Home ಜಿಲ್ಲೆ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಟ್ಟು ಸಂಸ್ಕಾರವನ್ನು ನೀಡಿರಿ

ಮಕ್ಕಳಿಗೆ ಉತ್ತಮ ಶಿಕ್ಷಣ ಕೊಟ್ಟು ಸಂಸ್ಕಾರವನ್ನು ನೀಡಿರಿ

ಧಾರವಾಡ, ಜೂ೨: ಗ್ರಾಮೀಣ ವಲಯದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೨೦೨೬-೨೭ ನೇ ಸಾಲಿನ ಶೈಕ್ಷಣಿಕ ವರ್ಷದ ಜಿಲ್ಲಾ ಮಟ್ಟದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಉದ್ಘಾಟನೆ ಮಾತನಾಡಿ, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಟ್ಟು ಶಾಶ್ವತ ಸಂತೋಷ ಹಾಗೂ ಸಂಸ್ಕಾರವನ್ನು ನೀಡಿರಿ ಎಂಬ ಸಂದೇಶವನ್ನು ಜಿಲ್ಲಾಧಿಕಾರಿ ಆರ್. ಸ್ನೇಹಲ್ ಪಾಲಕರಿಗೆ ನೀಡಿದರು.


ಶಿಕ್ಷಣವು ಮಗುವಿನಲ್ಲಿ ಸುಪ್ತವಾಗಿರುವ ಪ್ರತಿಭೆಗಳನ್ನು ಹೊರಗೆಡುವುತ್ತದೆ. ಅದು ಮಗುವಿನ ದೈಹಿಕ ಮತ್ತು ಮಾನಸಿಕ ಹಾಗೂ ಬೌದ್ಧಿಕ ಸಾಮರ್ಥ್ಯಗಳನ್ನು ಅಭಿವೃದ್ಧಿಗೊಳಿಸುತ್ತದೆ. ಶಿಕ್ಷಣದಿಂದ ಶಿಸ್ತು, ಸಂಯಮ, ಸಹಕಾರ, ಸ್ವಾವಲಂಬನೆ, ಗೌರವಪಡೆಯುವಂತಾಗುತ್ತದೆ. ಮಕ್ಕಳೊಂದಿಗೆ ಭಾವನಾತ್ಮಕ ಗುಣಗಳು ಬೆಳೆಯುತ್ತವೆ. ಶಿಕ್ಷಣದಿಂದ ಆರೋಗ್ಯ ವೃದ್ಧಿಸುತ್ತದೆ. ಎಸ್‌ಎಸ್‌ಎಲ್ಸಿ ವಿದ್ಯಾರ್ಥಿಗಳು ಇನ್ನು ೧೦ ವರ್ಷಗಳಲ್ಲಿ ನಿರಂತರವಾಗಿ ಅಭ್ಯಾಸ ಮಾಡಿ ನಮ್ಮಂತೆ ಉತ್ತಮ ಸಾಧನೆ ಮಾಡಿ ಉನ್ನತ ಹುದ್ದೆಯಲ್ಲಿ ಕಾರ್ಯ ನಿರ್ವಹಿಸಿ ತಾವು ಕಲಿತ ಶಾಲೆಗೆ, ಶಿಕ್ಷಕರಿಗೆ ಹಾಗೂ ಪೋಷಕರಿಗೆ ಗೌರವ ತರಬೇಕ. ಕಲಿಕೆಯಲ್ಲಿವಿಶೇಷ ಅಗತ್ಯವುಳ್ಳ ಮಕ್ಕಳ ಬಗ್ಗೆ ಸೂಕ್ತವಾಗಿ ಮಾರ್ಗದರ್ಶನ ನೀಡಿ ಅವರ ಕಲಿಕೆಗೆ ಪೂರಕವಾಗುವ ವಾತಾವರಣವನ್ನು ಸೃಷ್ಟಿಸುವಂತೆ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.


ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಾಟೀಲ್ ಭುವನೇಶ್ದೇವಿದಾ ಮಾತನಾಡಿ, ಶಾಲೆ ಆರಂಭವಾಗಿದೆ- ಎಲ್ಲರೂ ಶಾಲೆಗೆ ಬನ್ನಿರಿ, ನಿಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಿ ಎಂದು ಶಾಲಾಶಿಕ್ಷಣ ಇಲಾಖೆಯ ಪರವಾಗಿ ವಿನಂತಿಸಿದರು. ಸತತವಾಗಿ ೩ ವರ್ಷಗಳಿಂದ ಎಸ್‌ಎಸ್‌ಎಲ್ಸಿ ಫಲಿತಾಂಶ ಸುಧಾರಣೆಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಅದರ ಫಲವಾಗಿ ಜಿಲ್ಲೆಯ ಫಲಿತಾಂಶ ಕಳೆದ ವರ್ಷ ೧೮ ನೇ ಸ್ಥಾನ ಈ ವರ್ಷ ೧೨ ನೇ ಸ್ಥಾನ ಬಂದಿದ್ದು, ಫಲಿತಾಂಶ ಉತ್ತಮಪಡಿಸುವಲ್ಲಿ ಕಾರ್ಯ ನಿರ್ವಹಿಸಿದ ಎಲ್ಲ ಶಿಕ್ಷಕರಿಗೆ, ಮುಖ್ಯೋಪಾಧ್ಯಾಯರಿಗೆ, ಪಾಲಕರಿಗೆ ಹಾಗೂ ಇಲಾಖಾ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು. ಪ್ರಸ್ತುತ ವರ್ಷ ರಾಜ್ಯದಲ್ಲಿ ಜಿಲ್ಲೆಯು ೫ ನೇ ಸ್ಥಾನಕ್ಕೆ ಬರುವಂತೆ ಎಲ್ಲರೂ ಸಾಮೂಹಿಕವಾಗಿ ಕಾರ್ಯ ನಿರ್ವಹಿಸುವಂತೆ ಸೂಚಿಸಿದರು.


ಉಪನಿರ್ದೇಶಕರು ಉಮೇಶ ಬಮ್ಮಕ್ಕನವರ ಪ್ರಾಸ್ಥಾವಿಕವಾಗಿ ಮಾತನಾಡಿ, ಸರಕಾರಿ ಶಾಲೆ ಎಂದರೆ ಆಲಸ್ಯ ಬೇಡ. ಇಂದಿನ ಸಮಾಜದಲ್ಲಿ ಉತ್ತಮ ಸಾಧನೆ ಮಾಡಿರುವ ಬಹುತೇಕರು ಸರಕಾರಿ ಶಾಲೆಯ ವಿದ್ಯಾರ್ಥಿಗಳಾಗಿದ್ದರು ಎಂಬುದೇ ಹೆಮ್ಮೆಯವಿಚಾರ ಎಂದರು.


ಡಿವೈಪಿಸಿ ಎಸ್.ಎಂ. ಹುಡೇದಮನಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲ ಗಣ್ಯಮಾನ್ಯರನ್ನು ಸ್ವಾಗತಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣ ಸದಲಗಿ ವಂದಿಸಿದರು.


ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಹಿರಿಯ ಕಿರಿಯ ಅಧಿಕಾರಿಗಳು, ಧಾರವಾಡ ಗ್ರಾಮೀಣ ಹಾಗೂ ಅಳ್ನಾವರ ತಾಲೂಕ ಘಟಕದಎಲ್ಲ ನೌಕರ ಹಾಗೂ ಶಿಕ್ಷಕ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಸರ್ವ ಪದಾಧಿಕಾರಿಗಳು ಹಾಗೂ ಹೊಸದಾಗಿ ಆಯ್ಕೆಯಾದ ರಾಜ್ಯಮಟ್ಟದ ಹಾಗೂ ಜಿಲ್ಲಾಮಟ್ಟದ ಎಲ್ಲ ಪದಾಧಿಕಾರಿಗಳು ಆಗಮಿಸಿದರು. ಮಾಜಿ ಗ್ರಾಮಪಂಚಾಯತ್ ಸರ್ವ ಸದಸ್ಯರು, ಬಿಆರಪಿ, ಸಿ.ಆರ್.ಪಿ, ಎಸ್ಡಿಎಂಸಿ, ಅಧ್ಯಕ್ಷರು ಸರ್ವಸದಸ್ಯರು, ಮುಖ್ಯ ಗುರುಗಳು. ಶಿಕ್ಷಕರು ವಿದ್ಯಾರ್ಥಿಗಳು ಭಾಗವಹಿಸಿದ್ದರು.


ಶಾಲಾ ಪ್ರಾರಂಭೋತ್ಸವ :ಮಕ್ಕಳಿಗೆ ಹೂ ಹಾಗೂ ಕಿರೀಟ ತೊಡಿಸಿ, ಸ್ವಾಗತಿಸಿದರು. ಮಕ್ಕಳಿಗೆ ಪಠ್ಯಪುಸ್ತಕ, ಸಮವಸ್ತç ಇತರೆ ಸೌಲಭ್ಯಗಳನ್ನು ಸಾಂಕೇತಿಕವಾಗಿ ವಿತರಿಸಿದರು. ದಾಖಲಾದ ಮಕ್ಕಳನ್ನು ಬಲೂನು, ಬಣ್ಣದ ಕಾಗದಗಳಿಂದ ಅಲಂಕರಿಸಿದ ವಾದ್ಯಮೇಳದೊಂದಿಗೆ ಶಾಲೆಗೆ ಕರೆತರಲಾಯಿತು. ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವತಿಯಿಂದ ಶಾಲಾಪ್ರಾರಂಭೋತ್ಸವದAದು ತೆಂಗಿನಗರಿ, ತಳಿರುತೋರಣ, ಹೂವುಗಳಿಂದ ಅಲಂಕಾರ ಮಾಡಿ ಮೆರವಣಿಗೆಗೆ ಸಿದ್ಧಪಡಿಸಿಕೊಂಡಿದ್ದರು. ಈಕಾರ್ಯಕ್ರಮದಲ್ಲಿ ಅತ್ಯಂತ ಅದ್ಧೂರಿಯಿಂದ ಮಕ್ಕಳನ್ನು ಕರೆದುಕೊಂಡು ಮೆರವಣಿಗೆ ಮೂಲಕ, ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸಬೇಕೆಂದು ಘೋಷಣೆಗಳನ್ನು ಕೂಗಿದರು. ಅದಕ್ಕೆ ಪೂರಕವಾಗಿ ಅನೇಕ ಘೋಷಣಾ ವಾಕ್ಯಗಳ ಚಿಕ್ಕ ಚಿಕ್ಕ ಫಲಕ ಸಿದ್ಧಪಡಿಸಿ ಮಕ್ಕಳ ಕೈಗೆ ಕೊಡಲಾಗಿತ್ತು. ಪಾಲಕರಿಗೆ ಒಂದು ವಿನಮ್ರ ಮನವಿ ಎಂಬನೂರಾರು ಘೋಷಣೆ ಮಾಡಲಾಯಿತು. ಮಕ್ಕಳು ಸಹ ಆಸಕ್ತಿಯಿಂದ ಭಾಗವಹಿಸಿ ಶಾಲೆಗೆ ಆಗಮಿಸಿದರು.