ಕೊಲ್ಹಾರ:ಅ.೧೮: ತಾಲೂಕಿನ ಮಟ್ಟಿಹಾಳ ಗ್ರಾಮದ ಪ್ರಗತಿಪರ ರೈತ ಮಲ್ಲಿಕಾರ್ಜುನ್ ನಿಂಗಪ್ಪ ಬಿರಾದಾರ್ ಅವರ ಕೃಷಿ ಭೂಮಿಯಲ್ಲಿ ಪಯೋನಿರ್ ಕಂಪನಿಯ ಮೆಕ್ಕೆಜೋಳ ಕ್ಷೇತ್ರೋತ್ಸವ ವಿಜೃಂಭಣೆಯಿAದ ಜರುಗಿತು.
ಪಯೋನಿರ್ ಕಂಪನಿಯ ಹುಬ್ಬಳ್ಳಿಯ ಖಿSಒ ನಾಗನಗೌಡ ಪಾಟೀಲ್, ಕೊಲ್ಹಾರ ತಾಲೂಕ ಎಂ.ಡಿ.ಆರ್. ಹಣಮಂತ ಮುಳವಾಡ ಹಾಗೂ ವಿಜಯಪುರದ ಖಿSಒ ಗಣೇಶ್ ನಾಯಕ್ ಜಂಟಿಯಾಗಿ ಮಾತನಾಡಿ, ಪಯೋನಿರ್ ಕಂಪನಿಯ ಮೆಕ್ಕೆಜೋಳ ಬೀಜ ಬಿತ್ತಿದರೆ ಪ್ರತಿ ಎಕರೆಗೆ ೩೮ ರಿಂದ ೪೧ ಕ್ವಿಂಟಾಲ್‌ಗಳವರೆಗೆ ಉತ್ತಮ ಇಳುವರಿ ಸಿಗುತ್ತದೆ ಎಂದು ತಿಳಿಸಿದರು. ಅಲ್ಲದೆ, ತೆನೆಯ ತುದಿಯವರೆಗೂ ಸಮಾನಾಂತರ ಕಾಳುಗಳು ರೂಪುಗೊಳ್ಳುವು, ೧೮ ಸಾಲುಗಳ ತೆನೆ, ಲಡ್ಡು ತೆಳುವಾಗಿದ್ದು ಕಾಳು ದಪ್ಪವಾಗಿರುವುದು ಇವುಗಳೆಲ್ಲಾ ಉತ್ತಮ ಇಳುವರಿಗಾಗಿ ಕಾರಣವಾಗಿವೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ರೈತ ಮಲ್ಲಿಕಾರ್ಜುನ್ ನಿಂಗಪ್ಪ ಬಿರಾದಾರ್ ಮಾತನಾಡಿ, “ನಾನು ಪಯೋನಿರ್ ಕಂಪನಿಯ ಬೀಜವನ್ನು ಬಿತ್ತಿದ್ದೇನೆ. ಕಂಪನಿಯ ತಾಂತ್ರಿಕ ಮಾರ್ಗದರ್ಶನದಿಂದ ಉತ್ತಮ ಬೆಳೆ ಬಂದಿದೆ. ಇಳುವರಿ ಕೂಡ ಅಧಿಕವಾಗಿದೆ. ಇತರ ರೈತರೂ ಈ ಬೀಜವನ್ನು ಬಳಸಿಕೊಂಡು ಹೆಚ್ಚು ಉತ್ಪಾದನೆ ಪಡೆಯಬೇಕು,” ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಈರಪ್ಪ ಬಿರಾದಾರ್, ಈಶ್ವರಪ್ಪ ಅರಕೇರಿ, ಹನುಮಂತ್ ತೇಲಿ, ಸುರೇಶ್ ಕುಂಬಾರ್, ಸದಾಶಿವ ಜೋಗಿ, ಸಿದ್ದು ನಿಂಡಗುದಿ, ಮಂಜು ಜೋಗಿ ಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದರು.























