Home ಜಿಲ್ಲೆ ಮಾದಕ ವಸ್ತು ಹಾಗೂ ಡಿಜಿಟಲ್ ಅಡಿಕ್ಷನ್ ವಿರುದ್ಧ ಸರ್ಕಾರದ ಕ್ರಮ ಸ್ವಾಗತಾರ್ಹ : ಡಾ.ಅಬ್ದುಲ್ ಖದಿರ್

ಮಾದಕ ವಸ್ತು ಹಾಗೂ ಡಿಜಿಟಲ್ ಅಡಿಕ್ಷನ್ ವಿರುದ್ಧ ಸರ್ಕಾರದ ಕ್ರಮ ಸ್ವಾಗತಾರ್ಹ : ಡಾ.ಅಬ್ದುಲ್ ಖದಿರ್

ಬೀದರ್, ಮಾ 8: ಕರ್ನಾಟಕ ಸರ್ಕಾರವು ರಾಜ್ಯ ಬಜೆಟ್‍ನಲ್ಲಿ ಮಾದಕ ವಸ್ತುಗಳ ಅಡ್ಡಿಕ್ಷನ್ ಹಾಗೂ ಡಿಜಿಟಲ್ ಅಡಿಕ್ಷನ್ ವಿರುದ್ಧ ಕೈಗೊಂಡಿರುವ ಕ್ರಮಗಳನ್ನು ಬೀದರ್ ನಾಗರಿಕ ಸನ್ಮಾರ್ಗ ಸಮಿತಿ ಹಾಗೂ ಜಿಲ್ಲೆಯ ವಿವಿಧ ನಾಗರಿಕ ಸಂಘಟನೆಗಳು ಸ್ವಾಗತಿಸಿವೆ ಎಂದು ಸಮಿತಿಯ ಅಧ್ಯಕ್ಷರಾದ ಡಾ. ಅಬ್ದುಲ್ ಖದೀರ್ ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಬೀದರ ಸನ್ಮಾರ್ಗ ಸಮಿತಿ ವತಿಯಿಂದ ಶನಿವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾದಕ ವಸ್ತುಗಳ ಬಳಕೆ ಮತ್ತು ಡಿಜಿಟಲ್ ಅಡಿಕ್ಷನ್ ಇಂದಿನ ಸಮಾಜದಲ್ಲಿ ಗಂಭೀರ ಸಾಮಾಜಿಕ ಹಾಗೂ ಸಾರ್ವಜನಿಕ ಆರೋಗ್ಯದ ಸಮಸ್ಯೆಗಳಾಗಿ ರೂಪುಗೊಂಡಿವೆ ಎಂದು ಹೇಳಿದರು.
ಯುವಕರು, ವಿದ್ಯಾರ್ಥಿಗಳು ಮತ್ತು ಕುಟುಂಬಗಳನ್ನು ವ್ಯಾಪಕವಾಗಿ ಪರಿಣಾಮಗೊಳಿಸುತ್ತಿರುವ ಈ ಸಮಸ್ಯೆಗಳನ್ನು ಸರ್ಕಾರ ಗುರುತಿಸಿ ಕ್ರಮ ಕೈಗೊಂಡಿರುವುದು ಸಮಯೋಚಿತ ಮತ್ತು ಶ್ಲಾಘನೀಯ ಹೆಜ್ಜೆಯಾಗಿದೆ ಎಂದು ಅಭಿಪ್ರಾಯಪಟ್ಟರು.
ಯುವಜನತೆಯಲ್ಲಿ ಮಾದಕ ವಸ್ತುಗಳ ಬಳಕೆ ಹೆಚ್ಚುತ್ತಿರುವುದು ಆತಂಕಕಾರಿ ವಿಷಯವಾಗಿದೆ. ವಿಶೇಷವಾಗಿ ಕೃತಕ (ಸಿಂಥೆಟಿಕ್) ಮಾದಕ ವಸ್ತುಗಳು ನಗರಗಳು, ಪಟ್ಟಣಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿಯೂ ಸುಲಭವಾಗಿ ಲಭ್ಯವಾಗುತ್ತಿರುವುದು ಪೆÇೀಷಕರು ಹಾಗೂ ಶಿಕ್ಷಣ ತಜ್ಞರಲ್ಲಿ ಚಿಂತೆ ಹೆಚ್ಚಿಸಿದೆ ಎಂದು ಹೇಳಿದರು. ಇದರ ಜೊತೆಗೆ ಮೊಬೈಲ್ ಫೆÇೀನ್, ಸಾಮಾಜಿಕ ಜಾಲತಾಣಗಳು ಮತ್ತು ಆನ್‍ಲೈನ್ ಗೇಮಿಂಗ್‍ಗಳ ಅತಿಯಾದ ಬಳಕೆಯಿಂದ ಉಂಟಾಗುವ ಡಿಜಿಟಲ್ ಅಡಿಕ್ಷನ್ ಮಕ್ಕಳ ಮತ್ತು ಕಿಶೋರರ ನಡುವೆ ವೇಗವಾಗಿ ಹೆಚ್ಚುತ್ತಿರುವ ಸಮಸ್ಯೆಯಾಗಿದೆ ಎಂದು ಅವರು ಹೇಳಿದರು. ದೀರ್ಘಕಾಲ ಪರದೆ ಬಳಕೆಯಿಂದ ಗಮನದ ಕೊರತೆ, ಆತಂಕ, ನಿದ್ರಾಹೀನತೆ, ಕಣ್ಣು ನೋವು, ತಲೆನೋವು ಹಾಗೂ ಸಾಮಾಜಿಕ ದೂರವಾಗುವಿಕೆ ಮುಂತಾದ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ ಎಂದು ತಿಳಿಸಿದರು.
ಸಂಘಟನೆಗಳು ಸರ್ಕಾರವನ್ನು ಶಾಲೆಗಳು, ಕಾಲೇಜುಗಳು ಹಾಗೂ ಶಿಕ್ಷಣ ಸಂಸ್ಥೆಗಳ ಸುತ್ತಮುತ್ತ ನಡೆಯುವ ಮಾದಕ ವಸ್ತುಗಳ ಮಾರಾಟ ಮತ್ತು ಸಂಬಂಧಿತ ಅಕ್ರಮ ಚಟುವಟಿಕೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿವೆ. ವಿದ್ಯಾರ್ಥಿಗಳನ್ನು ರಕ್ಷಿಸಲು ಕಠಿಣ ಕಾನೂನು ಕ್ರಮಗಳು ಹಾಗೂ ವ್ಯಾಪಕ ಜಾಗೃತಿ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ಅಲ್ಲದೇ ಸರ್ಕಾರಕ್ಕೆ ಈ ಕುರಿತು ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಸಮಿತಿಯ ಕಾರ್ಯದರ್ಶಿ ಅಶೋಕ ವಡಗಾವೆ ಮಾತನಾಡಿ ಯುವಜನತೆಯನ್ನು ಮಾದಕ ವಸ್ತುಗಳ ದುರುಪಯೋಗದಿಂದ ಮತ್ತು ಅತಿಯಾದ ಡಿಜಿಟಲ್ ಬಳಕೆಯಿಂದ ರಕ್ಷಿಸುವುದು ಕರ್ನಾಟಕದ ಭವಿಷ್ಯವನ್ನು ಸುರಕ್ಷಿತಗೊಳಿಸಲು ಅತ್ಯಂತ ಮುಖ್ಯವಾಗಿದೆ. ಈ ಸಂಬಂಧ ಶಾಲಾ ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳು, ಶಿಕ್ಷಣ ಕಾರ್ಯಕ್ರಮಗಳು ಹಾಗೂ ಸಮುದಾಯ ಮಟ್ಟದ ಚಟುವಟಿಕೆಗಳಲ್ಲಿ ಸರ್ಕಾರದೊಂದಿಗೆ ಸಹಕರಿಸಲು ತಮ್ಮ ಸಂಘಟನೆಗಳು ಸಿದ್ಧವಾಗಿವೆ ಎಂದು ತಿಳಿಸಿದರು.
ಸಮಿತಿಯ ಡಾ. ರಾಜಶೇಖರ ಸೇಡಂಕರ್ ಮಾತನಾಡಿ ವ್ಯಸನಮುಕ್ತ, ಭಿಕ್ಷಾಟನೆ ಮುಕ್ತ ಮತ್ತು ಸರಳ ವಿವಾಹ ಪೆÇ್ರೀತ್ಸಾಹಿಸುವ ಜಿಲ್ಲೆಯನ್ನಾಗಿ ಮಾಡುವುದು ನಮ್ಮ ಸಮಿತಿಯ ಗುರಿಯಾಗಿದೆ ಎಂದರು.
ಸಮಿತಿಯ ಪ್ರಮುಖರಾದ ಬಸವರಾಜ ಮಾಳಗೆ, ಸುರೇಶ ಚನಶೆಟ್ಟಿ, ಶಂಭುಲಿಂಗ ವಾಲದೊಡ್ಡಿ ಸೇರಿದಂತೆ ಇತರರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.