Home ಜಿಲ್ಲೆ ಬೆಂಗಳೂರು ಗೋಪಸಂದ್ರ ಉತ್ಸವ: ಆನೆ ಅಂಬಾರಿಯಲ್ಲಿ ಮೆರವಣಿಗೆ

ಗೋಪಸಂದ್ರ ಉತ್ಸವ: ಆನೆ ಅಂಬಾರಿಯಲ್ಲಿ ಮೆರವಣಿಗೆ

filter: 0; fileterIntensity: 0.0; filterMask: 0; captureOrientation: 0; runfunc: 0; algolist: 0; multi-frame: 0; brp_mask:0; brp_del_th:null; brp_del_sen:null; motionR: 65537; delta:1; bokeh:1; module: photo;hw-remosaic: false;touch: (-1.0, -1.0);sceneMode: 8388608;cct_value: 0;AI_Scene: (11, 2);aec_lux: 114.274956;aec_lux_index: 0;albedo: ;confidence: ;motionLevel: 65537;weatherinfo: weather?null, icon:null, weatherInfo:100;temperature: 43;zeissColor: bright;

ಆನೇಕಲ್, ಅ. ೨೨: ನವರಾತ್ರಿ ಹಬ್ಬದ ಪ್ರಯುಕ್ತ ಗೋಪಸಂದ್ರ ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ದ ದೇವಾಲಯವಾದ ಶ್ರೀ ಮುತ್ಯಾಲಮ್ಮ ದೇವಿಯ ಉತ್ಸವ ಮೂರ್ತಿಯನ್ನು ಹಾಗೂ ಗೋಪಸಂದ್ರ ಗೇಟ್ ಬಳಿಯಿರುವ ಆಂಜನೇಯಸ್ವಾಮಿ ಉತ್ಸವ ಮೂರ್ತಿಯನ್ನು ಎರಡು ಆನೆಗಳ ಮೇಲೆ ಕುಳ್ಳರಿಸಿ ಜಂಬೂ ಸವಾರಿಯನ್ನು ಗೋಪಸಂದ್ರ ಗ್ರಾಮದಿಂದ ಬಯಲು ಬಸವೇಶ್ವರ ದೇವಾಲಯದವರೆಗೆ ಮಂಗಳ ವಾದ್ಯಗಳೊಂದಿಗೆ ಮೆರವಣಿಗೆ ನಡೆಸಲಾಯಿತು. ಮಾರ್ಗದ ಉದ್ದಕ್ಕೂ ಮಹಿಳೆಯರು ಹಾಗೂ ಗ್ರಾಮಸ್ಥರು ಆನೆಗಳಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದರು. ಜೊತೆಗೆ ಅಂಬಾರಿ ಮೇಲೆ ಭಕ್ತರು ಪುಷ್ಪ ನಮನ ಸಲ್ಲಿಸಿ ತಮ್ಮ ಭಕ್ತಿಯನ್ನು ಸಮರ್ಪಿಸಿದರು.


ಕಾರ್ಯಕ್ರಮದ ನೇತೃತ್ವವನ್ನು ಗೋಪಸಂದ್ರ ಗೋಪಾಲರೆಡ್ಡಿ ಮತ್ತು ಮುನಿರೆಡ್ಡಿ ಕುಟುಂಬದವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಸ್ವಾಮಿ ಶಿವ ಶಂಭು ನಿಶ್ಚಲಾನಂದ ಸ್ವಾಮೀಜಿಗಳು, ಕೇಂದ್ರ ಮಾಜಿ ಸಚಿವ ಎ.ನಾರಾಯಣಸ್ವಾಮಿ, ಯುವ ನಾಯಕರಾದ ಹುಸ್ಕೂರು ಮದ್ದೂರಪ್ಪ, ನಿಕಟ ಪೂರ್ವ ಅಭ್ಯರ್ಥಿ ಹುಲ್ಲಳ್ಳಿ ಶ್ರೀನಿವಾಸ್ ಇತರ ಜನಪ್ರತಿನಿಧಿಗಳು, ಸ್ಥಳೀಯ ಮುಖಂಡರು ಹಾಗೂ ಗ್ರಾಮಸ್ಥರು, ಭಕ್ತರು ಭಾಗವಹಿಸಿದ್ದರು.