ಬೀದರ್:ಸೆ.25: ರೋಟರಿ ಕ್ಲಬ್ ಬೀದರ ಸಹಕಾರದೊಂದಿಗೆ ಗ್ಲೋಬಲ್ ಸೈನಿಕ್ ಅಕಾಡೆಮಿ ವತಿಯಿಂದ ಶಾಲೆಯ ದಶಮಾನೋತ್ಸವದ ಅಂಗವಾಗಿ ಅಕ್ಟೋಬರ್ 26 ರಂದು ಆಯೋಜಿಸಿದ ಸಿಂಧೂರ್ ರಕ್ಷಕ ಓಟ ಕಾರ್ಯಕ್ರಮದ ಪ್ರಯುಕ್ತ ನವೆಂಬರ್ 01 ರಂದು ಶಾಲೆಯ ಆವರಣದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಧ್ವಜಾರೋಹಣ, ಮಾಚ್‍ಪಾಸ್ಟ್, ಪರೇಡ್, ವ್ರೀತ್ ಲೇಯಿಂಗ್ ಮತ್ತು ಉಪನ್ಯಾಸ ಕಾರ್ಯಕ್ರಮಗಳು ನಡೆಯಲಿವೆ. ನವೆಂಬರ್ 01ರ ಬೆ. 11 ಗಂಟೆಗೆ ಆರಂಭವಾಗುವ ಈ ಕಾರ್ಯಕ್ರಮಕ್ಕೆ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷರು ಹಾಗೂ ಲೇಖಕಿ ಸುಧಾಮೂರ್ತಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಗ್ಲೋಬಲ್ ಸೈನಿಕ್ ಅಕಾಡೆಮಿ ಅಧ್ಯಕ್ಷ ಕರ್ನಲ್ ಶರಣಪ್ಪ ಸಿಕೆಂಪುರೆ ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಕರೆದ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, .ಈ ಸಿಂಧೂರ್ ರಕ್ಷಕ ಓಟವನ್ನು ಒಗ್ಗಟ್ಟಾಗಿ ರಕ್ಷಿಸೋಣ ಎನ್ನುವ ಧ್ಯೇಯವಾಕ್ಯದಡಿಯಲ್ಲಿ ನಮ್ಮ ಸಶಸ್ತ್ರಪಡೆಗಳು ಹಾಗೂ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದವರಿಗೆ ಸಮರ್ಪಣೆ ಮಾಡುವುದೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದರು.
ಕರ್ನಲ್ ಶರಣಪ್ಪ ಅವರು ಅಕ್ಟೋಬರ್ 26ರ ಭಾನುವಾರದಂದು ಸಿಂಧೂರ್ ರಕ್ಷಕ್ ಓಟ 10 ಕಿ.ಮೀ. ಇದರ ಧ್ವಜಾರೋಹಣವನ್ನು ಭಾರತದ ಮೊಟ್ಟಮೊದಲ ಬ್ಲೇಡ್ ರನ್ನರ್ ಮತ್ತು ಲಿಂಕಾ ಬುಕ್ ಆಫ್ ರೆಕಾರ್ಡ್ ಹೊಂದಿರುವ ಮೇಜರ್ ಡಿ.ಪಿ.ಸಿಂಗ್ ನೆರವೇರಿಸುವರು. 6 ಕಿ.ಮೀ. ಓಟದ ಧ್ವಜಾರೋಹಣ ಒಲಿಂಪಿಯನ್, ಭಾರತದ ಹೈ ಜಂಪ್ ದಾಖಲೆದಾರ ಮತ್ತು ಅರ್ಜುನ ಪ್ರಶಸ್ತಿ ಪುರಸ್ಕøತರಾದ ಕ್ಯಾಪ್ಟನ್ ಭೀಮಸಿಂಗ್, 3 ಕಿ.ಮೀ. ಓಟದ ಧ್ವಜಾರೋಹಣವನ್ನು ರೋಟರಿ ಕ್ಲಬ್‍ನ ಜಿಲ್ಲಾ ಗವರ್ನರ್ ರವೀಂದ್ರ ನೆರವೇರಿಸುವರು. ಸಿಂಧೂರ್ ರಕ್ಷಕ್ ಓಟವು ಗ್ಲೋಬಲ್ ಶಾಲೆಯಿಂದ ಆರಂಭವಾಗಿ ಕೊನೆಗೆ ಅಲ್ಲಿಯೇ ಮುಕ್ತಾಯಗೊಳ್ಳಲಿದ್ದು, ಓಟದಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಟೀಶರ್ಟ್, ಪದಕ ಮತ್ತು ಇ-ಪ್ರಮಾಣ ಪತ್ರ ನೀಡಲಾಗುವುದು. 10 ಕಿ.ಮೀ. ಓಟದ ಪುರುಷ ಹಾಗೂ ಮಹಿಳಾ ವಿಭಾಗದ ಮೊದಲ ಮೂರು ವಿಜೇತರಿಗೆ ಕ್ರಮವಾಗಿ ರೂ. 10 ಸಾವಿರ, ರೂ 8 ಸಾವಿರ ಹಾಗೂ ರೂ. 5 ಸಾವಿರ ಬಹುಮಾನ ಹಾಗೂ ಟ್ರೋಫಿ ನೀಡಲಾಗುತ್ತಿದೆ. ಓಟ ಮುಗಿದ ನಂತರ ಉಪಾಹಾರ ಹಾಗೂ ಶಕ್ತಿಯುತ ಪಾನೀಯ ಒದಗಿಸಲಾಗುವುದು. ವಿಶೇಷ ವೆಬ್‍ಸೈಟ್ ಮತ್ತು ಲ್ಯಾಂಡಿಗ್ ಪೇಜ್ ಮೂಲಕ ಆನ್‍ಲೈನ್ ನೊಂದಣಿ ಮಾಡಿಸಿಕೊಳ್ಳಬೇಕು. ಒಬ್ಬರಿಗೆ ಭಾಗವಹಿಸುವ ಶುಲ್ಕ ರೂ. 200 ಇರುತ್ತದೆ. ಅಂದಿನ ಓಟದಲ್ಲಿ ಸುಮಾರು 5 ಸಾವಿರ ಓಟಗಾರರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಕರ್ನಲ್ ಶರಣಪ್ಪ ಸಿಕೆಂಪುರೆ ತಿಳಿಸಿದರು.
ಇದೇ ವೇಳೆ ಸಿಂಧೂರ್ ರಕ್ಷಕ್ ಓಟದ ನೊಂದಣಿಗಾಗಿ ಹಾಯ್ ಐಡಿಯಲ್ಸ್ ಕಂಪನಿ ವತಿಯಿಂದ ತಯಾರಿಸಿದ ವಿಶೇಷ ವೆಬ್‍ಸೈಟ್ ಮತ್ತು ಲ್ಯಾಂಡಿಂಗ್ ಪೇಜ್ ಬಿಡುಗಡೆಗೊಳಿಸಲಾಯಿತು.
ಸಿಂಧೂರ್ ರಕ್ಷಕ್ ಓಟ ಇದು ಕೇವಲ ಕ್ರೀಡಾ ಕಾರ್ಯಕ್ರಮವಲ್ಲ. ಬದಲಾಗಿ ದೇಶದ ಏಕತೆ ಮತ್ತು ಕೃತಜ್ಞತೆಯ ಸಂಕೇತವಾಗಿದೆ. ದೇಶವು ಹಲವು ಸವಾಲುಗಳನ್ನು ಎದುರಿಸುತ್ತಿರುವ ಈ ಸಮಯದಲ್ಲಿ ಒಗ್ಗಟ್ಟಾಗಿ ರಕ್ಷಿಸೋಣ ಎಂಬ ನಮ್ಮ ವಿಷಯದಂತೆ ಪ್ರತಿ ನಾಗರಿಕರು, ಕುಟುಂಬಗಳು, ಸಂಸ್ಥೆಗಳು ಒಂದಾಗಿ ಬಂದು ನಮ್ಮ ಸಶಸ್ತ್ರ ಪಡೆಗಳಿಗೆ ಗೌರವ ಸಲ್ಲಿಸಲು ನಾವು ಎಲ್ಲರನ್ನೂ ಆಹ್ವಾನಿಸುತ್ತಿದ್ದೇವೆ. ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಕರ್ನಲ್ ಕರೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಅಕಾಡೆಮಿ ಪದಾಧಿಕಾರಿಗಳಾದ ರಮೇಶ ಪಾಟೀಲ ಸೋಲಪುರ, ರೋಟರಿ ಕ್ಲಬ್‍ನ ಹಾವಶೆಟ್ಟಿ ಪಾಟೀಲ, ಡಾ. ರಘು ಕೃಷ್ಣಮೂರ್ತಿ, ಡಾ.ಸುವಿನ್ ಪಾಟೀಲ, ಬಸವಕುಮಾರ ಪಾಟೀಲ ಖಾಜಾಪುರ, ಡಾ. ನಾಗೇಶ ಪಾಟೀಲ, ಆದೀಶ ವಾಲಿ, ಅನೀಲ ಬಿರಾದಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.























