
ಕಲಬುರಗಿ:ಜ.29: ”ವಿದ್ಯಾರ್ಥಿಗಳು ಕೇವಲ ಅಂಕಗಳಿಗಾಗಿ ಓದದೆ, ಜೀವನದಲ್ಲಿ ಧರ್ಮ, ನ್ಯಾಯ ಮತ್ತು ನೀತಿಯನ್ನು ಅಳವಡಿಸಿಕೊಳ್ಳಬೇಕು. ಪರಮಾತ್ಮನು ಸರ್ವಜ್ಞನಾಗಿದ್ದು, ನಮ್ಮ ಪ್ರತಿಯೊಂದು ಕಾರ್ಯವನ್ನು ಗಮನಿಸುತ್ತಿರುತ್ತಾನೆ ಎಂಬ ಎಚ್ಚರ ನಮಗಿರಲಿ,” ಮನುಷ್ಯನು ಈ ತಾರುಣ್ಯದಲ್ಲಿ ಸಮಾಜದ ಕಣ್ಣು ತಪ್ಪಿಸಿ ತಪ್ಪು ಮಾಡಬಹುದು, ಆದರೆ ಸರ್ವಜ್ಞನಾದ ಭಗವಂತನ ಕಣ್ಣು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ” ಆದ್ದರಿಂದ ಯುವ ಪೀಳಿಗೆಯು ಅತೀ ಆಸೆಗೆ ಬಲಿಯಾಗಿ ಅಥವಾ ತಾತ್ಕಾಲಿಕ ಸುಖಕ್ಕಾಗಿ ಹೆತ್ತವರ, ಗುರುಗಳ ಕಣ್ಣು ತಪ್ಪಿಸಿ ತಪ್ಪು ದಾರಿ ತುಳಿಯಬಾರದು. ನಾವು ಮಾಡುವ ಪ್ರತಿಯೊಂದು ತಪ್ಪಿಗೂ ದೈವದ ಶಿಕ್ಷೆ ಖಂಡಿತವಾಗಿಯೂ ಇರುತ್ತದೆ ಎಂಬ ಎಚ್ಚರವಿರಲಿ ಹಾಗಾಗಿ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡು ಜೀವನ ರೂಪಿಸಿಕೊಳ್ಳಬೇಕು ಎಂದು ಶ್ರೀ ಉತ್ತರಾದಿ ಮಠದ ಪೀಠಾಧೀಶರಾದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ಮಾರ್ಮಿಕವಾಗಿ ನುಡಿದರು.
ನಗರದ ಸರ್ವಜ್ಞ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ವಿಶೇಷ ಆಶೀರ್ವಚನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ವಿದ್ಯಾರ್ಥಿ ಜೀವನ ಮತ್ತು ಜ್ಞಾನಾರ್ಜನೆಯ ಕುರಿತು ಅಮೂಲ್ಯ ಸಲಹೆಗಳನ್ನು ನೀಡಿದರು. ನಾಡೋಜ ನ್ಯಾಯಮೂರ್ತಿ ಶಿವರಾಜ ವಿ ಪಾಟೀಲರ ಮೌಲ್ಯಗಳು ಹಾಗೂ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಸರ್ವಜ್ಞ ಸಂಸ್ಥೆಯ ಸಂಸ್ಕಾರಭರಿತ ಶೈಕ್ಷಣಿಕ ಕಾರ್ಯವೈಖರಿಯನ್ನು ಶ್ರೀಗಳು ಶ್ಲಾಘಿಸಿದರು.
ಆಶೀರ್ವಚನದ ಪ್ರಮುಖಾಂಶಗಳು:
ದೇವರು ಸರ್ವಜ್ಞ: ತಂದೆ-ತಾಯಿ, ಶಿಕ್ಷಕರು ಅಥವಾ ಪೆÇಲೀಸರ ಕಣ್ಣು ತಪ್ಪಿಸಿ ತಪ್ಪು ಮಾಡಬಹುದು, ಆದರೆ ಎಲ್ಲವನ್ನೂ ಬಲ್ಲ ಆ ಪರಮಾತ್ಮನ ಕಣ್ಣು ತಪ್ಪಿಸಲು ಸಾಧ್ಯವಿಲ್ಲ. ಏಕಾಂತದಲ್ಲೂ ತಪ್ಪು ಮಾಡದಂತೆ ನಮ್ಮ ಮನಸ್ಸನ್ನು ನಿಯಂತ್ರಿಸಿಕೊಳ್ಳಬೇಕು.
ವಿದ್ಯೆಗೆ ಮೂವರು ಶತ್ರುಗಳು: ಜ್ಞಾನಾರ್ಜನೆಯ ಹಾದಿಯಲ್ಲಿ ಮೂರು ಅಡೆತಡೆಗಳಿವೆ ಎಂದು ಶ್ರೀಗಳು ಎಚ್ಚರಿಸಿದರು.
ಅಶುಶ್ರೂμÁ: ಗುರುಗಳ ಸೇವೆ ಮತ್ತು ಆಜ್ಞೆಯನ್ನು ಪಾಲಿಸದಿರುವುದು.
ತ್ವರಿತ (ಅವಸರ): ವಿದ್ಯೆಯನ್ನು ಅತಿ ವೇಗವಾಗಿ ಅಥವಾ ಅವಸರದಿಂದ ಪಡೆಯಲು ಸಾಧ್ಯವಿಲ್ಲ. ಮಧ್ವಾಚಾರ್ಯರು ಹೇಳಿದಂತೆ “ಅತ್ವಯಾದೇವ ಸಿದ್ಧಿಃ” – ನಿಧಾನ ಮತ್ತು ಶ್ರದ್ಧೆಯ ಕಲಿಕೆಯಿಂದ ಮಾತ್ರ ಸಿದ್ಧಿ ಸಾಧ್ಯ.
ಶ್ಲಾಘಾ (ಅತಿಯಾದ ಹೊಗಳಿಕೆ): ಅತಿಯಾದ ಪ್ರಶಂಸೆ ಮನುಷ್ಯನಲ್ಲಿ ಅಹಂಕಾರವನ್ನು ತರುತ್ತದೆ. ಹೊಗಳಿಕೆಗೆ ಮರುಳಾಗದೆ ನಮ್ಮ ಗುರಿಯತ್ತ ಸಾಗಬೇಕು.
ವಿನಯ ಮತ್ತು ಚಾರಿತ್ರ್ಯ: “ವಿದ್ಯಾ ವಿನಯೇನ ಶೋಭತೇ” ಎನ್ನುವಂತೆ ವಿದ್ಯೆಯ ಜೊತೆಗೆ ವಿನಯ ಅತ್ಯಗತ್ಯ. ಸಂಪತ್ತು ಅಥವಾ ಆರೋಗ್ಯ ಕಳೆದುಕೊಂಡರೆ ಮರಳಿ ಪಡೆಯಬಹುದು, ಆದರೆ ಚಾರಿತ್ರ್ಯ (ಅhಚಿಡಿಚಿಛಿಣeಡಿ) ಕಳೆದುಕೊಂಡರೆ ಎಲ್ಲವನ್ನೂ ಕಳೆದುಕೊಂಡಂತೆ.
ಭಗವಂತನೇ ಸರ್ವಜ್ಞ: ಈ ಜಗತ್ತನ್ನು ಸೃಷ್ಟಿಸಿ, ರಕ್ಷಿಸುವ ಪರಮಾತ್ಮನಿಗೆ ಜಗತ್ತಿನ ಎಲ್ಲ ವಸ್ತುಗಳ ಮತ್ತು ಜೀವಗಳ ಜ್ಞಾನವಿದೆ. ನಾವು ಒಂಟಿಯಾಗಿದ್ದಾಗ ಮಾಡುವ ತಪ್ಪುಗಳೂ ಅವನಿಗೆ ತಿಳಿಯುತ್ತವೆ. ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿಯೂ ಧರ್ಮ ಮತ್ತು ನ್ಯಾಯದ ಹಾದಿಯಲ್ಲಿ ನಡೆಯುವುದು ಅತ್ಯಗತ್ಯ.
ಕನಕದಾಸರ ದೃμÁ್ಟಂತ: ಶ್ರೀಪಾದಂಗಳವರು ಕನಕದಾಸರ ಜೀವನದ ಘಟನೆಯನ್ನು ಸ್ಮರಿಸುತ್ತಾ, “ಯಾರೂ ಇಲ್ಲದ ಜಾಗದಲ್ಲಿ ಹಣ್ಣು ತಿನ್ನಲು ಗುರುಗಳು ಹೇಳಿದಾಗ, ಎಲ್ಲೆಡೆ ಭಗವಂತನಿದ್ದಾನೆ ಎಂದು ಹಣ್ಣು ತಿನ್ನದ ಕನಕದಾಸರ ಭಕ್ತಿ ನಮಗೆಲ್ಲರಿಗೂ ಆದರ್ಶವಾಗಬೇಕು” ಎಂದರು.
ಚಾರಿತ್ರ್ಯದ ಮಹತ್ವ: “ಸಂಪತ್ತು ಹೋದರೆ ಏನೂ ಹೋದಂತಲ್ಲ, ಆರೋಗ್ಯ ಹೋದರೆ ಸ್ವಲ್ಪ ಹೋದಂತೆ, ಆದರೆ ಚಾರಿತ್ರ್ಯ ಹೋದರೆ ಎಲ್ಲವನ್ನೂ ಕಳೆದುಕೊಂಡಂತೆ” ಎಂದು ಹೇಳುವ ಮೂಲಕ ವಿದ್ಯೆಯ ಜೊತೆಗೆ ವಿನಯ ಮತ್ತು ಶುದ್ಧ ಚಾರಿತ್ರ್ಯವನ್ನು ಬೆಳೆಸಿಕೊಳ್ಳಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸರ್ವಜ್ಞ ಮತ್ತು ಜಸ್ಟಿಸ್ ಶಿವರಾಜ್ ವಿ. ಪಾಟೀಲ ಕಾಲೇಜಿನ ಸಂಸ್ಥಾಪಕರಾದ ಪೆÇ್ರ. ಚನ್ನಾರೆಡ್ಡಿ ಪಾಟೀಲ್, ಪ್ರಾoಶುಪಾಲರಾದ ಪ್ರಶಾಂತ್ ಕುಲಕರ್ಣಿ, ಪ್ರಮುಖರಾದ ವಿನುತಾ ಆರ್. ಬಿ., ಅನಿತಾ ಕುಲಕರ್ಣಿ, ಪ್ರಭುಗೌಡ ಸಿದ್ದಾರೆಡ್ಡಿ, ಲಕ್ಷ್ಮಿ ಕುಲಕರ್ಣಿ ಹಾಗೂ ಕರುಣೇಶ್ ಹಿರೇಮಠ್ ಅವರು ಉಪಸ್ಥಿತರಿದ್ದರು. ಗುರುರಾಜ್ ಕುಲಕರ್ಣಿ ಅವರು ಕಾರ್ಯಕ್ರಮವನ್ನು ನಿರೂಪಿಸಿ, ಎಲ್ಲರನ್ನೂ ಸ್ವಾಗತಿಸಿದರು. ಶ್ರೀ ಉತ್ತರಾದಿ ಮಠದ ವ್ಯವಸ್ಥಾಪಕರಾದ ಘಂಟಿ ರಾಮಾಚಾರ್, ಬಡಾವಣೆಯ ಭಕ್ತರು, ಉಪನ್ಯಾಸಕರು ಹಾಗೂ ನೂರಾರು ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳು ಅಧರ್ಮದ ಹಾದಿ ತುಳಿಯದೆ, ಉತ್ತಮ ನಾಗರಿಕರಾಗಿ ಬೆಳೆಯಲಿ ಎಂದು ಶ್ರೀಗಳು ಹರಸಿದರು.ನೂರಾರು ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಶ್ರೀಗಳ ಆಶೀರ್ವಾದ ಪಡೆದರು.




























