ರೈತರ ಮಕ್ಕಳಿಗೆ ಹೆಣ್ಣು ಕೊಡುವುದರಿಂದ ನಿಮ್ಮ ಮಕ್ಕಳು ಸುಖವಾಗಿರುತ್ತಾರೆ ; ಕವಿತಾ ಮಿಶ್ರಾ

ಅಫಜಲಪುರ ;ನ.14: ರೈತರ ಮಕ್ಕಳಿಗೆ ಹೆಣ್ಣು ಕೊಡಲು ಇಂದಿನ ಜನರು ಮುಂದೆ ಬರುತ್ತಿಲ್ಲ, ಕೇವಲ ಡಾಕ್ಟರ್, ಎಂಜಿನಿಯರ್ ಬೇಕು ಎನ್ನುತ್ತಾರೆ ಹೊರತು ರೈತ ಬೇಕು ಅನ್ನಲ್ಲ. ಆದರೆ, ರೈತ ಬೆಳೆದ ದವಸಧಾನ್ಯ ಮಾತ್ರ ಬೇಕು
ಎನ್ನುತ್ತಾರೆ ಎಂದು ಪ್ರಗತಿಪರ ರೈತ ಮಹಿಳೆ ಕವಿತಾ
ಮಿಶ್ರಾ ಹೇಳಿದರು.

ತಾಲೂಕಿನ ಘತ್ತರಗಾ ಗ್ರಾಮದ ಸರಕಾರಿ
ಪ್ರೌಢಶಾಲೆಯಲ್ಲಿ ಭೀಮಾ ರೈತ ಉತ್ಪಾದಕರ ಕಂಪನಿ
ಉದ್ಘಾಟನಾ ಸಮಾರಂಭದಲ್ಲಿ ಕೃಷಿ ಕುರಿತು ವಿಚಾರ
ಸಂಕಿರಣದಲ್ಲಿ ಮಾತನಾಡಿದ ಅವರು ಇಂದಿನ
ದಿನಗಳಲ್ಲಿ ರೈತ ಬೆಳೆದ ಬೆಳೆಗಳಿಗೆ ಬೆಲೆ ನಿಗದಿ
ಮಾಡುವ ಹಕ್ಕು ಯಾವುದೇ ರೈತರಿಗೆ ಸರಕಾರ
ಇಲ್ಲಿವರೆಗೂ ಕೊಟ್ಟುಈ ಜಗತ್ತಿನಲ್ಲಿ ನಿಮ್ಮ ಕಷ್ಟದ
ಕಾಲಕ್ಕೆ ಯಾರೂ ಸಹಾಯಕ್ಕೆ ಬರುತ್ತಾರೋ ಇಲ್ಲವೋ
ಗೊತ್ತಿಲ್ಲ. ಆದರೆ, ಭೂಮಿ ಮಾತ್ರ ನಿಮಗೆ
ಕೈಬಿಡುವುದಿಲ್ಲ, ಕೃಷಿಯಲ್ಲಿ ವಿಭಿನ್ನವಾಗಿ ಪ್ರಯೋಗ
ಮಾಡಿದಾಗ ಮಾತ್ರ ಕೃಷಿಯಲ್ಲಿ ಯಶಸ್ವಿ ಕಾಣಲು ಸಾಧ್ಯ ಎಂದರು.

ಭೀಮಾರೈತ ಉತ್ಪಾದಕರ ಕಂಪನಿ ಮಾಲಿಕರಾದ
ಪ್ರಕಾಶ್ ಹಿರೇಮಠ ಮಾತನಾಡಿ, ರೈತ ಮತ್ತು
ಮಾರುಕಟ್ಟೆ ನಡುವೆ ಸೇತುವೆಯಾಗಿ ಭೀಮಾ ರೈತ
ಉತ್ಪಾದಕರ ಕಂಪನಿ ಕೆಲಸ ಮಾಡಲಿದೆ.ದಲ್ಲಾಳಿಗಳ
ಹಾವಳಿ ತಪ್ಪಿಸುವ ಮತ್ತು ರೈತರಿಗೆ ಉತ್ತಮವಾದ ಬೆಲೆ
ಸಿಗಬೇಕು ಎಂಬುದು ಪ್ರಾರಂಭವಾಗಿದೆ ಎಂದರು.

ಈ ಸಂದರ್ಭದಲ್ಲಿ ಡಾ.ಶಿವಾನಂದ ಮಹಾಸ್ವಾಮಿಜಿ,

ಗುರುಲಿಂಗಯ್ಯ ಮಹಾಸ್ವಾಮೀಜಿ, ಪ್ರಥಮ ದರ್ಜೆ ಗುತ್ತಿಗೆದಾರರಾದ ಎಸ್.ವೈ.ಪಾಟೀಲ್, ಗ್ರಾಪಂ ಅಧ್ಯಕ್ಷೆ ನೀಲಮ್ಮ ಹೂಗಾರ, ಶಿವಕುಮಾರ ನಾಟಿಕಾರ, ಕೆ.ಜಿ.ಪೂಜಾರಿ,ಎಸ್. ಎಚ್.ಗಡಗಿಮನಿ, ಸಂತೋಷ ಬುಡಗೆ, ಶಂಕರೇಗೌಡ ಹಾಳಕಿ, ಪಾಟೀಲ್ , ರೇವಣಸಿದ್ದಪ್ಪ ವಿಠಲ್ ನಾಟಿಕಾರ್, ಸಿದ್ದಪ್ಪ ಗುಡೇದ್, ಭಾಗಣ್ಣ ಮಾಂಗ, ಬಾಬು ಪಟೇಲ್, ಶ್ರೀಶೈಲ್ ಅಮ್ಮಣ್ಣಿ ಮಲ್ಲಪ್ಪ ಹಂಚನಾಳ, ಬಸವರಾಜ ಮತ್ನಾಳ್, ಮಲ್ಲಯ್ಯ ಕರಭಂಟನಾಳ, ಭಗವಂತ ರೇವೂರ, ಮರೆಪ್ಪ ಜಮಾದಾರ ಉಪಸ್ಥಿತರಿದ್ದರು.

ರೈತರು ಕಷ್ಟದ ಸಮಯದಲ್ಲಿ ಗಟ್ಟಿಯಾಗಿ ನಿಂತು ಧೈರ್ಯವಾಗಿ ಇದ್ದು, ಭೂಮಿ ತಾಯಿಯನ್ನು ನಂಬಿದರೆ ಕೃಷಿಯಲ್ಲಿ ಯಶಸ್ವಿ ಕಾಣಲು ಸಾಧ್ಯ. ರೈತರ ಮಕ್ಕಳಿಗೆ ಹೆಣ್ಣು ಕೊಡಲು ಎಲ್ಲರೂ ಮುಂದಾಗಬೇಕು. ಅಂದಾಗ ಮಾತ್ರ ರೈತರು ಮಕ್ಕಳು ಕೂಡ ಅಭಿವೃದ್ಧಿ ಹೊಂದಲು ಸಾಧ್ಯ.

  • ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು
    ಶ್ರೀ ಮಳೇಂದ್ರ ಮಠ, ಅಫಜಲಪುರ.