ಬಸ್ಸಿನಲ್ಲಿ 2.95 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಕಳವು

ಕಲಬುರಗಿ,ಜು.4-ನಗರದ ನೆಹರು ಗಂಜ್ ಬಸ್ ನಿಲ್ದಾಣದಿಂದ ಅಣಕಲ್ ಗ್ರಾಮಕ್ಕೆ ಹೋಗುವ ಬಸ್ ಹತ್ತುತ್ತಿದ್ದಾಗ ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗ್‍ನಲ್ಲಿ ಇದ್ದ 2.95 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಕಳವಾಗಿದೆ.
ನಗರದ ಮುಸ್ಲಿಂ ಸಂಘ ನಿವಾಸಿ ಜುಬೇರಾ ಗಂಡ ಅಫ್ಜಲ್ (26) ಎಂಬುವವರೆ ಚಿನ್ನಾಭರಣ ಕಳೆದುಕೊಂಡಿದ್ದಾರೆ.
ಇವರು ಮೊಹರಂ ಹಬ್ಬದ ಪ್ರಯುಕ್ತ ಸ್ವಗ್ರಾಮ ಅಣಕಲ್‍ಗೆ ಹೋಗಲು ನಗರದ ನೆಹರು ಗಂಜ್ ಬಸ್ ನಿಲ್ದಾಣದಿಂದ ಅಣಕಲ್‍ಗೆ ಹೋಗುವ ಬಸ್ ಹತ್ತಿದ್ದಾರೆ. ಈ ವೇಳೆ ಕಳ್ಳರು ಅವರ ವ್ಯಾನಿಟಿ ಬ್ಯಾಗ್‍ನಲ್ಲಿ ಇದ್ದ 1.08 ಲಕ್ಷ ರೂ.ಮೌಲ್ಯದ 12 ಗ್ರಾಂ.ಬಂಗಾರದ ಗಲ್ಚೇರಿ, 90 ಸಾವಿರ ರೂ.ಮೌಲ್ಯದ 12 ಗ್ರಾಂ.ಬಂಗಾರದ ಲಾಕೆಟ್, 56 ಸಾವಿರ ರೂ.ಮೌಲ್ಯದ 7 ಗ್ರಾಂ.ಬಂಗಾರದ ಕಿವಿಯೋಲೆ, 21000 ಸಾವಿರ ರೂ.ಮೌಲ್ಯದ 3 ಬಂಗಾರದ ಉಂಗುರ, 20 ಸಾವಿರ ರೂ.ಮೌಲ್ಯದ 26 ತೊಲೆ ಬೆಳ್ಳಿಯ ಕಾಲು ಚೈನಾ ಕಳವು ಮಾಡಿದ್ದಾರೆ.
ಈ ಸಂಬಂಧ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.