Home ಜಿಲ್ಲೆ ಕಲಬುರಗಿ ರಾಷ್ಟ್ರೀಯ ಏಕತೆಗೆ ಸದ್ಬಾವನೆ ಅಗತ್ಯ

ರಾಷ್ಟ್ರೀಯ ಏಕತೆಗೆ ಸದ್ಬಾವನೆ ಅಗತ್ಯ

ಕಲಬುರಗಿ : ಎಲ್ಲಾ ಧರ್ಮಗಳ ಭಾರತೀಯರ ನಡುವೆ ರಾಷ್ಟ್ರ್ರೀಯ ಏಕತೆ, ಶಾಂತಿ, ಸಹಾನುಭೂತಿ ಮತ್ತು ಕೋಮು ಸೌಹಾರ್ದತೆಯನ್ನು ಉತ್ತೇಜಿಸಲು ಸದ್ಬಾವನಾ ಅಗತ್ಯವಾಗಿದೆ. ವಿವಿಧತೆಯಲ್ಲಿ ಏಕತೆ ಹೊಂದಿರುವ ಭಾರತೀಯರಲ್ಲಿ ಪರಸ್ಪರ ನಂಬಿಕೆ ಹಾಗೂ ಸಹೋದರತ್ವವನ್ನು ಗಟ್ಟಿಗೊಳಿಸಲಾಗುತ್ತದೆ. ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ್ ಹೇಳಿದರು.
ನಗರದ ಆಳಂದ ರಸ್ತೆಯ ಸಂತೋಷ ಕಾಲನಿ ಕ್ರಾಸ್ ಸಮೀಪದ ‘ರಿಪಬ್ಲಿಕ್ ಸ್ಪೋಕನ್ ಇಂಗ್ಲೀμï ಅಕಾಡೆಮಿ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ ‘ರಾಷ್ಟ್ರೀಯ ಸದ್ಬಾವನಾ ದಿನಾಚರಣೆ’ಯಲ್ಲಿ ಪ್ರತಿಜ್ಞೆ ವಿಧಿ ಬೋಧಿಸಿ, ನಂತರ ಅವರು ಮಾತನಾಡುತ್ತಿದ್ದರು.
ಸದ್ಬಾವನಾ ದಿನದ ಪ್ರಮುಖ ವಿಷಯವೆಂದರೆ, ವಿವಿಧ ನಂಬಿಕೆಗಳು ಮತ್ತು ಸಂಸ್ಕøತಿಗಳ ಜನರಲ್ಲಿ ರಾಷ್ಟ್ರೀಯ ಏಕತೆ ತರುವುದಾಗಿದೆ. ಎಲ್ಲರಲ್ಲಿ ಸದ್ಬಾವನಾ ಗುಣ ಬೆಳೆಸಿಕೊಳ್ಳಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ದತ್ತು ಹಡಪದ, ಸಮಾಜ ಸೇವಕರಾದ ಡಾ.ರಾಜಶೇಖರ ಪಾಟೀಲ್, ಶಿವಯೋಗೆಪ್ಪಾ ಎಸ್.ಬಿರಾದಾರ, ದಿನೇಶ್ ಮಿಶ್ರಾ, ಪಾರ್ವತಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.