
ಜಮಖಂಡಿ:ಮಾ.1:ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಮಾ. 16ರಿಂದ ಎಲ್ಲ ಸೇವೆ ಬಂದ್, ತುರ್ತು ಸೇವೆ ಮಾತ್ರ ಲಭ್ಯ, 2 ಹಂತದಲ್ಲಿ ಪ್ರತಿಭಟನೆಗೆ ನಿರ್ಧಾರ ಎಂದು ಕರ್ನಾಟಕ ಸರಕಾರಿ ವೈದ್ಯಾಧಿಕಾರಿಗಳ ಸಂಘದ ಜಿಲ್ಲಾ ಖಜಾಂಚಿ ಡಾ.ಗೈಬುಸಾಬ ಗಲಗಲಿ ಹೇಳಿದರು.
ಆರೋಗ್ಯ ಇಲಾಖೆ ಅಧಿಕಾರಿ ಹಾಗೂ ನೌಕರರ ನ್ಯಾಯಯುತ ಬೇಡಿಕೆಗಾಗಿ ಮಾರ್ಚ 11 ರಿಂದ 15 ರವರಗೆ ಕಪ್ಪು ಪಟ್ಟಿ ಧರಿಸಿ ತುರ್ತುಸೇವೆ ನೀಡುವದು ನಮ್ಮ ಬೇಡಿಕೆ ಇಡೇರದಿದ್ದರೆ ಅನಿರ್ದಾಷ್ಠಾವಧಿ ಮುಷ್ಕರ ನಡೆಸುವದಾಗಿ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ವೈದಿಕಿಯ ಶಿಕ್ಷಣ ಇಲಾಖಾ ನೌಕರರ ಕೇಂದ್ರ ಸಂಘ ಹಾಗೂ ಇಲಾಖೆ ಎಲ್ಲ ವೃಂದ ಸಂಘಗಳ ಸಹಯೋಗದೊಂದಿಗೆ ನಗರದ ತಾಲೂಕಾಡಲೀತ ಭವನದ ಆವರಣದಲ್ಲಿ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಅವರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.
ಮಾರ್ಚ 15 ರ ಒಳಾಗಾಗಿ ನಮ್ಮ ಬೇಡಿಕೆಗಳ ಇಡೇರದಿದ್ದರೆ ಮಾರ್ಚ 16 ರಿಂದ ಕರ್ತವ್ಯಕ್ಕೆ ಹಾಜರಗದೇ ಅನಿರ್ದಾಷ್ಠಾವಧಿ ಮುಷ್ಕರ ನಡಸಲಾಗುವದು ರಾಜ್ಯದ ಎಲ್ ಸರಕಾರಿ ಆಸ್ಪತ್ರೆಗಳಿಗೆ ಸಮರ್ಪಕವಾಗಿ ಔಷಧಿ ನೀಡದೇ ಇರುವದರಿಂದ ರೋಗಿಗಳಿಗೆ ತೊಂದರೆಯಾಗುತ್ತದೆ, ಇದರಿಂದ ಸಾರ್ವಜನಿಕರ ಕೋಪಕ್ಕೆ ನಾವು ಈಡಾಗುತ್ತೇವೆ ಅದು ನಿಲಲೆಬೇಕು ನೇಮಕಾತಿಯ ಹಿಂದಿನ ಕಾನೂನು ಬದಲಾಗಿ ಪ್ರತಿ ಮೂರು ವರ್ಷಕ್ಕೊಮ್ಮೆ ಬದಲಾವಣೆಗೆ ತಿದ್ದುಪಡಿ ಮಾಡಬೇಕು, ಜೇಷ್ಠತಾ ಪಟ್ಟಿಯನ್ನು ಪ್ರಕಟಿಸದೇ ಇರುವದು. ಪ್ರತಿ ಐದು ವರ್ಷಕ್ಕೊಮ್ಮೆ ಮುಂಬಡತಿ ನೀಡದೇ ಇರುವದು. ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯ ತಜ್ಞ ವೈದ್ಯ, ಸಿಬ್ಬಂದಿಗಳಿಗೆ ಸಿಜಿಎಚ್, ಮತ್ತು ಎಐಸಿಟಿಇ ವೈದ್ಯಕೀಯ ಶಿಕ್ಷಣ ಮಾದರಿಯಲ್ಲಿ ವೇತನ ನೀಡುವದಕ್ಕಾಗಿ ಈ ಪ್ರತಿಭಟನೆಯನ್ನು ನಡೆಸಲಾಗುತ್ತದೆ ಎಂದು ಹೇಳಿದರು.
ಪ್ರಧಾನ ಕಾರ್ಯದರ್ಶಿ ಡಾ ಕೃಷ್ಣಾ ಬಣ್ಣದ, ತಾಲೂಕಾ ಪ್ರತಿನಿಧಿ ಡಾ ವಾಸಪ್ಪಾ ಮುದಿಗೌಡರ, ಡಾ ಮುಕುಂದ ಕಾಂಬಳೆ, ನರೇಂದ್ರ ನಿಡೋನಿ, ಅನಿಲಕುಮಾರ ಸುರಗೊಂಡ,ಉಮೇಶ ಜೋಶಿ, ಸಂತೋಷ ನಾಯಿಕ, ರವಿ ಕಾಂಬಳೆ,ಜಾಕೀರ ನದಾಫ, ಜೆಡಿ.ಧನ್ನೂರ, ಲಲಿತಾ ಗಲಗಲಿ, ಜಗದೀಶ ಆಲಕನೂರ, ಸಂತೋಷ ಮಾಲಗತ್ತೀಮಠ, ವಿಶ್ವನಾಥ ಹರಿಜನ, ಭಾಗಣ್ಣಾ ನಾಗಠಾಣ, ಗಂಗಾಧರ ಚಾಬೂಕಸವಾರ, ಇನ್ನಿತರರು ಇದ್ದರು.
ಬೇಡಿಕೆಗಳು :-
ಔಷಧಿಗಳ ಸರಬರಾಜು, ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ,ಮುಂಬಡ್ತಿ, ಉನ್ನತ ವ್ಯಾಸಂಗ, ಸ್ನಾತಕೋತ್ತರ ವ್ಯಾಸಂಗಕ್ಕೆ ಅವಕಾಶ, ಖಾಲಿ ಹುದ್ದೆಗಳ ಭರ್ತಿ, ಕೇಂದ್ರ ಪುರಸ್ಕೃತ ಯೋಜನೆ ಅಡಿ ಕಾರ್ಯನಿರತ ಸುಮಾರು 6000 ನೌಕರರಿಗೆ ಹಲವಾರು ವರ್ಷಗಳಿಂದ 3-4 ತಿಂಗಳಿಗೊಮ್ಮೆ ವೇತನ ಭತ್ಯೆಗಳನ್ನು ನೀಡುತ್ತಿದ್ದು, ಪ್ರತಿ ತಿಂಗಳ ಮೊದಲ ವಾರದಲ್ಲಿ ವೇತನ ಭತ್ಯೆಗಳನ್ನು ನೀಡುವುದು ಸೇರಿ 11 ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದರು.



























