ಜನರ ಮನೆ ಬಾಗಿಲಿಗೇ ಸರ್ಕಾರ, ಅಧಿಕಾರಿಗಳು: ಶಾಸಕ ಅಲ್ಲಂಪ್ರಭು ಪಾಟೀಲ್

ಕಲಬುರಗಿ:ಅ.3:ಜನಸ್ಪಂದನೆ ಸಭೆ ನಡೆಸುವ ಮೂಲಕ ತಾವು ಸಾಮಾನ್ಯ ಜನರ ಮನೆ ಬಾಗಿಲಿಗೇ ಸರಕಾರ, ಅಧಿಕಾರಿಗಳನ್ನು ಕರೆತಂದು ಸಮಸ್ಯೆ ಪರಿಹರಿಸುವ ಯತ್ನ ಮಾಡುತ್ತಿರೋದಾಗಿ ಶಾಸಕರಾದ ಅಲ್ಲಂಪ್ರಭು ಪಾಟೀಲ್ ಹೇಳಿದ್ದಾರೆ.

ಮೇಳಕುಂದಾ (ಬಿ) ಗ್ರಾಮದಲ್ಲಿ ಶನಿವಾರ ನಡೆದ ಜನಸ್ಪಂದನದಲ್ಲಿ ಪಾಲ್ಗೊಂಡು ಜನರ ಅಹವಾಲು ಆಲಿಸಿ ಮಾತನಾಡಿದ ಶಾಸಕರು, ಅಭಿವೃದ್ಧಿ ಬಗ್ಗೆ ಪ್ರಶ್ನೆ ಎತ್ತುವರು ಇದನ್ನ ನೋಡಲಿ, ಜನರ ಅರ್ಜಿ, ಅಹವಾಲು ಸ್ವೀಕರಿಸಿ ಇತ್ಯರ್ಥಮಾಡಲಾಗುತ್ತಿದೆ. ಬಹುಕೋಟಿ ವೆಚ್ಚದ ಪ್ರಗತಿ ಯೋಜನೆ ಕೈಗೊಳ್ಳಲಾಗುತ್ತಿದೆ. ನಮ್ಮ ಗಯಾರಂಟಿ ಯೋಜನೆಗಲೂ ಸಹ ಅಭಿವೃದ್ಧಿಯೇ ಅಲ್ಲವೆ? ಎಂದು ಪ್ರಶ್ನಿಸಿದರು.

ಜನ ಕಚೇರಿಗೆ ಅಧಿಕಾರಿ ಹುಡುಕಿಕೊಂಡು ಅಲೆಯಬಾರದೆಂದು ತಾವೇ ಮುಂದಾಗಿ ಪಂಚಾಯ್ತಿವವಾರು ಜನಸ್ಪಂದನೆ ಮಾಡುತ್ತಿರುವೆ. ಇದು 6 ನೇ ಜನ ಸ್ಪಂದನೆ ಎಂದ ಶಾಸಕರು ಇಲ್ಲಿ 112 ಅರ್ಜಿ ಸ್ವೀಕರಿಸಲಗಿದೆ. ಈ ಪೈಕಿ ಸ್ಥಳದಲ್ಲೇ 11 ಸಮಸ್ಯೆಗೆ ಪರಿಹಾರ ಹುಡುಕಲಾಗಿದೆ. ಮುಂಬುರವ ದಿನಗಳಲ್ಲಿ ಗಡವಿನೊಳಗೇ ಪರಿಹಾರ ಸೂಚಿಸಲಾಗುತ್ತಿದೆ ಎಂದರು.

ಸಾಮಾಜಿಕ ಭದ್ರತಾ ಯೋಜನೆಗಳಲ್ಲಿ ವಿಧವಾ ಪಿಂಚಣಿ, ವೃದ್ಧಾಪ್ಯ ಪಿಂಚಮಿಗಳನ್ನು ಫಲಾನುಭವಿಗಳಿಗೆ ನೀಡಿದ ಶಾಸಕರು ಬರುವ ದಿನಗಳಲ್ಲಿ ಅರ್ಹರಿಗೆ ಮನೆ ಮನೆ ಹೋಗಿ ಪಿಂಚಣಿ ಕೊಡಿಸಲಾಗುವುದು ಎಂದರು.

ಸಭೆಯಲ್ಲಿ ಪಾಲ್ಗೊಂಡಿದ್ದ ಕಾಡನಾಳದ ಮಂಜುನಾಥ ತಮ್ಮೂರಿಗೆ ಬಸ್ ?????ತ್ತು, ಅದನ್ನು ಸರಿಯಾಗಿ ಹೊರಳಿಸಲು ಜಾಗವಿಲ್ಲವೆಂದು ನಿಲ್ಲಿಸಿದ್ದಾರೆ. ಊರಲ್ಲಿ ಕೇವಲ ಕೊಟ್ಟವರಿಗೆ ಖಾತ್ರಿ ಯಜನೆ ಉದ್ಯೋಗ ನೀಡುತ್ತಿದ್ದಾರೆಂದು ದೂರಿ ಹಗರಣ ತನಿಖೆಗೆ ಆಗ್ರಹಿಸಿದರು.

ಜಲ್ ಜೀವನ್ ಮಿಶನ್‍ನಲ್ಲಿಯೂ ತುಂಬ ವಿಳಂಬವಾಗುತ್ತಿದೆ. ಕಾಮಗಾರಿ ಸರಿಯಾಗಿ ಆಗುತ್ತಲ್ಲವೆಂದು ದೂರುಗಳು ಬಂದವು. ಸಭೆ.ಲ್ಲಿ ಹೊಸ ರೈತ ಸಂಪರ್ಕ ಕಂದ್ರ ಬೇಡಿಕೆ ಕೇಳಿ ಬಂತು. ರೈತರು ಮಾತನಾಡಿ ಬೆಳೆ ವಿಮೆ ಮಂಜೂರಿಗೆ ಶಾಸಕರನ್ನು ಅಭಿನಂದಿಸಿದರು. ಸಿಂಗಲ್ ಫೇಸ್ ಕೆರಂಟ್ ನೀಡುತ್ತಿರೋದಕ್ಕೂ ಕೃತಜ್ಞತೆ ಹೇಳಿದರು.

ಮೇಳಕುಂದಾ ಸೇರಿದಂತೆ ಕಲಬುರಗಿ ದಕ್ಷಿಣ ಮತಕ್ಷೇತ್ರಕ್ಕೆ ತೊಗರಿ ಹಾನಿಯ ಬೆಳೆವಿಮೆ ಮೊತ್ತ 15. 13 ಕೋಟಿ ರು ಬಂದಿದೆ. ಇದರಿಂದ ಮೇಳಕುಂದಾದ 735 ಜನ ರೈತರಿಗೆ ಹಣ ಪಾವತಿಯಾಗಿದೆ. ಕಲಬುರಗಿಯಲ್ಲಿ ಇದೇ ಮೊದಲ ಬಾರಿಗೆ ಸಚಿವರು, ಶಾಸಕರ ಯತ್ನದಿಂದ 635 ಕೋಟಿ ರು ಬೆಳೆವಿಮೆ ಪಾವತಿಯಾಗಿದೆ ಎಂದರು.

ರೈತರು ಹೆಚ್ಚು ಬೆಳೆವಿಮೆ ಮಾಡಿಸಬೇಕು. ಪ್ರಕೃತಿ ವಿಕೋಪಕ್ಕೆ ಬೆಳೆ ವಿಮೆ ರೈತರಿಗೆ ಆಧಾರ. ಕೃಷಿ ಇಲಾಖೆಯೇ ರೈತರ ಬಳಿಗೆ ಹೋಗಿ ಬೆಳೆ ವಿಮೆ ಕಂತು ಭರಿಸಿಕೊಂಡು ಬರುವಂತಹ ಜಾಗೃತಿ ಅಭಿಯಾನ ಶುರುಮಾಡಲಿ ಎಂದು ಆಗ್ರಹಿಸಿದರು.

ತಾವು ಶಾಸಕರಾದ ನಂತರ ಕಳೆದ 2 ವರ್ಷದಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳ ಪಟ್ಟಿ ಮಾಡಿದ ಶಾಸಕ ಅಲ್ಲಂಪ್ರಭು ಪಾಟೀಲ್, ರಸ್ತೆ, ಮೂಲ ಸವಲತ್ತಿನ ಹಲವು ಕಾಮಗಾರಿ ಕೈಗೂಡಿವೆ. ಸಿಎಂ ಅನುದಾನದಲ್ಲಿ ಇನ್ನೂ ಕೆಲಸ ಮಾಡೋದಾಗಿ ಜನತೆಗೆ ಹೇಳಿದರು.

ಸಭೆಯಲ್ಲಿ ತಹಶೀಲ್ದಾರ್ ಆನಂದ್ ಸಿಂಗ್, ತಾಪಂ ಅದಿಕಾರಿ ಸೈಯ್ಯದ್ ಪಟೇಲ್, ಪಿಆರ್‍ಇ ಎಇಇ ಶಾಮಸುಂದರ ಕಾಳೇಕರ್, ಇಂಜಿನಿಯರ್ ಭಾಸ್ಕರ್, ಪಿಆರ್‍ಇ ಶರಣಯ್ಯ ಹಿರೇಮಠ, ತೋಟಗಾರಿಕೆ, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ಹಲವು ಇಲಾಖೆಗಳ ಅಧಿಕಾರಿಗಳಿದ್ದರು. ಭೀಮರಾಯಗೌಡ ಮೇಳಕುಂದಾ , ಗ್ರಾಪಂ ಅಧ್ಯಕ್ಷ ಅಣ್ಣಾರಾಯ ಕೆರಮಗಿ, ಉಪಾಧ್ಯಕ್ಷೆ ರಾಜೇಶ್ವರಿ ದೊಡ್ಮನಿ, ಪಿಡಿಓ ಸುವಣ್ಣ ಬಿರಾದಾರ್, ಪಂಚಾಯ್ತಿ ಸರ್ವ ಸದಸ್ಯರು, ಸುತ್ತಲಿನ ಪಂಚಾಯ್ತಿಗಳ ಅದ್ಯಕ್ಷರು ಇದ್ದರು.

112 ಅರ್ಜಿ ಸ್ವೀಕಾರ- 11 ಸ್ಥಳದಲ್ಲೇ ಇತ್ಯರ್ಥ
ಜನಸ್ಪಂದನ ಸಭೆಯಲ್ಲಿ ಶಾಸಕರು 112 ಅರ್ಜಿ ಸ್ವೀಕರಿಸಿದರು. ಈ ಪೈಕಿ 11 ಅರ್ಜಿ ಸ್ಥಳಧಲ್ಲೇ ಇತ್ಯರ್ಥಪಡಿಸಿದರು. ಜೆಜೆಎಂ ಕಾಮಗಾರಿ, ರಸ್ತೆ, ನೀರಿನ ಸಮಸ್ಯೆ, ಬಸ್ ಸಮಸ್ಯೆ, ಉದ್ಯೋಗ ಖಾತ್ರಿ ಹಗರಣ, ವಿಧವಾ ವೇತನ, ಸಂಧ್ಯಾ ಸುರಕ್ಷಾದಂತಹ ಸಾಮಾಡಿಕ ಭದ್ರತಾ ಯೋಜನೆಗಳ ಬಗ್ಗೆಯೂ ಅರ್ಜಿಗಳು ಬಂದಿವೆ. ಇವೆಲ್ಲ ಅರ್ಜಿಗಳನ್ನು ಪರಿಶೀಲಿಸಿ ವಾರದೊಳಗೆ ಪರಿಹಾರ ನೀಡಲಾಗುತ್ತದೆ. ಪರಿಹಾರ ನೀಡಲಾಗದೆ ಇದ್ದಲ್ಲಿ ಅದಕ್ಕೆ ಸಕಾರ ನೀಡಿ ಅರ್ಜಿ ಸಲ್ಲಿಸಿದವರಿಗೆ ತಿಳಿಸಲಾಗುತ್ತದೆ ಎಂದು

ಶಾಸಕ ಅಲ್ಲಂಪ್ರಭು ಪಾಟೀಲ್ ಹೇಳಿದರು.

ಜನಸ್ಪಂದನೆಗೆ ಗೈರಾದ ಅಧಿಕಾರಿಗಳಿಗೆ ಶೋಕಾಸ್ ನೋಟೀಸ್- ಅಲ್ಲಂಪ್ರಭು
ತಾವು ಶಾಸಕರಾದ ನಂತರ ಕಲಬುರಗಿ ದಕ್ಷಿಣದಲ್ಲಿ 5 ಪಂಚಾಯ್ತಿಗಳಲ್ಲಿ ಯಶಸ್ವಿಯಾಗಿ ಜನಸ್ಪಂದನ ಮಾಡಿದ್ದಾಗಿ ಹೇಳಿರುವ ಸಾಸಕ ಅಲ್ಲಂಪ್ರಭು ಪಾಟೀಲ್ ಮೇಳಕುಂದಾ ಗ್ರಾಮಲ್ಲಿ 6 ನೇ ಜನಸ್ಪಂದನೆ ನಡೆದಿದ್ದು ಈ ಸಭೆಗೆ ಹಲವು ಇಲಾಖೆಯವರು ಅಧಿಕಾರಿಗಳು ಬಂದಿಲ್ಲ. ಇಂತಹ ಅಲಕ್ಷತನ ಸರಿಯಲ್ಲ, ಅಧಿಕಾರಗಳ ಗೈರು ಹಾಜರಿ ಗಮನಸಿದ್ದೇನೆ. ತಕ್ಷಣ ಇವರಿಗೆಲ್ಲರಿಗೂ ನೋಟೀಸ್ ನೀಡಲಾಗುತ್ತದೆ. ತಾಪಂ ಮುಖ್ಯಾಧಿಕಾರಿಗೆ ಈ ಬಗ್ಗೆ ಸೂಚಿಸಿರುವೆ ಎಂದು ಹೇಳಿದ್ದಾರೆ.