Home ಜಿಲ್ಲೆ ಕೌಳೂರಿನಲ್ಲಿ ಶ್ರದ್ಧಾಭಕ್ತಿಯಿಂದ ಗುಡ್ ಫ್ರೈಡೇ ಆಚರಣೆ

ಕೌಳೂರಿನಲ್ಲಿ ಶ್ರದ್ಧಾಭಕ್ತಿಯಿಂದ ಗುಡ್ ಫ್ರೈಡೇ ಆಚರಣೆ

ಯಾದಗಿರಿ:ಏ.೪:ಕ್ರೈಸ್ತ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ಗುಡ್ ಫ್ರೈಡೇ, ವಿಶ್ವದಾದ್ಯಂತ ಭಕ್ತಿಭಾವದಿಂದ ಆಚರಿಸಲ್ಪಟ್ಟಿತು. ಮಾನವಕುಲದ ಪಾಪಗಳ ವಿಮೋಚನೆಗಾಗಿ ಜೀಸಸ್ ಕ್ರಿಸ್ತ್ ತಮ್ಮ ಜೀವವನ್ನೇ ಶಿಲುಬೆಯಲ್ಲಿ ಅರ್ಪಿಸಿದ ದಿನವೆಂದು ಈ ದಿನಕ್ಕೆ ವಿಶೇಷ ಮಹತ್ವವಿದೆ.

ಲೂಕ ಸುವಾರ್ತೆ (೨೩:೪೬) ಯಲ್ಲಿ, ಶಿಲುಬೆಯ ಮೇಲೆ ಇದ್ದಾಗ ಯೇಸು ಕ್ರಿಸ್ತನು “ತಂದೆಯೇ, ನನ್ನ ಆತ್ಮವನ್ನು ನಿನ್ನ ಕೈಗಳಿಗೆ ಒಪ್ಪಿಸುತ್ತೇನೆ” ಎಂದು ಹೇಳಿದ ಕ್ಷಣವು ಅವರ ಪರಮ ಶರಣಾಗತಿ ಮತ್ತು ದೇವರ ಮೇಲಿನ ಅಚಲ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ.

ಗುಡ್ ಫ್ರೈಡೇ ಕೇವಲ ದುಃಖದ ದಿನವಲ್ಲ; ಅದು ಪ್ರೀತಿ, ತ್ಯಾಗ ಮತ್ತು ಕ್ಷಮೆಯ ಮಹತ್ವವನ್ನು ಸಾರುವ ಪವಿತ್ರ ಸಂದರ್ಭವಾಗಿದೆ. ತನ್ನನ್ನು ಹಿಂಸಿಸಿದವರಿಗೂ ಕ್ಷಮೆ ಕೋರಿ ಪ್ರಾರ್ಥಿಸಿದ ಯೇಸು ಕ್ರಿಸ್ತನ ನಡೆ ಮಾನವಕುಲಕ್ಕೆ ದಯೆ ಮತ್ತು ಸಹಿಷ್ಣುತೆಯ ದಾರಿಯನ್ನು ತೋರಿಸಿದೆ.

ಕೌಳೂರು ಗ್ರಾಮದಲ್ಲಿ ಆತ್ಮೀಯ ಆಚರಣೆ

ಯಾದಗಿರಿ ಜಿಲ್ಲೆಯ ಕೌಳೂರು ಗ್ರಾಮದಲ್ಲಿಯೂ ಗುಡ್ ಫ್ರೈಡೇ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಸ್ಥಳೀಯ ಚರ್ಚ್ನಲ್ಲಿ ವಿಶೇಷ ಪ್ರಾರ್ಥನೆಗಳು, ಧ್ಯಾನ ಕಾರ್ಯಕ್ರಮಗಳು ಹಾಗೂ ಶಿಲುಬೆಯ ಮಾರ್ಗದ ಸ್ಮರಣೆಗಳು ನಡೆದವು. ಭಕ್ತರು ಉಪವಾಸದಿಂದ ಪ್ರಾರ್ಥನೆಗಳಲ್ಲಿ ಪಾಲ್ಗೊಂಡು ಯೇಸು ಕ್ರಿಸ್ತನ ತ್ಯಾಗವನ್ನು ಸ್ಮರಿಸಿದರು. ಗ್ರಾಮದಲ್ಲಿ ಭಕ್ತಿ ಮತ್ತು ಶಾಂತಿಯ ವಾತಾವರಣ ಮನೆಮಾಡಿತ್ತು.

ಈ ಸಂದರ್ಭದಲ್ಲಿ ಸಭೆಯ ಉಗ್ರಾಣಿಕ ದುರ್ಗಪ್ಪ ಮಸ್ಕಿ, ಭಾಸ್ಕರ್ ಶೇಖ್ ಸಿಂಧಿ, ಭಾಸ್ಕರ್ ನಿಂಗಪ್ಪ, ಮೋಜಸ್, ಶರಣಪ್ಪ, ಸುಲೇಶನ ಹೆಚ್. ಸುಭಾಷ್, ವಸಂತಮ್ಮ, ಸೋನಮ್ಮ ಸೇರಿದಂತೆ ಹಲವಾರು ಸಭೆಯ ಭಕ್ತರು ಉಪಸ್ಥಿತರಿದ್ದರು.

ಗುಡ್ ಫ್ರೈಡೇ ಸಾರುವ ಶಾಶ್ವತ ಸಂದೇಶವೆAದರೆ – ದುಃಖದ ಬಳಿಕ ಜಯ, ಮರಣದ ಬಳಿಕ ಹೊಸ ಜೀವನ. ಈ ಪವಿತ್ರ ದಿನವು ಪ್ರತಿಯೊಬ್ಬರಲ್ಲೂ ಪ್ರೀತಿ, ಶಾಂತಿ ಮತ್ತು ಕ್ಷಮೆಯ ಮೌಲ್ಯಗಳನ್ನು ಬೆಳೆಸಲಿ.