ಗ್ರಾಪಂ ಸದಸ್ಯರ ಗೌರವಧನ ಚೆಕ್ ಗುಳುಂ: ಬಿಲ್ ಕಲೆಕ್ಟರ್ ಅಮಾನತು

ಕಾಳಗಿ,ಜೂ 21:ತಾಲೂಕಿನ ತೆಂಗಳಿ ಗ್ರಾಪಂ.ನಲ್ಲಿರುವ ಒಟ್ಟು 19 ಸದಸ್ಯರ ಗೌರವ ಧನಕ್ಕಾಗಿ ನೀಡಿರುವ 19 ಚೆಕ್ ಗಳನ್ನು ತಮ್ಮ ಹೆಸರಿಗೆ ಡ್ರಾ ಮಾಡಿಕೊಂಡ ಆರೋಪದಡಿ ಇಲ್ಲಿಯ ಬಿಲ್ ಕಲೆಕ್ಟರ್ ಮಲ್ಲಿಕಾರ್ಜುನ ಶಾಮರಾವ ತಳವಾರ ಅವರನ್ನುಅಮಾನತು ಮಾಡಿರುವುದು ಶುಕ್ರವಾರ ಬೆಳಕಿಗೆ ಬಂದಿದೆ.
ಗ್ರಾಪಂ.ಹಿಂದಿನ ಅಧ್ಯಕ್ಷೆ ಸುಮಿತ್ರ ಚೌವ್ಹಾಣ ಅವರ ದೂರಿನ ಮೆರೆಗೆ, ಈ ಸಿಬ್ಬಂದಿಯನ್ನು ಇಲಾಖಾ ವಿಚಾರಣೆ ನಡೆಸಿ, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕಿಲ್ಲದೆ ಹಣ ಡ್ರಾ ಮಾಡಿರುವುದಕ್ಕೆ ಬಿಲ್ ಕಲೆಕ್ಟರ್ ಮಲ್ಲಿಕಾರ್ಜುನ ತಳವಾರ ತಪೆÇ್ಪಪ್ಪಿಗೆ ಪತ್ರ ನೀಡಿದ್ದಾರೆ.
ಕಾರಣ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ಪ್ರಕರಣ 113(ಆ)ರನ್ವಯ ಕೂಡಲೇ ಕೆಲಸದಿಂದ ಅಮಾನತುಗೊಳಿಸಿ ಆದೇಶಿಸಿದೆ.
ಡಿಸಿಬಿ ರೆಜಿಸ್ಟರ್ ಹಾಗೂ ಪಿಒಎಸ್‍ಮಶೀನ್ ಸೇರಿ ಕಛೇರಿಗೆ ಸೇರಿದ ಎಲ್ಲಾ ದಾಖಲೆಗಳನ್ನು ಕಾರ್ಯಾಲಯಕ್ಕೆ ಒಪ್ಪಸಲು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ನೀಡಿರುವ 19ಗೌರವ ಧನ ಚೆಕ್ ಗಳಲ್ಲಿ, ಎರಡು ಚೆಕ್ ಗಳು ರಿಜೆಕ್ಟ್ ಆಗಿವೆ ಎಂದು ಸುಳ್ಳು ಹೇಳಿದ ಕರವಸೂಲಿಗಾರ ಮಲ್ಲಿಕಾರ್ಜುನ ಶಾಮರಾಯ ತಳವಾರ ಪಿಡಿಓ ಮತ್ತು ಅಧ್ಯಕ್ಷರ ಸಹಿ ಮಾಡಿಸಿಕೊಂಡು, ಕಾಂತಮ್ಮ ಫಕೀರಯ್ಯ ಕೊಣಿನ್ ಹೆಸರಿಗೆ 2,10,368 ರೂ ಮತ್ತು ನರಸಿಂಗ ಹಣಮಂತ ಹೆಸರಿಗೆ 1,11,618 ರೂ.ರೂಪಾಯಿಗಳನ್ನು ಗುಳುಂ ಮಾಡಿರುವುದಾಗಿ ಸದಸ್ಯರು ಸ್ಪಸ್ಟಪಡಿಸಿದರು.
ಗಾಂಧಿ ಗ್ರಾಮ ಪುರಸ್ಕಾರದ 5ಲಕ್ಷ ಮಂಗಮಾಯ:
ತೆಂಗಳಿ ಗ್ರಾಪಂ.ಗೆ ಸರಕಾರ ನೀಡಲಾಗಿರುವ ಗಾಂಧಿ ಗ್ರಾಮ ಪುರಸ್ಕಾರದ 5ಲಕ್ಷ ರೂಪಾಯಿ ಗೌರವ ಧನವನ್ನು ಸದ್ದಿಲ್ಲದೆ ಮಂಗಮಾಯ ಮಾಡಿರುವ ಬಿಲ್ ಕಲೆಕ್ಟರ್ ಎಲ್ಲರಿಗೂ ಚೆಳ್ಳೆ ಹಣ್ಣು ತಿನಿಸಿದ್ದ.ಮೇಲಾಧಿಕಾರಿಗಳಿಗೆ ದೂರು ಸಲ್ಲಿಸಿದ ಮೇಲೆ ಮತ್ತೆ ಖಾತೆಗೆ ಜಮಾ ಮಾಡಿದ್ದಾನೆಂದು ತೆಂಗಳಿ ಗ್ರಾಪಂ. ಹಾಲಿ ಅಧ್ಯಕ್ಷೆ ಗುಂಡಿಬಾಯಿ ರಾಠೋಡ ತಿಳಿಸಿದ್ದಾರೆ.
ಸರಕಾರಿ ಆಸ್ತಿ, ಸಾರ್ವಜನಿಕ ಸ್ಥಳಗಳು, ಶೌಚಾಲಯಗಳ ಸ್ಥಳ, ಕೊಂಡವಾಡಿ ಸೇರಿ ಖುಲ್ಲಾ ಇರುವ ಜಾಗಗಳನ್ನು ಬೇರೆಯವರಿಗೆ ಮೊಟೇಶನ್ ಮಾಡಿಕೊಡುವುದು ಸೇರಿ ಅನೇಕ ಅವ್ಯವಹಾರಗಳಿಂದ ಬೇಸತ್ತು ಹೋಗಿರುವ ಇಲ್ಲಿಯ ಗ್ರಾಪಂ.ಅಧ್ಯಕ್ಷ ಉಪಾಧ್ಯಕ್ಷ ರು ಮತ್ತು ಸದಸ್ಯರು ಸೇರಿಕೊಂಡು, ಶುಕ್ರವಾರ ಗ್ರಾಪಂ.ಕಾರ್ಯಾಲಯದಲ್ಲಿಯೇ ಸರಕಾರದಿಂದ ಬಂದಿರುವ ಅಮಾನತ್ತಿನ ಆದೇಶ ಪತ್ರವನ್ನು ಸ್ವತಃ ಕರವಸೂಲಿ ಮಲ್ಲಿಕಾರ್ಜುನ ಶಾಮರಾಯ ತಳವಾರ ಅವರಿಂದಲೇ ಓದಿಸಿ, ತಿಳಿಸಿ ಅಮಾನತ್ತು ಆದೇಶವನ್ನು ಗ್ರಾಪಂ.ತೆಂಗಳಿ ಪಿಡಿಓ ನೀಡಿದರು.
ಗ್ರಾಪಂ.ಅಧ್ಯಕ್ಷೆ ಗುಂಡಿಬಾಯಿ ರಾಠೋಡ, ಉಪಾಧ್ಯಕ್ಷ ವಿಜಕುಮಾರ ತುಪ್ಪದ, ಸದಸ್ಯರುಗಳಾದ ಭೀಮರಾವ ಮಾಲಿ ಪಾಟೀಲ, ಲಕ್ಷ್ಮಣ ರಾಠೋಡ, ಎಂ.ಡಿ ಮುಸ್ತಫಾ ಅಪಘಾನ, ವಿಜಯಲಕ್ಷ್ಮೀ, ದೇಸು ಚೌವ್ಹಾಣ, ಕಾಶಿಬಾಯಿ ಮಡಕಿ, ಜ್ಯೋತಿ ಮಠ, ಶ್ರೀ ದೇವಿ ಅರಜಂಬಗಾ, ಗೋರಿಬಿ ದಾದಾಮಿಯ್ಯ, ನಾಗರಾಜ ಕೇಶ್ವಾರ ಪಿಡಿಓ ಮಲ್ಲಿಕಾರ್ಜುನ ಶರ್ಮಾ ಉಪಸ್ಥಿತರಿದ್ದರು.