ಕೊರೊನಾ ವಿಚಾರದಲ್ಲಿ ಸರ್ಕಾರ ಅಲರ್ಟ್ ಆಗಿದೆ:ಡಾ.ಶರಣ ಪ್ರಕಾಶ್ ಪಾಟೀಲ

ಕಲಬುರಗಿ,ಮೇ.25-ಕೊರೊನಾ ವಿಚಾರದಲ್ಲಿ ಸರ್ಕಾರ ಅಲರ್ಟ್ ಇದೆ. ಅಧಿಕಾರಿಗಳು ಸಭೆ ಮಾಡಿದ್ದಾರೆ. ನಾನು ಸಹ ಅಧಿಕಾರಿಗಳಿಗೆ ಮುಂಜಾಗೃತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದೇನೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ ಹೇಳಿದರು.
ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರೋಗ್ಯ ಇಲಾಖೆ ಈಗಾಗಲೇ ಕೈ ಪಿಡಿ ಬಿಡುಗಡೆ ಮಾಡಿದೆ. ಮಕ್ಕಳು ಹಾಗೂ ಗರ್ಭಿಣಿಯರು ಜನ ವಸತಿ ಪ್ರದೇಶದಲ್ಲಿ ಮಾಸ್ಕ್ ಹಾಕಿಕೊಳ್ಳಲು ಸಲಹೆ ನೀಡಲಾಗಿದೆ. ಈಗಾಗಲೇ ಆಸ್ಪತ್ರೆಯಲ್ಲಿ ಸೌಲಭ್ಯ ಇದೆ. ಹೆಚ್ಚು ಪ್ರಕರಣಗಳು ಪತ್ತೆಯಾದರೂ ಅದಕ್ಕೆ ತಕ್ಕ ವ್ಯವಸ್ಥೆ ಮಾಡಲಾಗಿದೆ. ಎಲ್ಲೆಲ್ಲಿ ಅಗತ್ಯವಿದೆಯೋ ಅಲ್ಲಿ ಟೆಸ್ಟ್ ಮಾಡಲಾಗುತ್ತಿದೆ. ಆರ್ಟಿಫಿಸಿಯಲ್ ಟೆಸ್ಟ್‍ಗೆ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಅಲ್ಲಮಪ್ರಭು ಪಾಟೀಲ, ಜಗದೇವ ಗುತ್ತೇದಾರ, ಕನೀಜ್ ಫಾತಿಮಾ, ಮುಖಂಡರಾದ ಸುಭಾಷ ರಾಠೋಡ್, ರಾಜಗೋಪಾಲ ರೆಡ್ಡಿ, ಡಾ.ಕಿರಣ್ ದೇಶಮುಖ, ಮಹಾಂತಪ್ಪ ಸಂಗಾವಿ, ಸೋಮಶೇಖರ ಹಿರೇಮಠ ಉಪಸ್ಥಿತರಿದ್ದರು.