ಸುವರ್ಣಗಿರಿಯಲ್ಲಿ ಗ್ರಾಮಸಭೆ

ಲಕ್ಷ್ಮೇಶ್ವರ,ಡಿ6: ತಾಲೂಕಿನ ಸೂರಣಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುವರ್ಣ ಗಿರಿ ಗ್ರಾಮದಲ್ಲಿ ಗ್ರಾಮಸಭೆ ಜರುಗಿತು.


ತಾಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಧರ್ಮರ ಕೃಷ್ಣಪ್ಪ ಅವರು ಸಭೆಯಲ್ಲಿ ಮಾತನಾಡಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಭರವಸೆ ಯೋಜನೆ ನೀಡಿ ಗ್ರಾಮದ ಅಭಿವೃದ್ಧಿಗೆ ಅನೇಕ ಕಾಮಗಾರಿಗಳನ್ನು ಕೈಗೊಳ್ಳಬಹುದಾಗಿದೆ.


ಗ್ರಾಮದಲ್ಲಿ ಸಿಸಿ ರಸ್ತೆ ಅಂಗನವಾಡಿ ಶಾಲಾ ಕಟ್ಟಡ ಕಾಂಪೌಂಡ್ ಸಿಡಿ ಹೀಗೆ ಅನೇಕ ಕಾಮಗಾರಿಗಳನ್ನು ಕೈಗೊಳ್ಳುವ ಮೂಲಕ ಗ್ರಾಮದ ಅಭಿವೃದ್ಧಿಗೆ ನರೇಗಾ ಯೋಜನೆ ಪೂರಕವಾಗಿದ್ದು ಸಾರ್ವಜನಿಕರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು ಅವರು ಸುವರ್ಣ ಗಿರಿ ಗ್ರಾಮ ಒಂದರಲ್ಲಿಯೇ 7 ಲಕ್ಷ ರೂಪಾಯಿ ತೆರಿಗೆ ಪಾವತಿ ಬರಬೇಕಾಗಿದ್ದು ಸಾರ್ವಜನಿಕರು ತೆರಿಗೆ ಹಣವನ್ನು ತುಂಬುವುದರಿಂದ ನೀರು ವಿದ್ಯುತ್ತು ಚರಂಡಿ ರಸ್ತೆ ಮುಂತಾದ ಕಾಮಗಾರಿಗಳಿಗೆ ಸಹಾಯಕವಾಗಲಿದ್ದು ಎಲ್ಲರೂ ತೆರೆಗೆ ಕಟ್ಟಬೇಕು ಎಂದು ಹೇಳಿದರು.


ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಂಕರಣ್ಣ ಶಿರನಹಳ್ಳಿ, ಸದಸ್ಯರಾದ ತುಕ್ಕಪ್ಪ ಪೂಜಾರ, ಮಲ್ಕಜ್ಜ ನಾಗಣ್ಣವರ, ಹಾಗೂ ಸಾರ್ವಜನಿಕರು ಮತ್ತು ಪಿಡಿಒ ಗೌರಮ್ಮ ರೋಣದ, ಕಾರ್ಯದರ್ಶಿ ಎಸ್ ಎಫ್ ಹಳಿಯಾಳ, ತಾಲೂಕ ಪಂಚಾಯತಿ ಟಿಐಇಸಿ ಮಂಜುನಾಥ ಸ್ವಾಮಿ, ಎಚ್. ಎಮ್. ಎನ್ ಆರ್ ಎಲ್ ಎಮ್ ಸಿಬ್ಬಂದಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ತಾಲೂಕ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.