Home ಜಿಲ್ಲೆ ನಾಳೆ ಮುದ್ದೇಬಿಹಾಳದಲ್ಲಿ ಬಿಜೆಪಿ ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿಗೆ ಅದ್ದೂರಿ ಸನ್ಮಾನ

ನಾಳೆ ಮುದ್ದೇಬಿಹಾಳದಲ್ಲಿ ಬಿಜೆಪಿ ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿಗೆ ಅದ್ದೂರಿ ಸನ್ಮಾನ

ಮುದ್ದೇಬಿಹಾಳ: ಕರ್ನಾಟಕ ರಾಜ್ಯ ಭಾರತೀಯ ಜನತಾ ಪಕ್ಷದ ಕಾರ್ಯದರ್ಶಿ ಶರಣು ಬಿ. ತಳ್ಳಿಕೇರಿ ಅವರು ಇದೇ ದಿ. ೨೬ ಸೋಮವಾರರಂದು ಮುದ್ದೇಬಿಹಾಳಕ್ಕೆ ಆಗಮಿಸಲಿದ್ದು, ಈ ಸಂದರ್ಭದಲ್ಲಿ ಬಿಜೆಪಿ ಮುದ್ದೇಬಿಹಾಳ ಮಂಡಲದ ವತಿಯಿಂದ ಅದ್ದೂರಿ ಸ್ವಾಗತ ಹಾಗೂ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಮಂಡಲ ಪ್ರ.ಕಾರ್ಯದರ್ಶಿ ಸಂಗಮೇಶ ಗುಂಡಕನಾಳ(ನಾಗೂರ) ಅವರು ಹೇಳಿದರು.
ಶನಿವಾರರಂದು ಸ್ಥಳೀಯ ಪ್ರವಾಸಿ ಮಂದಿರದಲ್ಲಿ ಬಿಜೆಪಿ ಮಂಡಲದ ವತಿಯಿಂದ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಶರಣು ಬಿ. ತಳ್ಳಿಕೇರಿ ಅವರು ಮುದ್ದೇಬಿಹಾಳ ಮಾರ್ಗದಿಂದ ದೇವರಹಿಪ್ಪರಗಿ ಕ್ಷೇತ್ರಕ್ಕೆ ತೆರಳಲಿರುವ ಹಿನ್ನೆಲೆಯಲ್ಲಿ, ಹಿರಿಯ ನಾಯಕರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಹಾಗೂ ಪಕ್ಷದ ಸಂಘಟನೆಯನ್ನು ಬಲಪಡಿಸುವುದು, ಹಾಗೂ ಕಾರ್ಯಕರ್ತರಲ್ಲಿ ಒಗ್ಗಟ್ಟು ಮೂಡಿಸುವ ಉದ್ದೇಶದಿಂದ ತಾಲೂಕಿನ ಬಿಜೆಪಿ ಮುಖಂಡರು, ಪದಾಧಿಕಾರಿಗಳು ಹಾಗೂ ಹಿರಿಯ ಕಾರ್ಯಕರ್ತರು ಒಗ್ಗೂಡಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆಂದರು. .
ಅಕ್ಟೋಬರ್ ೨೬ ಸೋಮವಾರದÀಂದು ಪಟ್ಟಣದ ಪಿಲೇಕೆಮ್ಮ ಗುಡಿಯ ಮುಂಭಾಗದಲ್ಲಿ ಶರಣು ಬಿ. ತಳ್ಳಿಕೇರಿ ಅವರನ್ನು ಕರಡಿ ಮಜಲು ಹಾಗೂ ಡೊಳ್ಳು ಕುಣಿತದೊಂದಿಗೆ ಸ್ವಾಗತಿಸಿ ಸನ್ಮಾನಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ತಾಲೂಕಿನ ವಿವಿಧ ಗ್ರಾಮಗಳಿಂದ ಬೈಕ್‌ಗಳಲ್ಲಿ ಕಾರ್ಯಕರ್ತರು ಆಗಮಿಸಲಿದ್ದು, ಒಟ್ಟು ೨೫೦ ರಿಂದ ೩೦೦ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಪಿಲೇಕೆಮ್ಮ ಗುಡಿಯ ಮುಂಭಾಗದಿAದ ಆರಂಭವಾಗುವ ಮೆರವಣಿಗೆಯು ಬಸವೇಶ್ವರ ವೃತ್ತದವರೆಗೆ ಸಾಗಿ ಬಸವಣ್ಣನವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸಂಗೊಳ್ಳಿ ರಾಯಣ್ಣನವರಿಗೆ ಗೌರವ ಸಲ್ಲಿಸಲಾಗುತ್ತದೆ. ನಂತರ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿಯ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಅವರನ್ನು ಬಿಳ್ಕೊಡಲಾಗುವದೆಂದರು. .
ಈ ಸಮಯದಲ್ಲಿ ಮಹಿಳಾ ಮೋರ್ಚಾ ಅಧ್ಯಕ್ಷರಾದ ಸಂಗಮ್ಮ ದೇವರಳ್ಳಿ, ಬಿಜೆಪಿ ಮುಖಂಡರಾದ ಶಂಕರಗೌಡ ಶಿವಣಗಿ, ವಾಯ್.ಬಿ.ನಾಯ್ಕೋಡಿ, ಒಬಿಸಿ ಮೋರ್ಚಾ ಅಧ್ಯಕ್ಷರಾದ ವಾಯ್.ಟಿ.ಗೌಡರ, ಕಾರ್ಯದರ್ಶಿ ವಿರೇಶ ಜೋಗಂಡಬಾವಿ, ಪರಸು ಕೆಂಗುತ್ತಿ, ಲಕ್ಷö್ಮಣ ಬಿಜ್ಜೂರ, ರೈತಮೋರ್ಚಾ ಅಧ್ಯಕ್ಷರಾದ ಸಂಗಣ್ಣ ಹತ್ತಿ, ಉಪಾಧ್ಯಕ್ಷರಾದ ಸಂಗಪ್ಪ ಬಿಸಲದಿನ್ನಿ, ಪ್ರ.ಕಾರ್ಯದರ್ಶಿ ಹುಲಗಪ್ಪ ಕಿಲಾರಹಟ್ಟಿ, ಮಂಡಲ ಕಾರ್ಯದರ್ಶಿ ನಾಗೇಶ ಕವಡಿಮಟ್ಟಿ, ಶಿವರಾಜಗೌಡ ಬಿರಾದಾರ(ಕುಂಟೋಜಿ), ರಾಮನಗೌಡ ಪಾಟೀಲ, ಸಂತೋಷ ತಾಳಿಕೊಟೆ, ನರಸಮ್ಮ ಗುಬಚಿ, ಅಂಬರೀಶ ಕೂಡಲಗಿ, ಯಲ್ಲಾಲಿಂಗ ಕುರಿ ಮೊದಲಾದವರು ಉಪಸ್ತಿತರಿದ್ದರು.