
ಜೇವರ್ಗಿ: ನ.೧೭:ತಾಲೂಕಿನ ಆಂದೋಲಾ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಪಾಲಕರ ಸಭೆಯನ್ನು ಆಯೋಜಿಸಲಾಗಿತ್ತು. ಸಭೆಯನ್ನು ಎಸ್.ಡಿ.ಎಂ.ಸಿ. ಸಮಿತಿ ಅಧ್ಯಕ್ಷ ಬಸವರಾಜ ಹವಾಲ್ದಾರ್ ಅವರು ಉದ್ಘಾಟಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಬಟ್ಟೆ, ಶೂ, ಪುಸ್ತಕಗಳು, ಮಧ್ಯಾಹ್ನದ ಬಿಸಿಯೂಟ, ವಿದ್ಯಾರ್ಥಿವೇತನ ಸೇರಿದಂತೆ ಅನೇಕ ಕಲ್ಯಾಣಕಾರಿ ಯೋಜನೆಗಳನ್ನು ಸರ್ಕಾರ ನೀಡುತ್ತಿದೆ. ಆ ಸೌಲಭ್ಯಗಳನ್ನು ಶಾಲೆಯ ಮುಖ್ಯ ಗುರುಗಳು ಸಮರ್ಪಕವಾಗಿ ಬಳಸಿಕೊಂಡು ಶಿಕ್ಷಕರ ಸಹಕಾರದಿಂದ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದ್ದಾರೆ. ನಮ್ಮ ಸರ್ಕಾರಿ ಶಾಲೆ ಯಾವ ಖಾಸಗಿ ಶಾಲೆಗೂ ಕಡಿಮೆ ಇಲ್ಲ ಎಂದು ನಮ್ಮ ಶಿಕ್ಷಕರು ತಮ್ಮ ಕಾರ್ಯದ ಮೂಲಕ ತೋರಿಸಿದ್ದಾರೆ ಎಂದು ಹೇಳಿದರು.
ದಲಿತ ಸೇನೆ ಗುಲ್ಬರ್ಗಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಗೋಲಾ ಅವರು ಮಾತನಾಡಿ, ಮುಂದಿನ ಸಭೆಯಲ್ಲಿ ಇನ್ನಷ್ಟು ಸಂಖ್ಯೆಯಲ್ಲಿ ಪಾಲಕರು ಭಾಗವಹಿಸಿ, ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನ
ಹರಿಸುವಂತೆ ಮನವಿ ಮಾಡಿದರು.
ಕಾರ್ಯಕ್ರಮಕ್ಕೆ ಶಾಲೆಯ ಮುಖ್ಯಗುರು ಮಡಿವಾಳಪ್ಪ ಅಲಗೂರು ಅವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೃಷ್ಣ ಗ್ರಾಮೀಣ ಬ್ಯಾಂಕ್ ನಿವೃತ್ತ ನೌಕರ ಮಲ್ಲಣ್ಣ ನಾಟೀಕಾರ್, ಗ್ರಾಪಂ ಸದಸ್ಯ ಭೀಮಾಶಂಕರ ಸುಣಗಾರ, ಎಸ್.ಡಿ.ಎಂ.ಸಿ ಸದಸ್ಯ ಗೋವಿಂದ ರೆಡ್ಡಿ, ಹುಸನಪ್ಪ ಗುಂಡಳ್ಳಿ, ಶಿವಶರಣಪ್ಪ ಭಜಂತ್ರಿ, ಬಸವರಾಜ ಹಡಪದ, ಮಹಾದೇವ ಅಣಬಿ ಅವರು ಉಪಸ್ಥಿತರಿದ್ದರು.
ಶಾಲಾ ಶಿಕ್ಷಕಿ ಫಿಲೋಮಿನಾ (ಬ್ರಿಕ್ಸಿ) ಅವರು ಅತಿಥಿಗಳನ್ನು ಸ್ವಾಗತಿಸಿದರು. ಬಸವರಾಜ ಶಿಕ್ಷಕರು ಕಾರ್ಯಕ್ರಮವನ್ನು ನಿರೂಪಿಸಿದರು. ಪ್ರಾಸ್ತಾವಿಕ ಭಾ?ಣವನ್ನು ಗುರುದೇವಿ ಪಾಟೀಲ್ ಅವರು ನೀಡಿದರು.
ಶಾಲೆಯ ಶಿಕ್ಷಕ ಶೋಭಾ, ಹಣಮಂತಪ್ಪ, ಮಹಾದೇವಿ, ಕಾಂತಮ್ಮ, ಮಂಜುಳಾ ಅಣಬಿ, ರಾಜಶೇಖರ ಹಿರೇಮಠ, ರೂಬಾಬಿ, ಈರಮ್ಮ ಗೋಲಾ, ಪ್ರಭು ಸಾಳುಂಕೆ, ದಸ್ತಗೀರ್ ಸರ್, ಶಾಲಾ ಮಕ್ಕಳು, ಪಾಲಕರು ಹಾಗೂ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಕೊನೆಯಲ್ಲಿ ವಂದನಾರ್ಪಣೆಯನ್ನು ಸಂಪತ್ ಕುಮಾರಿ ಸಜ್ಜನ್ ಮೇಡಂ ಅವರು ಅತ್ಯಂತ ಅಭಿವ್ಯಕ್ತಿಪೂರ್ಣವಾಗಿ ಸಲ್ಲಿಸಿದರು.























