ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಸರಕಾರಿ ಪಾಲಿಟೆಕ್ನಿಕ್ ಅಫಜಲಪೂರ ಸಂಸ್ಥೆಗೆ 5 ಪದಕಗಳು

ಕಲಬುರಗಿ:ಜ.29:ಇತ್ತೀಚೆಗೆ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತ, ಕಲಬುರಗಿ ಜಿಲ್ಲಾ ಸರಕಾರಿ ನೌಕರರ ಸಂಘ, ಹಾಗೂ ಜಿಲ್ಲಾ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಲಬುರಗಿ ಇವರ ಸಂಯುಕ್ತಾಶ್ರದಲ್ಲಿ ಜರುಗಿದ ಕ್ರೀಡಾ ಸ್ಪರ್ಧೆಗಳಲ್ಲಿ ಅಫಜಲಪೂರ ಸರಕಾರಿ ಪಾಲಿಟೆಕ್ನಿಕ್ ಸಿಬ್ಬಂದಿಗಳಿಗೆ 5 ಪದಕಗಳು ಬಂದಿದ್ದು ಸಂಸ್ಥೆಯ ಕು. ಉಮಾಶ್ರೀ, ದತ್ತಾಂಶ ನಮೂದ ಸಹಾಯಕರು 800ಮೀ. ಓಟ ಹಾಗೂ ಖೋಖೋ ಸ್ಪರ್ಧೆಯಲ್ಲಿ ಬಂಗಾರದ ಪದಕ ಹಾಗೂ ರಿಲೇಯಲ್ಲಿ ಕಂಚಿನ ಪದಕ ಗೆದ್ದಿರುತ್ತಾರೆ, ಹಾಗೂ ಡಾ. ಪ್ರಭುದೇವ ಎಂ.ಎಸ್ ಉಪನ್ಯಾಸಕರು ಯಾಂತ್ರಿಕ ವಿಭಾಗ 400ಮೀ. ಓಟ (50 ವಯಸ್ಸು ಮೇಲ್ಪಟ್ಟು) ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಹಾಗೂ ಶ್ರೀ ಪ್ರಕಾಶ ರಾಠೋಡ ಉಪನ್ಯಾಸಕರು ಯಾಂತ್ರಿಕ ವಿಭಾಗ 100ಮೀ. ಓಟದಲ್ಲಿ ಕಂಚಿನ ಪದಕ ಗೆದ್ದಿರುವುದು ಸಂಸ್ಥೆಗೆ ಹೆಚ್ಚಿನ ಗೌರವ ತಂದಿದ್ದಕ್ಕಾಗಿ ಪ್ರಾಚಾರ್ಯರು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.