
ಯಾದಗಿರಿ:ನ.೨: ಕರ್ನಾಟಕದ ನೆಲ,ಜಲ, ಕನ್ನಡ ಭಾಷೆ ಹಾಗೂ ಸಂಸ್ಕೃತಿಯನ್ನು ರಕ್ಷಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಖಾತೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪ ದರ್ಶನಾಪುರ ಅವರು ಹೇಳಿದರು.
೭೦ನೇ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ವಿವಿಧ ಕವಾಯತು ಪಡೆಗಳಿಂದ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು
ಕರ್ನಾಟಕ ಸರ್ಕಾರವು ನಮ್ಮ ನಾಡು- ನುಡಿಯ ರಕ್ಷಣೆಗೆ ಹಾಗೂ ಕಲೆ, ಸಾಹಿತ್ಯ, ಸಂಸ್ಕೃತಿ ಉಳಿಸಿ ಬೆಳೆಸಲು ಕಾರ್ಯಪ್ರವೃತ್ತವಾಗಿದೆ.ಕನ್ನಡಿಗರ ಏಳ್ಗೆಗಾಗಿ ಹಲವು ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದರು.
ಇಂದು ನಾವೆಲ್ಲ ಸಂಭ್ರಮದಿAದ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ. ನಮಗೆಲ್ಲ ತಿಳಿದಿರುವಂತೆ ಭಾರತ ಸ್ವತಂತ್ರಗೊAಡು ಗಣರಾಜ್ಯ ಉದಯವಾದ ಸಂದರ್ಭದಲ್ಲಿ ಈಗಿನ ಕರ್ನಾಟಕವು ವಿವಿಧ ಪ್ರಾಂತ್ಯಗಳಲ್ಲಿ ಹರಿದು ಹಂಚಿ ಹೋಗಿತ್ತು.
ಅದರಂತೆ ದೇಶದ ನಾನಾ ಭಾಗಗಳ ಪರಿಸ್ಥಿತಿಯು ಇದೆ ಆಗಿತ್ತು. ಆಗ ಭಾಷಾವಾರು ಪ್ರಾಂತ್ಯಗಳ ರಚನೆಯ ಕೂಗು ಎಲ್ಲೆಡೆ ಭುಗಿಲೆದ್ದಿತು.
ಯಾವಾಗ ಆಂಧ್ರ ರಾಜ್ಯ ರಚನೆ ಆಯ್ತೋ ಅದೇ ರೀತಿಯಾಗಿ ಭಾಷೆ ಆಧಾರದ ಮೇಲೆ ನಮಗೂ ಒಂದೊAದು ರಾಜ್ಯ ನಿರ್ಮಾಣವಾಗಬೇಕೆನ್ನುವ ಹೋರಾಟ ದೇಶದ ನಾನಾ ಭಾಗಗಳಲ್ಲಿ ತೀವ್ರಗೊಂಡಿತು.
“ಕನ್ನಡದ ಕುಲ ಪುರೋಹಿತ” ಎಂದೆ ಹೆಸರಾದ ಆಲೂರು ವೆಂಕಟರಾಯರು ೧೯೦೫ ರಷ್ಟು ಹಿಂದೆಯೇ ಕರ್ನಾಟಕ ಏಕೀಕರಣ ಚಳುವಳಿಯನ್ನು ಪ್ರಾರಂಭಿಸಿದ್ದನ್ನು ಸಹ ನಾವು ಸ್ಮರಿಸಬಹುದಾಗಿದೆ. ೧೯೫೩ ರಲ್ಲಿ ನ್ಯಾಯಮೂರ್ತಿ ಫಜಲ್ ಅಲಿ ಅವರ ನೇತೃತ್ವದಲ್ಲಿ ರಾಜ್ಯ ಪುನರ್ ವಿಂಗಡಣೆ ಆಯೋಗವನ್ನು ನೆಹರುಜೀ ಯವರು ನೇಮಿಸಿ ೧೯೫೬ ರಲ್ಲಿ ರಾಜ್ಯಗಳ ಪುನರ್ ವಿಂಗಡನಾ ಕಾಯ್ದೆಯನ್ನು ಜಾರಿಗೊಳಿಸಿದರು. ಆಗ ನವೆಂಬರ್ ೧, ೧೯೫೬ ರಂದು ಮದ್ರಾಸ್- ಬಾಂಬೆ – ಹೈದರಾಬಾದ್ ಪ್ರಾಂತ್ಯದಗಳಲ್ಲಿ ಹರಿದು ಹಂಚಿಹೋಗಿದ್ದ ಕನ್ನಡ ಮಾತನಾಡುವ ಪ್ರದೇಶಗಳನ್ನು ಒಂದುಗೂಡಿಸಿ ಮೈಸೂರು ರಾಜ್ಯವನ್ನು ರಚಿಸಲಾಯಿತು .ಅದಾದ ೧೭ ವರ್ಷಗಳ ನಂತರ ಅಂದರೆ ೧೯೭೩ ನವೆಂಬರ್ ೧ ರಂದು ಮಾಜಿ ಮುಖ್ಯಮಂತ್ರಿ
ದಿ. ದೇವರಾಜ್ ಅರಸುರವರು ಕರ್ನಾಟಕ ಎಂದು ನಾಮಕರಣ ಮಾಡಿದರು.
ದೇಶದ ಭಾಷೆ ಮತ್ತು ಸಾಹಿತ್ಯ ಪರಂಪರೆಯಲ್ಲಿ ಕನ್ನಡ ನಾಡು ಮತ್ತು ನುಡಿಗೆ ಉನ್ನತವಾದ ಸ್ಥಾನವಿದೆ ಮತ್ತು ೨೦೦೦ ವರ್ಷಗಳಿಗೂ ಮೀರಿದ ಇತಿಹಾಸವಿದೆ “ಕಾವೇರಿಯಿಂದ ಗೋದಾವರಿವರೆಗೆ ಕನ್ನಡ ನಾಡು ಹಬ್ಬಿದೆ “ಎಂದು ಕನ್ನಡದ ಮೊದಲ ಕೃತಿ “ಕವಿರಾಜಮಾರ್ಗ”ದಲ್ಲಿ ಉಲ್ಲೇಖಿಸಿರುವುದು ಇದಕ್ಕೆ ಸಾಕ್ಷಿಯಾಗಿದೆ .ಕನ್ನಡ ನಾಡನ್ನು ಆಳಿದ ಅನೇಕ ರಾಜ ಮನೆತನಗಳಾದ ಕದಂಬರು, ರಾಷ್ಟ್ರಕೂಟರು, ವಿಜಯನಗರ ರಾಜರು, ಚಾಲುಕ್ಯರು , ಗಂಗರು, ಟಿಪ್ಪು , ಮೈಸೂರ್ ಒಡೆಯರ್ ರು,ಈ ನಾಡಿನ ಕಲೆ, ಸಾಹಿತ್ಯ,ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದ್ದಾರೆ .
ಕರ್ನಾಟಕ ಮತ್ತು ಕನ್ನಡವು ಹಲವಾರು ಕಲಾವಿದರು ಕವಿಗಳು, ರಸ ಋಷಿಗಳಿಗೆ ;ವೀರಶೂರರಿಗೆ ಜನ್ಮ ನೀಡಿದ ನಾಡಾಗಿದೆ. ಕನ್ನಡ ಭಾಷೆಯಂತೂ ಸವಿಗನ್ನಡ ಎಂದೇ ಹೆಸರಾಗಿದೆ.
ಮಾತನಾಡುವುದನ್ನೇ ಬರೆಯುವ ಬರೆಯುದನ್ನೇ ಓದುವ ವಿಶಿಷ್ಟ ಭಾಷೆ ಕನ್ನಡವಾಗಿದೆ .
ಇಂಗ್ಲಿಷ್ ಗೆ ಸ್ವಂತ ಲಿಪಿ ಇಲ್ಲ ಅದು ರೋಮನ್ ಭಾಷೆಯಿಂದ ಎರವಲು ಪಡೆದಿದೆ. ಅದೇ ರೀತಿ ಹಿಂದಿ ಭಾಷೆಯು ಸಹ ದೇವನಾಗರಿ ಲಿಪಿಯಿಂದ ಎರವಲು ಪಡೆದುಕೊಂಡಿದೆ ಆದರೆ ಸ್ವಂತ ಲಿಪಿಯನ್ನು ಹೊಂದಿದ ಸಮೃದ್ಧ ಸಾಹಿತ್ಯವನ್ನು ಸೃಷ್ಟಿಸಿದ ಶ್ರೀಮಂತ ಭಾಷೆಯಾದ ಕನ್ನಡವನ್ನು” ಲಿಪಿಗಳ ರಾಣಿ “ಎಂದೇ ಕರೆಯಲಾಗುತ್ತದೆ.
ಕನ್ನಡ ರಾಜ್ಯೋತ್ಸವ ದಿನದಂದು ಮಾತ್ರ ನಾವು ಕನ್ನಡ ಪ್ರೀತಿಯನ್ನು ತೋರಿಸಿದರೆ ಸಾಲದು. ವರ್ಷಪೂರ್ತಿ ಕನ್ನಡದ ಮೇಲೆ ಪ್ರೀತಿ ಮತ್ತು ಅಭಿಮಾನವನ್ನು ತೋರಿಸಬೇಕಾದದ್ದು ಕನ್ನಡಿಗರಾದ ನಮ್ಮೆಲ್ಲರ ಕರ್ತವ್ಯವಾಗಿದೆ .
ತಾಯಿನೆಲ ಮತ್ತು ತಾಯಿನುಡಿಯನ್ನು ಯಾರು ಸಹ ಮರೆಯಬಾರದು .ಕುವೆಂಪು ರವರು “ಈ ನಾಡು ನನ್ನದು ; ನನ್ನದು ನಾಡು ಎನ್ನದ ಮಾನವನ ಎದೆ ಸುಡುಗಾಡು” ಎಂದಿದ್ದಾರೆ ಆದ್ದರಿಂದ ನಾಡು ನುಡಿಗಾಗಿ ನಾವು ಎಂತಹ ತ್ಯಾಗಕ್ಕೂ ಸಿದ್ಧರಾಗಿರಬೇಕು.
ಕನ್ನಡ ಸಾಹಿತ್ಯದಲ್ಲಿ ವಚನ ಸಾಹಿತ್ಯ ;ಜನಪದ ಸಾಹಿತ್ಯ; ಹಂತಿ ಪದಗಳು; ಡೊಳ್ಳಿನ ಪದಗಳು; ಬಯಲಾಟ; ಯಕ್ಷಗಾನ ;ದಾಸರ ಪದಗಳು ಸಮೃದ್ಧವಾಗಿದ್ದು ನಮ್ಮ ನಾಡಿನ ಮತ್ತು ನಮ್ಮ ನುಡಿಯ ಹೆಮ್ಮೆಯಾಗಿದೆ.ನಾವು ಉದ್ಯೋಗಕ್ಕಾಗಿ ಇತರ ರಾಜ್ಯ ಮತ್ತು ದೇಶಗಳಿಗೆ ಹೋದರು ಸಹ ಕನ್ನಡ ಭಾಷೆಯನ್ನು ಮರೆಯಬಾರದು ನಮ್ಮ ಹಿರಿಯರು ಹೇಳಿದಂತೆ
“ಎಲ್ಲಾದರೂ ಇರು ಎಂತಾದರು ಇರು ಎಂದೆAದಿಗೂ ನೀ ಕನ್ನಡವಾಗಿರು. “ಕನ್ನಡವೇ ಸತ್ಯ ಕನ್ನಡವೇ ನಿತ್ಯ “
“ಶ್ರೀಗನ್ನಡಂ ಗೆಲ್ಗೆ ಶ್ರೀಗನ್ನಡಂ ಬಾಳ್ಗೆ ” ಎಂದು ಸಚಿವರು ನುಡಿದರು.ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ವಿಶೇಷ ಅನುದಾನ: ರಾಜ್ಯ ಸರ್ಕಾರವು ಎಲ್ಲ ಕ್ಷೇತ್ರಗಳಲ್ಲಿ ಪ್ರಗತಿಗೆ ಒತ್ತು ನೀಡುತ್ತಿದೆ.ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಮೂಲಕ ಬೆಂಗಳೂರನ್ನು ರಾಷ್ಟ್ರದ ಮಾದರಿ ನಗರವನ್ನಾಗಿಸಿದೆ. ಕಲ್ಯಾಣ ಕರ್ನಾಟಕ ಭಾಗಕ್ಕೆ ನಂಜುAಡಪ್ಪ ವರದಿ ಅನ್ವಯ ಹೆಚ್ಚಿನ ಅನುದಾನ ಒದಗಿಸುತ್ತಿದೆ.ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಂವಿಧಾನ ತಿದ್ದುಪಡಿ ಕಲಂ ೩೭೧(ಜೆ) ಜಾರಿಗೊಳಿಸಿ ಯುವಜನಾಂಗದ ಅನುಕೂಲಕ್ಕಾಗಿ ಶೈಕ್ಷಣಿಕ ಹಾಗೂ ಉದ್ಯೋಗಕ್ಕೆ ಹೆಚ್ಚಿನ ಗಮನ ನೀಡಿ ಬಲ ತುಂಬುವ ಕೆಲಸ ಮಾಡಿದೆ. ಪ್ರತಿ ವರ್ಷ ೫೦೦೦ ಕೋ.ರೂ ಗಳನ್ನೂ ಒದಗಿಸಿ ಸರ್ವತೋಮುಖ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿ ದೆ.ಪ್ರತಿ ಸಮಾಜದ ಬಡ ಕುಟುಂಬಗಳ ನೆರವಿಗೆ ಹಲವು ಕ್ರಮಗಳನ್ನು ಕೈಗೊಂಡಿದ್ದು, ಎಲ್ಲರೂ ಜಾತಿ,ಮತ,ಪಂಥ, ಭೇದಭಾವ ಮರೆತು ಈ ರಾಜ್ಯದ ಏಳ್ಗೆಗಾಗಿ ಶ್ರಮಿಸೋಣ ಎಂದು ಹೇಳಿದರು. ದೇ ಸಂದರ್ಭದಲ್ಲಿ ಮಾಜಿ ಸಚಿವರು ಹಾಗೂ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀ ಬಾಬುರಾವ್ ಚಿಂಚನಸೂರ್, ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲಾದ್ ಪುರ್,
ಶಾಸಕರಾದ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ, ನಗರಸಭೆ ಅಧ್ಯಕ್ಷ ಲಲಿತಾ ಅನಪುರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ್ ಕಾಡ್ಲೂರ್, ಜಿಲ್ಲಾಧಿಕಾರಿ ಹರ್ಷಲ್ ಭೋಯರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವೀಶ್ ಒರಡಿಯಾ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್,ಅಪರ್ ಜಿಲ್ಲಾಧಿಕಾರಿ ರಮೇಶ ಕೋಲಾರ, ಸಹಾಯಕ ಆಯುಕ್ತ ಶ್ರೀಧರ್ ಗೋಟುರ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಗಣ್ಯರು ಉಪಸ್ಥಿತರಿದ್ದರು. ಸಮಾಜ ಸೇವೆ, ಸಾಹಿತ್ಯ, ಸಂಗೀತ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ಸತ್ಕರಿಸಲಾಯಿತು. ಕರ್ನಾಟಕ,ನೆಲ,ಜಲ,ಭಾಷೆ, ಇತಿಹಾಸ ಹಾಗೂ ಸರ್ಕಾರದ ವಿವಿಧ ಇಲಾಖೆಗಳ ಸಾಧನೆ ಕುರಿತ ಸ್ತಬ್ಧ ಚಿತ್ರಗಳು, ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಗಮನ ಸೆಳೆದವು.

































