ಪದವಿ ಪ್ರದಾನ

ಹುಬ್ಬಳ್ಳಿ, ಅ7: ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯ ಅವ್ವಪ್ಪಣ್ಣ ಅತ್ತಿಗೇರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ 2025 ನೇ ಸಾಲಿನ ಪದವಿ ಪ್ರದಾನ ಮತ್ತು ಕಿರಿಯ ತರಬೇತುದಾರರಿಗೆ ಸ್ವಾಗತ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಉದ್ಯಮಿ ನಾಗರಾಜ ಯಲಿಗಾರ ಮತ್ತು ರವೀಂದ್ರ ಮುತ್ತಾಳ ಆಗಮಿಸಿದ್ದರು. ಸಭೆಯ ಅಧ್ಯಕ್ಷತೆಯನ್ನು ಆಡಳಿತ ಮಂಡಳಿಯ ಸದಸ್ಯರಾದ ಬಸವರಾಜ ತಾಳಿಕೋಟಿ ವಹಿಸಿದ್ದರು.


ಕಾರ್ಯಕ್ರಮದಲ್ಲಿ ಸಿಬ್ಬಂದಿಗಳಾದ ಶ್ರೀಮತಿ.ಸಾವಿತ್ರಿ ಪಾಟೀಲ, ಶ್ರೀಮತಿ ಮಂಜುಳಾ ಪುರದಣ್ಣವರ, ಶ್ರೀಮತಿ ಕವಿತಾ.ಎಚ್.ಪಾಟೀಲ, ಶ್ರೀಮತಿ. ಸ್ನೇಹಾ ವಾಲಗಳ್ಳಿ, ಶ್ರೀಮತಿ ಪ್ರಭಾವತಿ ದಾಸರ, ಸಿದ್ದನಗೌಡ ಪಾಟೀಲ, ಮಾಂತೇಶ ಮೂಲ್ಕಿಪಾಟೀಲ, ಎಲ್.ಕೆ. ಪಾಟೀಲ, ಕಿರಣ ಬಣಕಾರ, ಸೋಮಶೇಖರ ಕರಡಿಗುಡ್ಡ, ಮಹಾಂತೇಶ ಕ್ವಾಟಿ, ರಾಘವೇಂದ್ರ ಗುಡೆಣ್ಣವರ, ಮೃತ್ಯುಂಜಯ ಅಮರಗೋಳ, ಶ್ರೀಮತಿ.ನಿಂಗಮ್ಮ ಹೆಬ್ಬಳ್ಳಿ, ಪ್ರವೀಣ ಬಡಿಗೇರ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.