
ಕಲಬುರಗಿ:ಫೆ.3:ಗ್ರಾಮೀಣ ಪ್ರದೇಶದ ಸರ್ಕಾರಿ ಪಿಯು ಕಾಲೇಜುಗಳು ಕೇವಲ ಶಿಕ್ಷಣ ಸಂಸ್ಥೆಗಳಲ್ಲ – ಅವು ಸಾವಿರಾರು ವಿದ್ಯಾರ್ಥಿಗಳ ಭವಿಷ್ಯದ ಆಶಾಕಿರಣಗಳು ಎಂದು ಶ್ರೀನಿವಾಸ ಸರಡಗಿ ಚಿನ್ನದಕಂತಿ ಚಿಕ್ಕವಿರೇಶ್ವರ ಹಿರೇಮಠದ ಪೀಠಧಿಪತಿಯಾದ ಪೂಜ್ಯ ಡಾ. ರೇವಣಸಿದ್ಧ ಶಿವಾಚಾರ್ಯರು ಹೇಳಿದರು. ಶ್ರೀನಿವಾಸ ಸರಡಗಿ ಸರಕಾರಿ ಪದವಿ ಪೂರ್ವ ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಬೀಳ್ಕೊಡುವ ಸಮಾರಂಭ ಉದ್ಘಾಟಿಸಿ ಆಶೀರ್ವಚನ ನೀಡುತ್ತಾ ಆರ್ಥಿಕವಾಗಿ ಹಿಂದುಳಿದ ಗ್ರಾಮೀಣದ ಕುಟುಂಬಗಳ ಮಕ್ಕಳಿಗೆ ಉನ್ನತ ಶಿಕ್ಷಣದ ಮೊದಲ ಹೆಜ್ಜೆ ಪದವಿ ಪೂರ್ವ ಕಾಲೇಜ.
ಖಾಸಗಿ ಕಾಲೇಜುಗಳ ಹೆಚ್ಚುತ್ತಿರುವ ಶುಲ್ಕದ ನಡುವೆ, ಸರ್ಕಾರಿ ಪಿಯು ಕಾಲೇಜುಗಳು ಗುಣಮಟ್ಟದ ಶಿಕ್ಷಣವನ್ನು ಕಡಿಮೆ ವೆಚ್ಚದಲ್ಲಿ ನೀಡುತ್ತಿವೆ. ಆದರೆ ಇಂದು ವಿದ್ಯಾರ್ಥಿಗಳ ಕೊರತೆ, ಮೂಲಸೌಕರ್ಯಗಳ ಅಭಾವ ಮತ್ತು ನಿರ್ಲಕ್ಷ್ಯದ ಕಾರಣದಿಂದ ಇವುಗಳು ಮುಚ್ಚುವ ಅಂಚಿನಲ್ಲಿವೆ.
ಗ್ರಾಮೀಣ ಸರ್ಕಾರಿ ಪಿಯು ಕಾಲೇಜುಗಳನ್ನು ಉಳಿಸುವುದು ಅಂದರೆ ಗ್ರಾಮೀಣ ಪ್ರತಿಭೆಯನ್ನು ಉಳಿಸುವುದು. ಸರ್ಕಾರ, ಶಿಕ್ಷಕರು, ಪೆÇೀಷಕರು ಮತ್ತು ಸಮಾಜ ಒಟ್ಟಾಗಿ ಕೈಜೋಡಿಸಿದರೆ ಮಾತ್ರ ಇವುಗಳಿಗೆ ಹೊಸ ಜೀವ ನೀಡಲು ಸಾಧ್ಯ ಎಂದು ಮಾರ್ಮಿಕವಾಗಿ ನುಡಿದರು.
ಮುಖ್ಯ ಅಥಿತಿಗಳಾದ ಸಮಾಜ ಸೇವಕ ನ್ಯಾಯವಾದಿ ಹಣಮಂತರಾಯ ಅಟ್ಟೂರ ಮಾತನಾಡುತ್ತ ಸರಕಾರಿ ಕಾಲೇಜ ಉಳಿಸಿ ಬೆಳವಣಿಗೆ ಯಾಗ ಬೇಕಾದರೆ ಮೌಲ್ಯಯುತ ಶಿಕ್ಷಣ ಅವಶ್ಯಕತೆ ಇದೆ.ಗ್ರಾಮೀಣ ಭಾಗದ ಹಲವಾರು ಕಾಲೇಜ ಮೂಲಭೂತ ಸೌಲಭ್ಯದಿಂದ ವಂಚಿತ ವಾಗಿವೆ. ಸರಕಾರ ಗಮನ ಹರಿಸಿ ಮೌಲ್ಯಯುತ ಶಿಕ್ಷಣ ನೀಡಲು ಸೌಲಭ್ಯ ಗಳು ಒದಗಿಸಬೇಕು ಎಂದು ಹೇಳಿದರು. ಮುಖ್ಯ ಅಥಿತಿಯಾದ ನಿವೃತ್ತ ಉಪನ್ಯಾಸಕರಾದ ಎಸ್ ಎಸ್ ಪಾಟೀಲ ಮಾತಾಡುತ್ತ ಸರಕಾರಿ ಪಿ ಯು ಕಾಲೇಜ ಗ್ರಾಮೀಣ ಭಾಗದ ಮಕ್ಕಳ ಭವಿಷ್ಯ ರೂಪಿಸುವ ಸರ್ವ ಜನಾಂಗದ ಶಾಂತಿಯ ತೋಟವಾಗಿದೆ ಎಂದು ಹೇಳಿದರು.ಮುಖ್ಯ ಅಥಿತಿಗಳಾಗಿ ನಿವೃತ್ತ ಉಪನ್ಯಾಸಕರಾದ ರಾಜೇಂದ್ರ ರಂಗದಾಳ, ಉಪನ್ಯಾಸಕರಾದ ಶಿವಶರಣಪ್ಪ ತಮ್ಮಗೋಳ, ಗ್ರಾಮದ ಸರಕಾರಿ ಪ್ರೌಢಶಾಲೆ ಮುಖ್ಯ ಗುರುಗಳಾದ ಸುವರ್ಣಾ ಬಿ. ಕೆ, ಪಾಳಾ ಸರಕಾರಿ ಪ್ರೌಢಶಾಲೆ ಮುಖ್ಯ ಗುರುಗಳಾದ ನೀಲಕಂಠ ಶಿಂಧೆ,ಶಾಂತಾಬಾಯಿ ರಂಗದಾಳ, ಸಂಗನಗೌಡ, ಮಾಜಿ ವಿದ್ಯಾರ್ಥಿ ಶಿವಾಜಿ ಚವ್ಹಾಣ ಆಗಮಿಸಿದರು.ಕಾಲೇಜಿನ ಪ್ರಭಾರಿ ಪ್ರಾಚಾರ್ಯರಾದ ಶ್ರೀಮತಿ ಗುಣ ಎಚ್. ಆರ್. ಅಧ್ಯಕ್ಷ ತೆ ವಹಿಸಿದರು.ಇದೆ ಸಂಧರ್ಭದಲ್ಲಿ ಕಳೆದ ವರ್ಷದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ ಗಳಿಗೆ ಸನ್ಮಾನಿಸಲಾಯಿತು.
ಕು.ವರ್ಷಾ, ಶ್ರೀದೇವಿ, ಪ್ರಿಯಾ ಪ್ರಾರ್ಥಿಸಿದರು. ಡಾ. ಜ್ಯೋತಿ ಬಂಡಿ ನಿರೂಪಿಸಿ,ವಂದಿಸಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಗೋಪಾಲ ರೆಡ್ಡಿ, ಗುರಪ್ಪ ಕೆರೊಳ್ಳಿ, ಸಿದ್ದಮ್ಮ, ಆನಂದ ಸೇರಿದಂತೆ ಉಪನ್ಯಾಸಕರು, ವಿದ್ಯಾರ್ಥಿಗಳು, ಪಾಲಕರು, ಪೆÇೀಷಕರು ಸೇರಿದಂತೆ ಗ್ರಾಮದ ಅನೇಕ ಜನ ಭಾಗವಹಿಸಿದರು.

























