ಭೋವಿ ಜನಾಂಗಕ್ಕೆ ನ್ಯಾಯ ಒದಗಿಸಿದ ಗೋವಿಂದ್ ಒಡೆಯರ್

ಕಲ್ಬುರ್ಗಿ:ನ.9: ಭೋವಿ ಜನಾಂಗವನ್ನು ಪರಿಶಿಷ್ಟ ಜಾತಿಗೆ ಸೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿ ನ್ಯಾಯ ಒದಗಿಸಿ ಕೊಟ್ಟವರು ಗೋವಿಂದ್ ಪಿ ಒಡೆಯರ್ ಎಂದು ವಿಧಾನಪರಿಷತ್ ವಿರೋಧ ಪಕ್ಷದ ಉಪನಾಯಕರಾದ ಶ್ರೀ ಸುನಿಲ್ ವಲ್ಲಾಪುರೆ ಹೇಳಿದರು. ಅವರು ಕಲ್ಬುರ್ಗಿ ಕೇಂದ್ರ ಬಸ್ ನಿಲ್ದಾಣ ಎದುರುಗಡೆ ಇರುವ ಸೆಂಟ್ರಲ್ ಮಾಲ್ ನಲ್ಲಿ ಆಯೋಜಿಸಿದ ಗೋವಿಂದ್ ಪಿ ಒಡೆಯರ್ ಭಾವಚಿತ್ರ ಪೂಜೆ ಮತ್ತು ಸ್ಮರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು ಮುಂದೆ ಸಮುದಾಯದವರೆಲ್ಲ ಒಗ್ಗಟ್ಟಾಗಿ ಸಂಘಟಿತರಾಗಿ ಸಮಾಜದ ಒಳಿತಿಗಾಗಿ ದುಡಿಯಿರಿ ನಿಮ್ಮ ಬೆಂಬಲಕ್ಕೆ ಸದಾ ಬೆನ್ನೆಲುಬಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು. ಅಧ್ಯಕ್ಷತೆ ಸ್ಥಾನವನ್ನು ಶ್ರೀ ಸಿದ್ದರಾಮ ದಂಡಗುಲ್ಕರ್ ವಹಿಸಿದ್ದರು. ಅತಿಥಿಗಳಾಗಿ ಡಾ. ಶರಣಪ್ಪ ಗುಂಡಗುರ್ತಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ಅಮರಯ್ಯ ಕುಮುಶಿ, ಕನಕಪ್ಪ, ಶ್ರೀ ರಾಜ ನರಸಪ್ಪ , ರಾಜು, ಈರಣ್ಣ , ರಮೇಶ್ ಪವಾರ್, ಶಾಂತ ರೆಡ್ಡಿ, ನಾಗೇಂದ್ರ ರಾವ್, ಗಣೇಶ್ ಪವಾರ್, ಭೀಮಾಶಂಕರ್ ಬಂಕೂರ್ ,ಶ್ರೀಕಾಂತ್, ಮೋಹನ್, ಸುಭಾಷ್, ವಿನೋದ್, ಯಲ್ಲಪ್ಪ, ಗುಂಡಪ್ಪ ಸೇರಿ ಸಮಾಜದ ಪ್ರಮುಖರು ಹಾಜರಿದ್ದರು.