ಶೀಘ್ರದಲ್ಲಿಯೇ ತಾಂಬಾ ಗ್ರಾಮಕ್ಕೆ ಸರಕಾರಿ ಪದವಿಪೂರ್ವ ಮಹಾವಿದ್ಯಾಲಯ : ಶಾಸಕ ಮನಗೂಳಿ

ಇಂಡಿ :ನ.೨೬: ವಿಧ್ಯಾರ್ಥಿಗಳನ್ನು ಬೌಧಿಕ ಹಾಗೂ ದೈಹಿಕವಾಗಿ ಸದೃಢರನ್ನಾಗಿ ಮಾಡಲು ಸ್ಮಾರ್ಟ್ ಕ್ಲಾಸ್ ಪೂರಕವಾಗಿದೆ. ವಿದ್ಯಾರ್ಥಿಗಳ ಅನುಕುಲಕ್ಕಾಗಿ ಸ್ಮಾರ್ಟ್ ಕ್ಲಾಸ್ ಪ್ರಾರಂಭ ಮಾಡಲು ಸಹಾಯ ಮಾಡಿದ ಸಮಾಜ ಸೇವಕ ಪ್ರಧೀಪ ಗುತ್ತೆದಾರ ಅವರ ಕಾರ್ಯ ಶ್ಲಾಘನಿಯ ವಾದದ್ದು ಶೀಘ್ರದಲ್ಲಿಯೇ ಸರಕಾರಿ ಪದವಿ ಪೂರ್ವ ಕಾಲೇಜನ್ನು ತಾಂಬಾ ಗ್ರಾಮದಲ್ಲಿ ಪ್ರಾರಂಭ ಗೋಳಿಸಲಾಗುವದು ಎಂದು ಸಿಂದಗಿ ಅಶೋಕ ಮನಗುಳಿ ಹೇಳಿದರು.
ತಾಲೂಕಿನ ತಾಂಬಾ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ಅಳವಡಿಸಿದ ಸ್ಮಾರ್ಟ್ ಕ್ಲಾಸ್ ಹಾಗೂ ಸರಸ್ವತಿ ಪೂಜೆಯನ್ನು ಜೋತಿ ಬೇಳಗಿಸಿ ಉದ್ಘಾಟಿಸಿ ಮಾತನಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶಿಕ್ಷಣಕ್ಕಾಗಿ ವಿಶೇಷವಾದ ಅನುಧಾನವನ್ನು ಮಿಸಲಿಟ್ಟಿದ್ದಾರೆ. ಇಲ್ಲಿಯ ಕೋಣೆಗಳ ನಿರ್ಮಾಣಕ್ಕಾಗಿ ವಿಧಾನ ಪರಿಷತ್ ಸದಸ್ಯರಾದ ಪ್ರಕಾಶ ಹುಕ್ಕೆರಿ ಅವರ ಅನುದಾನದಲ್ಲಿ ೨೫ಲಕ್ಷ ರೂಗಳನ್ನು ಮಂಜೂರು ಗೊಳಿಸಲಾಗಿದೆ ಹಾಗೂ ಈ ಶಾಲೆಯ ಕಂಪೌAಡ ನಿರ್ಮಾಣಕ್ಕಾಗಿ ೧೦ಲಕ್ಷ ರೂಗಳನ್ನು ಮುಂಬರುವ ದಿನಗಳಲ್ಲಿ ನೀಡಲಾಗುವದು ಇಲ್ಲಿನ ವಿದ್ಯಾರ್ಥಿಗಳು ಪದವಿ-ಪೂರ್ವ ಕಾಲೇಜಿನ ಶಿಕ್ಷಣಕ್ಕಾಗಿ ಅಲೆದಾಡುವದನ್ನು ತಪ್ಪಿಸಲು ಮತ್ತು ಪೋಷಕರ ಕಾಳಜಿಗೆ ಸ್ಪಂದಿಸಲು ಕ್ಷೇತ್ರದಲ್ಲಿ ೩ಕಾಲೇಜುಗಳು ೮ಪ್ರೌಢ ಶಾಲೆಗಳು, ೩ಪಬ್ಲಿಕ್ ಸ್ಕುಲ್‌ಗಳು ಮಂಜುರು ಗೋಳಿಸಲಾಗಿದೆ ಎಂದರು.
ವಸತಿ ನೀಲಯಗಳಿಗೆ ಹೆಚ್ಚಿನ ಮಹತ್ವವನ್ನು ನೀಡಿ ಗ್ರಾಮೀಣ ಭಾಗದ ತಾಂಬಾ ಗ್ರಾಮದಲ್ಲಿ ಮಹಿಳಾ ವಸತಿ ನಿಲಯದ ಕಟ್ಟಡ ಪ್ರಾರಂಭ ಗೊಳಿಸಲಾಗಿದೆ ಎಂದರು.
ಸಾನಿಧ್ಯ ವಹಿಸಿದ ಮಲ್ಲಯ್ಯ ಸಾರಂಗಮಠ , ಎಸ್.ಡಿ.ಎಮ್.ಸಿ ಅಧ್ಯಕ್ಷ ಸಿದ್ದು ಹತ್ತಳಿ ಅಧ್ಯಕ್ಷತೆ ಮಾತನಾಡಿದರು.
ಸಮಾಜ ಸೇವಕರಾದ ಪ್ರಧಿಪ ಗುತ್ತೇದಾರ, ಅಪ್ಪಣ್ಣ ಕಲ್ಲೂರ, ಪಿಕೆಪಿಎಸ್ ಅದ್ಯಕ್ಷ ಲಕ್ಷöಣ ಹಿರೇಕುರಬರ, ರಾಮಚಂದ್ರ ದೋಡಮನಿ, ರಾಚಪ್ಪ ಗಳೇದ, ಮಹ್ಮದ ವಾಲೀಕಾರ, ಕಾಂತನಗೌಡ ಪಾಟೀಲ, ಮುಖ್ಯಗುರುಗಳಾದ ಪಿ.ಕೆ.ಬಿರಾದಾರ ಮತ್ತಿತರರಿದ್ದರು. ವರ್ಗಾವಣೆ ಗೊಂಡ ಎಸ್.ಆರ್.ಕುಂಬಾರ ಹಾಗೂ ವ್ಹಿ.ಆರ್.ಹಂಚನಾಳ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಿದರು.
ಶಿಕ್ಷಕ ಸದಾಶಿವ ಅಂಬಾರೆ , ಶಿಕ್ಷಕಿ ಜೋತಿ ಕನ್ನೂರ , ಗೀತಾ ಬಂದಿ ಮಾತನಾಡಿದರು.