Home ಜಿಲ್ಲೆ ಕಲಬುರಗಿ ಇಂದಿನಿಂದ ಗೊಬ್ಬೂರ(ಬಿ) ಶ್ರೀ ಬೀರಲಿಂಗೇಶ್ವರ ಜಾತ್ರಾ ಮಹೋತ್ಸವ

ಇಂದಿನಿಂದ ಗೊಬ್ಬೂರ(ಬಿ) ಶ್ರೀ ಬೀರಲಿಂಗೇಶ್ವರ ಜಾತ್ರಾ ಮಹೋತ್ಸವ

ಅಫಜಲಪುರ:ಫೆ.15: ಸುಕ್ಷೇತ್ರ ಗೊಬ್ಬೂರ ಬಿ. ಗ್ರಾಮದ ಶ್ರೀ ಬೀರಲಿಂಗೇಶ್ವರ (ಶ್ರೀ ಮಡ್ಡಿಸಿದ್ದ) ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ಜರುಗಲಿದೆ ಎಂದು ಬೀರಲಿಂಗೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷರು ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮಾಜಿ ಉಪಾಧ್ಯಕ್ಷ ಪ್ರಭುಲಿಂಗ ಕಾಶಿನಾಥ ದೇವತ್ಕಲ ತಿಳಿಸಿದ್ದಾರೆ.

ಸುದ್ದಿಗರರೊಂದಿಗೆ ಮಾತನಾಡಿ ಫೆ.15ರಂದು ಬೆಳಿಗ್ಗೆ ಶ್ರೀ ಮಡ್ಡಿಸಿದ್ದ ದೇವರ ಗದ್ದುಗೆ ರುದ್ರಾಭೀಷೇಕ ಬಿಲ್ವಾರ್ಚನೆ ಹಾಗೂ ಪುಷ್ಪಾರ್ಚನೆ ನಡೆಯಲಿದೆ. ಸಂಜೆ 6 ಗಂಟೆಗೆ ಗ್ರಾಮದ ಪ್ರಮುಖ ಬೀದಿಗಳ ಮೂಲಕ ವಾದ್ಯ ಮೇಳದೊಂದಿಗೆ ಉತ್ಸವ ಮೂರ್ತಿ ಹಾಗೂ ಬೀರಲಿಂಗೆರಶ್ವರ ಪಲ್ಲಕ್ಕಿಯ ಭವ್ಯ ಮೆರವಣಿಗೆ ನಡೆಯಲಿದೆ. ಮೆರವಣಿಗೆ ನಂತರ ಪೂಜಾರಿಯಿಂದ ಹೇಳಿಕೆ ನಡೆಯುವುದು. ಫೆ.17ರಿಂದ ರಾತ್ರಿ 8ಗಂಟೆಯಿಂದ ಜಾತ್ರೆಯ ಪ್ರವಚನ ಹಾಗೂ ನಾಟಕ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.

ಜಾತ್ರೆಯ ಪ್ರಯುಕ್ತ ಚಿನ್ಮಯಗಿರಿಯ ಸಿದ್ದರಾಮ ಶಿವಾಚಾರ್ಯರು, ಸಾನಿಧ್ಯ ಮಾಳಿಂಗರಾಯ ಹುಲಜಂತಿ ಪಟ್ಟದ ಪೂಜ್ಯರು, ವೀರಮಹಾಂತ ಶಿವಾಚಾರ್ಯರು, ಚನ್ನಮಲ್ಲ ಶಿವಾಚಾರ್ಯರು, ರಮೇಶ ಪೂಜಾರಿ, ಬಂಡೇಪ್ಪ ಪೂಜಾರಿ, ಶಿವಪ್ಪ ಪೂಜಾರಿ, ನಿಂಬಣ್ಣ ಪೂಜಾರಿ, ಗುಂಡುರಾವ ಮಹಾರಾಜರು, ಬಳಿರಾಮ ಮಹಾರಾಮ ಮಹಾರಾಜರು, ಮರೇಪ್ಪ ಮುತ್ಯಾ, ಭೀರಣ್ಣ ಮುತ್ಯಾ, ರಸೀದ ಮುತ್ಯಾ, ಮೇದಮೂರ್ತಿ ಶಿವಲಿಂಗಯ್ಯ ಶಾಸ್ತ್ರೀಗಳು ಭಾಗಿಯಾಗಲಿದ್ದಾರೆ ಎಂದು
ದೇವಸ್ಥಾನ ಸಮಿತಿಯ ಸದಸ್ಯರಾದ ನಾಗಣ್ಣ ನಂದೂರ್, ಮಲ್ಲಣ್ಣ ಬೋರಗಿ, ಜಟ್ಟೆಪ್ಪ ಆರ್ ಪೂಜಾರಿ, ಛತ್ರಪ್ಪ ವೈ ಪೂಜಾರಿ, ಜಟ್ಟೆಪ್ಪ ಮಾಯಗೊಂಡ, ಯಲ್ಲಾಲಿಂಗ ಕಾಂಬಳೆ , ಹುಣ್ಚಪ್ಪ ಮೈನಾಳ ಸೇರಿದಂತೆ ಗ್ರಾಮದ ಮುಖಂಡರು ಇದ್ದರು.