ಗ್ಲೋಬಲ್ ಅಚೀವರ್ಸ್ ಪ್ರಶಸ್ತಿ ಪ್ರದಾನ

ಕಲಬುರಗಿ,ಮೇ.28: ಆಧುನಿಕ ಕೃಷಿ ಮತ್ತು ಸಮಾಜ ಸೇವೆ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿರುವ ಕಲಬುರಗಿ ಜಿಲ್ಲೆಯ ಹನುಮಂತರಾವ್ ಭೂಸನೂರ್ ಅವರಿಗೆ ಇತ್ತೀಚೆಗೆ ಜಾರ್ಜಿಯಾ ದೇಶದ ರಾಜಧಾನಿ ಟಿಬಿಲಿಸಿಯಲ್ಲಿ ಏರ್ಪಡಿಸಲಾಗಿದ್ದ ಅಂತರರಾಷ್ಟ್ರೀಯ ಸಾಧಕರ ಸಮ್ಮೇಳನದಲ್ಲಿ ಗ್ಲೋಬಲ್ ಅಚೀವರ್ಸ್ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಜಾರ್ಜಿಯಾ ಮತ್ತು ಭಾರತ ದೇಶಗಳ ಅನೇಕ ಗಣ್ಯರ ಸಮ್ಮುಖದಲ್ಲಿ ನಡೆದ ಈ ಸಮಾರಂಭದಲ್ಲಿ, ಹನುಮಂತರಾವ್ ಅವರ ಸಾಧನೆಯನ್ನು ಬಿಂಬಿಸುವ ಕಿರು ಚಿತ್ರವನ್ನೂ ಪ್ರದರ್ಶಿಸಲಾಯಿತು.