
ಸೇಡಂ, ನ,07: 2025-26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬಿತ್ತನೆಯಾದ ತೊಗರಿ ಬೆಳೆಗಳಲ್ಲಿ ಗೊಡ್ಡು ರೋಗದಿಂದ ಆತಂಕ ಕೊಳಗಾಗಿದ್ದ ರೈತರಿಗೆ ಕೃಷಿ ವಿಜ್ಞಾನಿಗಳಾದ ಡಾ. ಚಂದ್ರಕಾಂತ ನವಾದಗಿ ಅವರು ಸ್ವತಃ ರೈತರು ತೊಗರಿ ಬಿತ್ತನೆ ಮಾಡಿರುವ ಜಮೀನುಗಳಿಗೆ ತೆರಳಿ ಗೊಡ್ಡು ರೋಗ ನಿರ್ವಹಣೆಗೆ ಸಲಹೆ ನೀಡಿದ್ದರು. ತೊಗರಿ ಆರೋಗ್ಯ ಸಮೀಕ್ಷೆ ಎಂಬ ಹೆಸರಿನಲ್ಲಿ ಈ ಸರ್ವೇಕ್ಷಣಾ ಕಾರ್ಯವು ನವೆಂಬರ್ 5 ರಿಂದ ಪ್ರಾರಂಭವಾಗಿರುವ ಅಂಗವಾಗಿ
ತಾಲೂಕಿನ ವಿವಿಧ ಗ್ರಾಮಗಳಾದ ಮಳಖೇಡ, ಬಿಜನಳ್ಳಿ, ಬೀರನಹಳ್ಳಿ, ಮೀನಹಾಬಾಳ, ಕುಕ್ಕುಂದಾ, ತೋಟ್ನಳ್ಳಿ, ಯಡಗಾ,ಕಾಚೂರ, ಬಿಬ್ಬಳ್ಳಿ ಗ್ರಾಮಗಳಲ್ಲಿ ರೈತರ ಸಮಸ್ಯೆ ಆಲಿಸಿ ತಕ್ಷಣವೇ ಪರಿಹಾರ ನೀಡಲಾಯಿತು ಎಂದು ಹೇಳಿದರು. ಈ ವೇಳೆಯಲ್ಲಿ ಸಹಾಯಕ ಕೃಷಿ ನಿರ್ದೇಶಕರಾದ ವಿಶಾಲ ಕುಮಾರ್, ಕೃಷಿ ಅಧಿಕಾರಿ ಬಸವರಾಜ ಕೋಡಸಾ ಇದ್ದರು.
2025-26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬಿತ್ತನೆಯಾದ ತೊಗರಿ, ಹತ್ತಿ, ಕಬ್ಬು ಹಾಗೂ ಹಿಂಗಾರು ಹಂಗಾಮಿನ ಕಡಲೆ, ಜೋಳ ಮತ್ತು ಇತರ ಬೆಳೆಗಳಲ್ಲಿ ಬರಬಹುದಾದ ಸಮಸ್ಯೆಗಳನ್ನು ಜಂಟಿಯಾಗಿ ಪರಿಶೀಲಿಸಲು, ಕೃಷಿ ಇಲಾಖೆಯ ಅಧಿಕಾರಿಗಳು ಹಾಗೂ ವಿಶ್ವವಿದ್ಯಾಲಯದ ಕೃಷಿ ವಿಜ್ಞಾನಿಗಳನ್ನೊಳಗೊಂಡ ತಂಡಗಳನ್ನು ರಚಿಸಲಾಗಿದೆ.
ವಿಶಾಲಕುಮಾರ್ ಕೃಷಿ ನಿರ್ದೇಶಕರು ಸೇಡಂ
ತೊಗರಿ ಬೆಳೆಗಳಲ್ಲಿ ಗೊಡ್ಡು ರೋಗ ನಿರ್ವಹಣೆ ರೈತರು ಅಬಾಸಿನ್ 1 ಮೀ.ಲೀ ಅಥವಾ ಮ್ಯಾಜಿಸ್ಟರ್ 1 ಮೀ.ಲೀ ಅಥವಾ ಗಂಧಕ ಪುಡಿ 3 ಗ್ರಾಂ ಇದರ ಜೊತೆಗೆ ಜಿಂಕ್ 1 ಗ್ರಾಂ ಬೆರೆಸಿ ಸಿಂಪಡಿಸಬೇಕು.
ಡಾ. ಚಂದ್ರಕಾಂತ ನವಾದಗಿ ಕೃಷಿ ವಿಜ್ಞಾನಿಗಳು

























