಯಾಗಿ ಮಾರ್ಪಡಲಿದೆ ಎಂದು ಈ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡ ಎಲ್ಲ ದೇಶಾಭಿಮಾನಿ ಯುವಕರು ನಿರ್ದರಿಸಿದರಲ್ಲದೇ ಇದೇ ಸಮಯದಲ್ಲಿ ವೇದಿಕೆಯ ಕಾರ್ಯಕ್ರಮದಲ್ಲಿ ದೇಶದ ಉನ್ನತಿಗಾಗಿ ದೇಶದ ರಕ್ಷಣೆ ಕುರಿತು ಇನ್ನೂ ಯಾವ ಯಾವ ತಿರ್ಮಾಣ ಕೈಕೊಳ್ಳಬೇಕೆಂಬ ಇಚ್ಚಿತ ಪ್ರಮುಖ ಭಾಷಣಕಾರರಿಂದ ಸಲಹೆ ಸೂಚನೆಗಳು ಹೊರಬಿಳಲಿವೆ ಎಂದು ಸಭೆಯಲ್ಲಿ ಪಾಲ್ಗೊಂಡ ದೇಶಾಭಿಮಾನಿ ಯುವಕರು ಒಕ್ಕೂರಲಿನಿಂದ ನಿರ್ಧರಿಸಿ ಮಾಹಿತಿ ನೀಡಿದರು.
ಈ ಸಮಯದಲ್ಲಿ ಜಿಪಂ ಮಾಜಿ ಸದಸ್ಯ ಬಸನಗೌಡ ವಣಕ್ಯಾಳ, ರಾಜು ಹಂಚಾಟೆ, ವಾಸು ಹೆಬಸೂರ, ಜೈಸಿಂಗ್ ಮೂಲಿಮನಿ, ಎಂ.ಎಸ್.ಸರಶೆಟ್ಟಿ, ರಾಜಣ್ಣ ಸೊಂಡೂರ, ಮಲ್ಲಿಕಾರ್ಜುನ ಹಿಪ್ಪರಗಿ, ಮಲ್ಲು ಮೇಟಿ, ಕಾಶಿನಾಥ ಮುರಾಳ, ಸಂಬಾಜಿ ಡಿಸಲೆ, ಶ್ರೀಪಾಲ ಸಂಗ್ಮಿ, ವಿಠ್ಠಲ ಮೋಹಿತೆ, ಮುದಕಣ್ಣ ಬಡಿಗೇರ, ರಾಘು ವಿಜಾಪೂರ, ರಾಘು ಮಾನೆ, ಸುದೀರ ದೇಶಪಾಂಡೆ, ಈಶ್ವರ ಹೂಗಾರ, ದ್ಯಾಮನಗೌಡ ಪಾಟೀಲ, ಶ್ರೀಮತಿ ಸುವರ್ಣಾ ಬಿರಾದಾರ, ದತ್ತು ಹೆಬಸೂರ, ರಾಜು ಅಲ್ಲಾಪೂರ, ಬಿ.ಜಿ.ಮದರಕಲ್ಲ, ಶ್ರೀಕಾಂತ ಪತ್ತಾರ, ಸಾಹೇಬಗೌಡ ಬಿರಾದಾರ, ಪರಶುರಾಮ ಕಟ್ಟಿಮನಿ, ಯಂಕಪ್ಪ ಗೊಲ್ಲರ, ಹಾಗೂ ಮಾಜಿ ಸೈನಿಕರು, ಮೊದಲಾದವರು ಉಪಸ್ಥಿತರಿದ್ದರು.