
ಕಲಬುರಗಿ:ನ.೧೮: ಇಡೀ ತಮ್ಮ ಜೀವನದುದ್ದಕ್ಕೂ ಕನ್ನಡ ನಾಡು-ನುಡಿ, ಏಕೀಕರಣಕ್ಕೆ ಶ್ರಮಿಸಿದ ಎಂ.ಗೋವಿAದ ಪೈ ಅವರು ಕನ್ನಡದ ಪ್ರಥಮ ರಾಷ್ಟçಕವಿಗಳು. ಕವಿತೆ, ಪ್ರಬಂಧ, ನಾಟಕ ಕ್ಷೇತ್ರಗಳಲ್ಲಿ ಅಮೋಘವಾದ ಸಾಹಿತ್ಯ ಕೃಷಿಯನ್ನು ಮಾಡಿದ ಪ್ರಸಿದ್ಧ ಸಾಹಿತಿ ಹಾಗೂ ಸಂಶೋಧಕರಾಗಿ ಕನ್ನಡಕ್ಕೆ ಅನನ್ಯವಾದ ಕೊಡುಗೆಯನ್ನು ನೀಡಿದ್ದಾರೆಂದು ಉಪನ್ಯಾಸಕ, ಲೇಖಕ ಎಚ್.ಬಿ.ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಆಳಂದ ರಸ್ತೆಯ ಸಂತೋಷ ಕಾಲನಿಯ ಕ್ರಾಸ್ ಸಮೀಪದ ‘ರಿಪಬ್ಲಿಕ್ ಸ್ಪೋಕನ್ ಇಂಗ್ಲೀಷ್ ಅಕಾಡೆಮಿ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗುತ್ತಿರುವ ರಾಜ್ಯೋತ್ಸವ ಮಾಸಾಚರಣೆಯ ಸರಣಿ ಉಪನ್ಯಾಸ-೧೫ರಲ್ಲಿ ‘ಕನ್ನಡದ ಪ್ರಥಮ ರಾಷ್ಟçಕವಿ ಎಂ.ಗೋವಿAದ ಪೈ ಅವರ ಕೊಡುಗೆ’ ವಿಶೇಷ ಉಪನ್ಯಾಸದಲ್ಲಿ ಅವರು ಮಾತನಾಡುತ್ತಿದ್ದರು.
ಪೈ ಅವರು ೬೨ ವರ್ಷಗಳ ಕಾಲ ನಿರಂತರವಾಗಿ ಸಾಹಿತ್ಯ ಸಂಶೋಧನೆ ಮಾಡಿ, ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ಅವರ ಕೃತಿಗಳು ವಿದ್ವತ್ಪೂರ್ಣ, ಪೌಢವೂ ಆಗಿವೆ. ಪ್ರಾಸವನ್ನು ಬಿಟ್ಟು ಹೊಸಗನ್ನಡದ ಪದ್ಯ ರಚನೆಗೆ ಹೊಸ ದಾರಿನ್ನು ಹಾಕಿಕೊಟ್ಟಿದ್ದಾರೆ. ‘ಗಿಳಿವಿಂಡು’, ‘ತಾಯಿ’, ‘ವೈಶಾಖಿ’, ‘ಚಿತ್ರಭಾನು’ ಸೇರಿದಂತೆ ೧೮೦ ಕೃತಿಗಳನ್ನು ರಚಿಸಿದ್ದಾರೆ. ‘ತನು ಕನ್ನಡ, ಮನ ಕನ್ನಡ, ನುಡಿ ಕನ್ನಡ, ನಡೆ ಕನ್ನಡ’ ಎಂದು ಹಾಡಿದ ಪೈ ಅವರ ವ್ಯಕ್ತಿತ್ವ ಘನವಾದುದ್ದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ದತ್ತು ಹಡಪದ, ಕಸಾಪ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗೆಪ್ಪಾ ಎಸ್.ಬಿರಾದಾರ ಹಾಗೂ ವಿದ್ಯಾರ್ಥಿಗಳಿದ್ದರು.























