
ಬೀದರ್: ಜ.15:ಸದಾಚಾರ, ಸುವಿಚಾರದಿಂದ ಬಾಳಿದ ಜನರು ಭಗವಂತನ ಕೃಪೆಗೆ ಪಾತ್ರರಾಗುತ್ತಾರೆ ಎಂದು ಹಾರಕೂಡದ ಡಾ. ಚನ್ನವೀರ ಶಿವಾಚಾರ್ಯರು ನುಡಿದರು.
ಬಸವಕಲ್ಯಾಣ ತಾಲೂಕಿನ ಆಲಗೂಡ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ 39ನೇ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ ಧರ್ಮ ಸಭೆಯ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಒಂದು ಗ್ರಾಮದ ಭವ್ಯತೆಯನ್ನು ಅಳೆಯಬೇಕಾದರೆ, ಅಲ್ಲಿಯ ಕಟ್ಟಡಗಳಿಂದಲ್ಲ, ಆಸ್ತಿ-ಅಂತಸ್ತಿನಿಂದಲ್ಲ, ಅಲ್ಲಿಯ ಶ್ರೀಮಂತಿಕೆಯಿಂದಲ್ಲ, ಅಲ್ಲಿರುವ ಜನಾಂಗದಿಂದ, ಗ್ರಾಮದ ಜನರಿಂದ ಊರಿಗೆ ಹೆಸರು ಬರುತ್ತದೆ.
ಯಾವ ಗ್ರಾಮದಲ್ಲಿ ಭಾವೈಕ್ಯತೆ, ಭಾತೃತ್ವ ಭಕ್ತಿಯಿಂದ ಜನರು ಬದುಕುತ್ತಾರೋ ಆ ಗ್ರಾಮ ನಂದನ ವನವಾಗಿ ಶಾಂತಿಯ ತೋಟವಾಗಿ ಪರಿಣಮಿಸುತ್ತದೆ.
ಜಾತ್ರೆಗಳು ನಮ್ಮ ಜನರ ಶ್ರೇಯೋಭಿವೃದ್ಧಿಯ ಸಂಕೇತವಾಗಿ ಕಂಗೊಳಿಸಬೇಕು ಎಂದು ನುಡಿದರು.
ಕೆಯುಐಡಿಎಫ್ಸಿ ಶ್ರೀಮತಿ ಸಾವಿತ್ರಿ ಶರಣು ಸಲಗರ ಹಾಗೂ ದಯಾನಂದ ಹಿರೇಮಠ ಮಾತನಾಡಿದರು.
ಮಲ್ಲಿನಾಥ ಹಿರೇಮಠ, ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ರಾಮಪ್ಪ ಗುದಗೆ, ಶ್ರೀಕಾಂತ ಪಾಟೀಲ, ಎಸ್. ಎಸ್. ಪಾಟೀಲ, ಮಂಠಾಳ ಪಿಎಸ್‍ಐ ಶ್ರೀಮತಿ ಸುವರ್ಣ ಮಲ್ಲಶೆಟ್ಟಿ, ನಾಗೇಶ ಮಹಾಜನ ಪಾಲ್ಗೊಂಡಿದ್ದರು.
ರವಿ ಠಮಕೆ ಸ್ವಾಗತಿಸಿದರು.
ಕುಮಾರಿ ಪ್ರತೀಕ್ಷಾ ದಿನೇಶ ಆಲಗೂಡ ಪ್ರಾರ್ಥನಾ ಗೀತೆ ಹಾಡಿದರು.
ಕುಮಾರಿ ಸ್ನೇಹಾ ನಾಗಯ್ಯ ಸ್ವಾಮಿ ಭರತ ನಾಟ್ಯ ಪ್ರದರ್ಶನ ಮಾಡಿದರು.
ರಮೇಶ ರಾಜೋಳೆ ನಿರೂಪಿಸಿದರು.
ನಾಗೇಶಸ್ವಾಮಿ ವಂದಿಸಿದರು.
ಶ್ರೀಕಾಂತ ಪಾಟೀಲ, ಎಸ್. ಎಸ್. ಪಾಟೀಲ, ಮಂಠಾಳ ಪಿಎಸ್‍ಐ ಶ್ರೀಮತಿ ಸುವರ್ಣ ಮಲ್ಲಶೆಟ್ಟಿ, ನಾಗೇಶ ಮಹಾಜನ, ಶರಣು ಆಲಗೂಡ ಮುಂತಾದವರು ಉಪಸ್ಥಿತರಿದ್ದರು























