
ತುಮಕೂರು, ಡಿ. ೨೫- ಇತ್ತೀಚೆಗೆ ಕೋಲಾರ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ೪೪ನೇ ರಾಜ್ಯ ಮಟ್ಟದ ಮಾಸ್ಟರ್ಸ್ ಕ್ರೀಡಾ ಕೂಟದಲ್ಲಿ ಚಿಕ್ಕತಿಮ್ಮಯ್ಯ ತುಂಬಾಡಿ ಜಾವೇಲಿನ್ ಥ್ರೋನಲ್ಲಿ ಪ್ರಥಮ ಸ್ಥಾನ ಮತ್ತು ೧೧೦ ಮೀಟರ್ ಹರ್ಡಲ್ಸ್‌ನಲ್ಲಿ ತೃತೀಯ ಸ್ಥಾನ ಮತ್ತು ಶಾಟ್ ಪುಟ್ ಥ್ರೋನಲ್ಲಿ ತೃತೀಯ ಸ್ಥಾನ ಪಡೆದು ಕೇರಳದ ತಿರುವನಂತಪುರಂನಲ್ಲಿ ಜನವರಿ ೨೮ ರಿಂದ ಫೆಬ್ರವರಿ ೦೧ ವರೆಗೆ ನಡೆಯುವ ರಾಷ್ಟ್ರ ಮಟ್ಟದ ಕ್ರೀಡಾ ಕೂಟಕ್ಕೆ ಆಯ್ಕೆ ಆಗಿದ್ದಾರೆ.
ಇವರನ್ನು ಊರಿನ ಗ್ರಾಮಸ್ಥರು ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯ ನಿರ್ದೇಶಕರು ಆದ ರೋಹಿತ್ ಗಂಗಾಧರ್ ಹಾಗೂ ಸ್ನೇಹಿತರು ಶುಭಾಶಯ ಕೋರಿದರು.




























