
ಯಾದಗಿರಿ:ಏ.೪: ಕ್ರೈಸ್ತ ಧರ್ಮದ ಪ್ರಮುಖ ಹಬ್ಬವಾದ ಗುಡ್ ಫ್ರೈಡೇ ಅಂಗವಾಗಿ ನಗರದಲ್ಲಿನ ಮೆಥೋಡಿಸ್ಟ್ ಚರ್ಚ್ನಲ್ಲಿ ಶುಭ ಶುಕ್ರವಾರವನ್ನು ಅತ್ಯಂತ ಭಕ್ತಿಭಾವದಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಘನ ಬೋಧಕರಾದ ರೇವ್. ಎಸ್. ನಂದಕುಮಾರ ಅವರು ಯೇಸು ಕ್ರಿಸ್ತನ ತ್ಯಾಗ, ಪ್ರೀತಿ ಮತ್ತು ಮಾನವಕುಲದ ರಕ್ಷಣೆಯ ಸಂದೇಶವನ್ನು ಸಾರುತ್ತಾ ಭಕ್ತರಿಗೆ ಆತ್ಮೀಯ ಉಪದೇಶ ನೀಡಿದರು. ಯೇಸು ಕ್ರಿಸ್ತನು ಮಾನವಕುಲದ ಪಾಪ ವಿಮೋಚನೆಗಾಗಿ ಶಿಲುಬೆಯ ಮೇಲೆ ಅನುಭವಿಸಿದ ವೇದನೆ ಮತ್ತು ತ್ಯಾಗದ ಮಹತ್ವವನ್ನು ಅವರು ಮನನ ಮಾಡಿಸಿದರು.
ಈ ಸಂದರ್ಭದಲ್ಲಿ ಶ್ರೀಮತಿ ಸುಮತಿ ಶಾಂತರಾಜ, ಶ್ರೀಮತಿ ವಿಜಯ ಕುಮಾರಿ ರಾಜಪಾಲ, ಶ್ರೀಮತಿ ನೀಲಮ್ಮ, ಕೆ. ವಿಜಯ, ಶ್ರೀ ಜೆ. ಶಾಂತ ಕುಮಾರ, ಡಿ. ಎಸ್., ಶ್ರೀ ಇಮ್ಮಾನುವೇಲ ಫೆಡ್ರಿಕ್ ಹಾಗೂ ಶ್ರೀ ಜೋಸೆಫ್ ಕೋಟಗೇರ ಸೇರಿದಂತೆ ಅನೇಕ ಭಕ್ತರು ಭಾಗವಹಿಸಿ ಪ್ರಾರ್ಥನೆಗಳಲ್ಲಿ ತೊಡಗಿದರು.
ಭಕ್ತರು ಮೌನ ಪ್ರಾರ್ಥನೆ ಹಾಗೂ ಧ್ಯಾನದ ಮೂಲಕ ಯೇಸು ಕ್ರಿಸ್ತನ ತ್ಯಾಗವನ್ನು ಸ್ಮರಿಸಿಕೊಂಡು, ಶಾಂತಿ ಮತ್ತು ಸೌಹಾರ್ದತೆಯ ಸಂದೇಶವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಸಂಕಲ್ಪ ಕೈಗೊಂಡರು.






















