ಸಮುದಾಯ ಭವನ ಉತ್ತಮ ನಿರ್ವಹಣೆ ಅತ್ಯವಶ್ಯಕ

ಬೀದರ:ಜೂ.೫:ಸಮುದಾಯ ಭವನಗಳಲ್ಲಿ ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಂಡು, ಅದರ ಸದ್ಬಳಕೆಗೆ ಮುಂದಾಗಬೇಕು ಉತ್ತಮ ನಿರ್ವಹಣೆ ಸಹ ಅತ್ಯಂತ ಅವಶ್ಯಕವಾಗಿದೆ ಎಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಹೇಳಿದರು.
ಬೀದರ್ ದಕ್ಷಿಣ ಕ್ಷೇತ್ರದ ಮನ್ನಾಏಖೇಳ್ಳಿ ಗ್ರಾಮದಲ್ಲಿರುವ ಹನುಮಾನ ದೇವಸ್ಥಾನದ ಬಳಿ ಸುಮಾರು ೧೫ ಲಕ್ಷ ರೂ. ವೆಚ್ಚದ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಕಟ್ಟಡ ನಿರ್ಮಾಣ ಕಾಮಗಾರಿಗ್ರಾಮಸ್ಥರು ಮುಂದೆ ನಿಂತು, ಗುಣಮಟ್ಟದ ಸಮುದಾಯ ಭವನ ನಿರ್ಮಿಸಲು ಆದ್ಯತೆ ನೀಡಬೇಕು, ಭವನಗಳನ್ನು ನಿರ್ಮಾಣ ಮಾಡಿ ಅವನ್ನು ಹಾಗೇ ಬಿಡುವುದಲ್ಲ. ಅವು ಸಮುದಾಯದ ಪ್ರತಿಯೊಬ್ಬರಿಗೂ ಚರ್ಚೆ, ವಿಚಾರ ವಿನಿಮಯ ಮಾಡಿಕೊಳ್ಳುವ ಕೇಂದ್ರಗಳಾಗಿ ನಿರ್ಮಾಣವಾಗಬೇಕಿದೆ ಎಂದರು.
ಗ್ರಾಮಾAತರ ಪ್ರದೇಶದ ಜನರ ಮದುವೆ ಸಮಾರಂಭಗಳಿಗೆ ಹಾಗೂ ಶೆ?ಕ್ಷಣಿಕ ಚಟುವಟಿಕೆಗಳಿಗೆ ಇಂತಹ ಸಮುದಾಯ ಭವನಗಳು ಅತ್ಯಾವಶ್ಯಕ. ಸರಕಾರ ಪ್ರತಿಯೊಂದು ಸಮುದಾಯದವರಿಗೂ ಭವನಗಳ ನಿರ್ಮಾಣಕ್ಕೆ ಅನುದಾನ ನೀಡುತ್ತಿದೆ. ಈ ಸಮುದಾಯ ಭವನವನ್ನು ಅಚ್ಚುಕಟ್ಟಾಗಿ ನಿರ್ಮಾಣ ಮಾಡಿಕೊಡಬೇಕುಎಂದು ಅಧಿಕಾರಿಗಳಿಗೆ ಸೂಚಿಸಿದರು.
ಇನ್ನು ಕೆಲವು ಗ್ರಾಮಗಳಲ್ಲಿನ ಭವನಗಳು ನಿರ್ಮಾಣ ಹಂತದಲ್ಲಿದ್ದು, ಕೆಲವು ಪ್ರಾರಂಭದ ಹಂತದಲ್ಲಿವೆ. ಸಮುದಾಯ ಭವನಗಳು ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾರ್ಯ ಮಾಡಿಕೊಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಗ್ರಾಮಸ್ಥರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣಕೊಡಿಸುವತ್ತ ಗಮನ ಹರಿಸಬೇಕು ಇಂದಿನ ಮಕ್ಕಳು ದೇಶದ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳುವಂತಾಗಬೇಕು ಎಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ಸುರೇಶ್ ಮಾಶೆಟ್ಟಿ, ಸದಾನಂದ ಜೋಶಿ, ಸಂತೋಷಿ ನಿಡವಂಚಾ, ಸಂತೋಷ ಹಳ್ಳಿಖೇಡ, ಬಕ್ಕಪ್ಪ ಬಸರೆಡ್ಡಿ, ನಾರಾಯಣ ರೆಡ್ಡಿ, ರಾಜಕುಮಾರ ಪಾಂಚಾಳ, ಹನುಮಂತ, ಈಶ್ವರ ಬಸರೆಡ್ಡಿ, ವೀರಶೆಟ್ಟಿ ಮಡಿವಾಳ, ಜಗನ್ನಾಥ ಆರ್ಯಾ, ದತ್ತು ರಾಸೂರ, ಭೀಮರೆಡ್ಡಿ ವರವಟ್ಟಿ, ರಾಜು ಮಹಾರಾಜ, ಶಿವಕುಮಾರ, ಆಬೇದ ಅಲಿ, ಮೋಹನ್, ತಾಜೋದಿನ್, ಬಸವರಾಜ, ರಮೇಶ, ನಾಗಯ್ಯ ಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.