ಕ್ರೀಡೆಯಿಂದ ಸದೃಢಆರೋಗ್ಯ ಮತ್ತು ಧಾರ್ಮಿಕದಿಂದ ಒಳ್ಳೆಯ ಸಂಸ್ಕಾರ:ಜೇರಟಗಿ ಶ್ರೀಗಳು

ಕಲಬುರಗಿ:ಸೆ.4:ಮಕ್ಕಳು ಜ್ಞಾನವಂತರಾಗಲುಓದು ಮುಖ್ಯ, ಜೊತೆಗೆ ಸದೃಢಆರೋಗ್ಯವಂತರಾಗಿರಲುಕ್ರೀಡೆ ಮನೋಭಾವಅವಶ್ಯಕವಾಗಿದೆ.ಎಂದು ವಿದ್ಯಾನಗರದ ಶ್ರೀ ಮಲ್ಲಿಕಾರ್ಜುನತರುಣ ಸಂಘದ ವತಿಯಿಂದಜುಲೈ 31ರಂದು ಸಾಯಂಕಾಲ ಹಮ್ಮಿಕೊಂಡಗಣೇಶಉತ್ಸವ ಹಾಗೂ ಸಂಘದ 27ನೇ ವಾರ್ಷಿಕೋತ್ಸವ ನಿಮಿತ್ಯ ಹಮ್ಮಿಕೊಂಡಕ್ರೀಡಾ ಸ್ಪರ್ಧೆಯಲ್ಲಿ ಜಯಗಳಿಸಿದ ಮಕ್ಕಳು ಹಾಗೂ ಪಾಲಕರಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನ ವಿತರಿಸಿ, ಜೇರಟಗಿ ವೀರಕ್ತ ಮಠದಶ್ರೀಗಳಾದ ಮಹಾಂತ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.
ಇಂದಿನ ದಿನಮಾನಗಳಲ್ಲಿ ಶ್ರೀಮಂತ ಪಾಲಕರು ಮಕ್ಕಳಿಗಾಗಿ ಮನೆಯಲ್ಲಿ ಬೆಲೆ ಬಾಳುವ ಮೊಬೈಲ್, ಟಿ.ವಿ., ಫ್ರಿಡ್ಜ್, ಡೈನಿಂಗಟೇಬಲ್, ಸೋಫಾತಂದುಕೊಟ್ಟು ಹೊರಗಡೆ ಹೋಗದ ಹಾಗೆ ನೋಡಿಕೊಳ್ಳುತ್ತಿದ್ದಾರೆ. ಮಕ್ಕಳಿಗೆ ಪರಿಸರದಲ್ಲಿನ ಶುದ್ಧಗಾಳಿ, ಬಿಸಿಲು, ಕ್ರೀಡಾಚಟುವಟಿಕೆ, ಧಾರ್ಮಿಕ ಚಟುವಟಿಕೆಗಳು ಮಕ್ಕಳಿಗೆ ದೈಹಿಕವಾಗಿ ಮತ್ತು ಮಾನಸ್ಸಿಕವಾಗಿ ಸದೃಢಗೊಳಿಸಬಲ್ಲವುಎನ್ನುತ ಮಲ್ಲಿಕಾರ್ಜುತರುಣ ಸಂಘದವರು ಮಕ್ಕಳಿಗೆ ಒಳ್ಳೆಯ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇಂದಿನ ಯಾಂತ್ರಿಕಜೀವನ ಸಾಗಿಸುತ್ತಿರುವಇದೊಂದು ಮಾದರಿಯಕಾರ್ಯಎಂದು ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು.
ಕಲಬುರಗಿ ಮಹಾನಗರ ಪಾಲಿಕೆ ಮಹಾಪೌರರಾದ ಶ್ರೀಮತಿ ವರ್ಷಾರಾಜುಜಾನೆಅವರುಕಾರ್ಯಕ್ರಮ ಉದ್ಘಾಟಿಸಿ ಇಷ್ಟೊಂದು ಸಂಖ್ಯೆಯಲ್ಲಿ ಮಹಿಳೆಯರು ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಬಹಳ ಖುಷಿ ತಂದಿದೆಎನ್ನುತ ಮಹಿಳಾ ಸಭಲೀಕರಣಕ್ಕೆ ನಾವು ನೀವೆಲ್ಲರುಇನ್ನೂ ಹೆಚ್ಚು ಕ್ರೀಯಾಶೀಲರಾಗಬೇಕೆಂದು ಅಭಿಪ್ರಾಯಪಟ್ಟರು.
ಸಂಘದಅಧ್ಯಕ್ಷರಾದ ಶಿವರಾಜ ಅಂಡಗಿಯವರು ಮಾತನಾಡುತ್ತಾ, ಇಲ್ಲಿಯವರೆಗೆ ವಿವಿಧ ಸ್ಪರ್ಧೆಗಳು ಭಾಗವಹಿಸಿ 125ಕ್ಕಿಂತಲೂ ಮಕ್ಕಳು ಮತ್ತು ಪಾಲಕರು ಭಾಗವಹಿಸಿದ್ದು, ಸ್ಪರ್ಧೆಗಳನ್ನು ನೋಡಲು ಬಂದ ಪಾಲಕರಲ್ಲಿಯೇ ಲಾಟರಿ ಮೂಲಕ ನಿರ್ಣಾಯಕರನ್ನಾಗಿಆಯ್ಕೆ ಮಾಡುವ ಮೂಲಕ ಅವರಿಂದಲೇ ಪ್ರತಿಭೆಗಳಿಗೆ ಅಂಕ ಪಡೆದುಕೊಂಡು ಬಹುಮಾನಗಳು ಆಯ್ಕೆ ಮಾಡಿದ್ದು ಹಾಗೂ ಸೊಸೈಟಿಯ ಹಿರಿಯ ಪದಾಧಿಕಾರಿಗಳಿಂದ ಮಕ್ಕಳಿಗೆ ಪ್ರಶಸ್ತಿ ವಿತರಿಸಿದ್ದು ಒಂದು ವಿಶೇಷ ಎಂದುಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಾರಂಭದಲ್ಲಿ ಸಂಘದಅಧ್ಯಕ್ಷ ಶಿವರಾಜ ಅಂಡಗಿಅವರು ನಾಡಗೀತೆ ಶತಮಾನೋತ್ಸವ ಸಂಭ್ರಮಾಚರಣೆ ನಿಮಿತ್ಯ ನಾಡಗೀತೆ ಹಾಡಿ ಸಂಭ್ರಮಿಸಿದರು.ಜೇರಟಗಿ ಶ್ರೀಗಳಾದ ಮಹಾಂತಮಹಾಸ್ವಾಮಿಗಳು ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು, ಮಲ್ಲಿನಾಥದೇಶಮುಖರವರುರಾಷ್ಟ್ರಕವಿ ಕುವೆಂಪುರವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.
ಶ್ರೀನಿಧಿ ಕೋಳಕೂರ ಭರತ ನಾಟ್ಯ ನೃತ್ಯ ಮಾಡಿದರು.ಸ್ಫೂರ್ತಿಗೌಣಿ ಪ್ರಾರ್ಥನೆಗೀತೆ ಹಾಡಿದರುಕರಣಆಂದೋಲ ಸ್ವಾಗತಿಸಿದರು.ಕಾರ್ಯಕ್ರಮದಲ್ಲಿ ಉಮೇಶ ಶೆಟ್ಟಿ, ವಿರೇಶ ನಾಗಶೆಟ್ಟಿ, ಕರಣಆಂದೋಲ, ಶಶಿಧರ ಪ್ಯಾಟಿ, ಶಿವರಾಜ ಕೋಳಕೂರ, ಸಂಗಮೇಶ ಹೆಬ್ಬಾಳ, ಸಂಜುತಂಬಾಕೆ, ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ಪತ್ರ ಮತ್ತು ಬಹುಮಾನ ಪಡೆದ ಪಾಲಕರು
ಪ್ರಥಮ ಬಹುಮಾನ ಪಡೆದವರು: ಶರಣಮ್ಮ ಬೀದಿಮನಿ, ರೇಖಾಅಂಡಗಿ, ಸುರೇಖಾಯಾದಗಿರ,ರಾಜೇಶ್ವರಕಂಠಿ, ಮಾದವಿ ಪಾಟೀಲ, ಶೋಭಾತಂಬಾಕೆ, ಸಾಧ್ವಿ ದಿವಟಗಿ, ಶ್ರೇಯಾಆಂದೋಲಾ
ದ್ವಿತೀಯ ಬಹುಮಾನ ಪಡೆದವರು : ಅಶ್ವಿನಿ ಸಿಕೇದ, ಶಿಲ್ಪಾ ಮಂಠಾಳೆ, ಪೂಜಾ ದಿವಟಗಿ, ನಾಗರತ್ನ ಮುಗುಳಿ, ಪಾವನಿ ಪಾಟೀಲ, ಐಶ್ವರ್ಯ ಮುತ್ತಾ,
ತೃತೀಯ ಬಹುಮಾನ ಪಡೆದವರು : ಅರುಣಾ ಸಂಗಶೆಟ್ಟಿ, ಸುಜಾತಾ ದಿವಟಗಿ, ರೂಪಾಆಂದೋಲಾ, ಉಮಾ ಹೆಬ್ಬಾಳ, ಶೃತಿಕೋಣಿ