Home ಜಿಲ್ಲೆ ಕಲಬುರಗಿ ಮದುವೆ ಸಮಾರಂಭದಲ್ಲಿ 3.69 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಕಳವು

ಮದುವೆ ಸಮಾರಂಭದಲ್ಲಿ 3.69 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಕಳವು

ಕಲಬುರಗಿ,ಮೇ.11-ಮದುವೆ ಸಮಾರಂಭದಲ್ಲಿ 3.69 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಕಳವಾಗಿರುವ ಘಟನೆ ನಗರದಲ್ಲಿ ನಡೆದಿದೆ.
ನಗರದ ಮೋಮಿನಪೂರ ನಿವಾಸಿಯಾಗಿರುವ ಖಾಸಗಿ ಶಾಲಾ ಶಿಕ್ಷಕಿ ಮಹ್ಮದಿ ಬೇಗಂ ಅವರ ಚಿನ್ನಾಭರಣ ಕಳವಾಗಿದ್ದು, ಅವರು ಈ ಸಂಬಂಧ ಎಂ.ಬಿ.ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಉಸ್ಮಾನೀಯಾ ಕಾಲೋನಿಯಲ್ಲಿರುವ ಪಂಕ್ಷನ್ ಹಾಲ್‍ನಲ್ಲಿ ಅತ್ತಿಗೆ ಸೈಯಧಾ ಉವiಯ್ಯಾ ಅವರ ಮದುವೆ ಸಮಾರಂಭ ಇದ್ದ ಪ್ರಯುಕ್ತ ಮಹ್ಮದಿ ಬೇಗಂ ಅವರು ಕುಟುಂಬ ಸಮೇತ ಮದುವೆ ಸಮಾರಂಭಕ್ಕೆ ಹೋಗಿದ್ದು, ಪಂಕ್ಷನ್ ಹಾಲ್‍ನಲ್ಲಿ ರೆಡಿಯಾಗಲು ಆಭರಣಗಳಿರುವ ಪರ್ಸ್‍ನ್ನು ವಧುವಿನ ಕುರ್ಚಿಯ ಕೆಳಗಡೆ ಇಟ್ಟು ಸಂಬಂಧಿಕರೊಂದಿಗೆ ಮಾತನಾಡುತ್ತ ವೇದಿಕೆ ಬಳಿ ಕುಳಿತಿದ್ದಾಗ 1,62,500 ರೂ.ಮೌಲ್ಯದ 13 ಗ್ರಾಂ.ಬಂಗಾರದ ಲಾಕೆಟ್, 75 ಸಾವಿರ ರೂ.ಮೌಲ್ಯದ 6 ಗ್ರಾಂ.ಬಂಗಾರದ ಕಿವಿಯೋಲೆ, 1.25 ಲಕ್ಷ ರೂ.ಮೌಲ್ಯದ 10 ಗ್ರಾಂ.ಬಂಗಾರದ 4 ಉಂಗುರುಗಳು ಮತ್ತು 6,500 ರೂ.ಮೌಲ್ಯದ 25 ಗ್ರಾಂ.ಬೆಳ್ಳಿಯ ಕಾಲಚೈನ್‍ಗಳಿದ್ದ ಪರ್ಸ್ ಮಂಗಮಾಯವಾಗಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ಎಂ.ಬಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.