ಪ್ರತಿಯೊಬ್ಬರ ಭವಿಷ್ಯ ನಿರ್ಮಿಸುವ ಸರ್ಕಾರಿ ಶಾಲೆ ಉಳಿಸಬೇಕಾಗಿದೆ ; ದೀಪಕ್ ಆರ್.

ಅಫಜಲಪುರ ;ನ.21: ಸರಕಾರಿ ಶಾಲೆಗಳು ಪ್ರತಿಯೊಬ್ಬರ ಭವಿಷ್ಯ ನಿರ್ಮಿಸುವ ಸರಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕು ಎಂದು ಫೌಂಡೇಶನ್ ಸೀನಿಯರ್ ಸಿಎಸ್ ಆರ್ ದೀಪಕ್ ಆರ್. ಹೇಳಿದರು.

ತಾಲೂಕಿನ ಬಿದನೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಬೆಂಗಳೂರಿನ ನೊವೇಲ್ ಹೋಪ್ ಫೌಡೇಶನ್ ವತಿಯಿಂದ
ಉಚಿತವಾಗಿ ಬ್ಯಾಗ್ ವಿತರಿಸಿ ಮಾತನಾಡಿದ ಅವರು, ಜಿಲ್ಲಾದ್ಯಂತ ಒಟ್ಟು 26 ಶಾಲೆಗಳಲ್ಲಿ 4,233 ಮಕ್ಕಳಿಗೆ ಉಚಿತ ಬ್ಯಾಗ್ ನೀಡಲಾಗಿದೆ. ಇನ್ನೂ ಊಟದ ತಟ್ಟೆ ವಾಟರ್ ಬಾಟಲ್, ಟ್ರಾಕ್ ಸೂಟ್ ಸೇರಿ ಗುಣ
ಮಟ್ಟದ ಶೌಚಾಲಯಗಳನ್ನು ಕಟ್ಟಿಸಿಕೊ
ಡುವ ಕೆಲಸ ಮಾಡಲಾಗುವುದು ಎಂದರು.

ಮುಖ್ಯಗುರುಗಳಾದ ರಾಘವಾಚಾರ್ಯ ಜೋಶಿ ಮಾತನಾಡಿ, ಸರಕಾರಿ ಶಾಲೆ ಮಕ್ಕಳ ದಾಖಲಾತಿ ಹಾಗೂ ಮಕ್ಕಳ ಶ್ರೇಯೋಭಿವೃದ್ದಿಗೆ ಸರಕಾರ ಸಾಕಷ್ಟು ಯೋಜನೆಗಳನ್ನು ಜಾರಿ ಮಾಡಿದೆ. ಸದ್ಯ ಫೌಂಡೇಶನ್ ವತಿಯಿಂದ 300 ಬ್ಯಾಗ್ ವಿತರಿಸಲಾಗಿದೆ ಎಂದು ತಿಳಿಸಿದರು.

ಸಿಬ್ಬಂದಿಗಳಾದ ಸತೀಶ ಡೊಂಗ್ರೆ, ಪೂಜಾ ಪಾಟೀಲ, ಅಕ್ಕಮಹಾದೇವಿ ಪಾಟೀಲ, ಲಕ್ಷ್ಮಿ, ಜ್ಯೋತಿಲಕ್ಷ್ಮಿ, ಅಶ್ವಿನಿ ಹೂಗಾರ, ಚಂದ್ರಕಲಾ ಕುಲಕರ್ಣಿ, ಸಾವಿತ್ರಿ ಹಿರೇಮಠ, ಮಲ್ಲಯ್ಯ ಗುತ್ತೇದಾರ, ಪ್ರತಿಭಾ, ಶಿಲ್ಪಾ, ಪಾಲಕರು ಹಾಗೂ ವಿದ್ಯಾರ್ಥಿಗಳು ಇದ್ದರು.