
ಸೇಡಂ, ಜೂ 01: ತಾಲೂಕಿನ ಕುಕ್ಕುಂದಾ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ತೋಟ್ನಳ್ಳಿ ಗ್ರಾಮದಲ್ಲಿ ಆರ್ ಓ ಪ್ಲಾಂಟ್ (ಶುದ್ಧ ಕುಡಿಯುವ ನೀರಿನ ಘಟಕ) ಕಾಮಗಾರಿ ಈ ಮೊದಲು ಸರಕಾರಿ ಶಾಲೆಯ ಹತ್ತಿರ ನಿರ್ಮಿಸಲು ಗ್ರಾಮ ಪಂಚಾಯತ ಸಾಮಾನ್ಯ ಸಭೆಯಲ್ಲಿ ಎಲ್ಲಾ ಗ್ರಾಮ ಪಂಚಾಯತ ಸದಸ್ಯರ ಸರ್ವಾನುಮತದಿಂದ ನಿರ್ಧರಿಸಲಾಗಿತ್ತು. ಇದರಿಂದ ಗ್ರಾಮ ಎಲ್ಲಾ ಜನರಿಗೆ ಅನುಕೂಲ ವಾಗುತ್ತದೆಂದು ಭಾವಿಸಿದ್ದರು.ಆದರೆ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ಶ್ರೀಮತಿ ಮಮತಾ ಎಸ್. ಗೋಗಿ ಇವರು ಗ್ರಾಮ ಪಂಚಾಯತ ಸಾಮಾನ್ಯ ಸಭೆಯ ನಡವಳಿ ಬಿಟ್ಟು, ಊರಿನ ಅಗಸಿಯ ಹತ್ತಿರ ಹಳೆಯ ಕಟ್ಟಿ ಇದ್ದು, ಇದರ ಮೇಲೆ 3 ಇಂಚು ಬೇಡ್ ಹಾಕಿ,ಅಭಿವೃದ್ಧಿ ಅಧಿಕಾರಿ ಮತ್ತು ಗುತ್ತಿಗೆದಾರರು ಶಾಮೀಲಾಗಿ ಕಳಪೆ ಕಾಮಗಾರಿ ಮಾಡುತ್ತಿದ್ದಾರೆ.ಜನರ ಇಚ್ಛೆಯ ವಿರುದ್ಧ ಆರ್.ಓ ಪ್ಲಾಂಟ್ ಕಾಮಗಾರಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಗ್ರಾಪಂ ಸದಸ್ಯರಿಂದ ತಾಪಂ ಇಓ ಚನ್ನಪ್ಪ ರಾಯಣ್ಣನವರ ಅವರಿಗೆ ಮನವಿ ಪತ್ರ ಸಲ್ಲಿಸಿ ತಡೆಯುವಂತೆ ಒತ್ತಾಯಿಸಿದ್ದಾರೆ. ಈ ವೇಳೆಯಲ್ಲಿ ಗ್ರಾಮ ಪಂಚಾಯತ ಸದಸ್ಯರಾದ ಲಕ್ಷ್ಮೀಬಾಯಿ ಬಸಣ್ಣ ದೊಡ್ಡಮನಿ,ಮಹಾನಂದ ಶರಣಪ್ಪ ಪಂಚಾಕ್ಷರಿ,ಮಾಜಿ ಗ್ರಾ.ಪಂ. ಸದಸ್ಯರಾದ ವೀರಭದ್ರಪ್ಪ ಹುಣಚಳ್ಳಿ,ವೈಜನಾಥ ಮುದ್ದಾ,ಶಿವರಾಜ ಅಣ್ಣಪಗೋಳ,ದಶರಥ ಹಲಕಟ್ಟಿ ಹಾಗೂ ಗ್ರಾಮದ ಮುಖಂಡರು ಯುವಕರು ಇದ್ದರು.