ಇಂಡಿ : ಅ.೨೮: ಇಂಡಿ ವಿಧಾನ ಸಭಾ ಮತಕ್ಷೇತ್ರ ದಲ್ಲಿ ಸ್ವಾತಂತ್ಯದ ನಂತರ ಯಾವ ಪಕ್ಷವೂ. ಕೂಡ ಇಂಡಿ ತಾಲೂಕೀಗೆ ಸಚಿವ ಸ್ಥಾನ ನೀಡದೆ ಇರುವುದು ವಿಷಾದನೀಯ ಸಂಗತಿ. ಸರ್ಕಾರದಲ್ಲಿ ಸಚಿವ ಸಂಪುಟ ಪುನರಚನೆ ಮಾತು ಕೇಳಿ ಬರುತ್ತಿದ್ದು ಹಾಗೇನಾದರೂ ಸಚಿವ ಸಂಪುಟ ರಚನೆ ಮಾಡಿದರೆ ಶ್ರೀ ಯಶವಂತರಾಯಗೌಡ ವಿ ಪಾಟೀಲ ಅವರಿಗೇ ನೀಡಬೇಕು ಎಂದು ಯುವ ಮುಖಂಡ ಗಂಗಾಧರ ಗುಳೇದ ಮಾಧ್ಯಮದ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಸಚಿವ ಸ್ಥಾನದ ಅರ್ಹತೆಯನ್ನು ಶಾಸಕ ಶ್ರೀ ಯಶವಂತರಾಯಗೌಡ ವಿ ಪಾಟೀಲ ಅವರು ಹೊಂದಿದ್ದು ತಾಲೂಕಿನ ಮೂರು ಭಾರಿ ಶಾಸಕರಾಗಿ ಜನ ಮನ ಗೆದ್ದಿದ್ದಾರೆ. ಅಷ್ಟೇಅಲ್ಲ ಜಿಲ್ಲೆಯಲ್ಲಿ ಕಟ್ಟಾ ಕಾಂಗ್ರೆಸ್ಸಿಗರಾಗಿ ಪಕ್ಷ ನಿಷ್ಠೆ ಮೆರೆದಿದ್ದಾರೆ ಹೀಗಾಗಿ ಈ ಬಾರಿ ತಾಲೂಕಿಗೆ ಸಚಿವ ಸ್ಥಾನ ನೀಡುವ ಮೂಲಕ ಸಚಿವ ಸ್ಥಾನ ವಂಚಿತ ತಾಲೂಕ ಎಂಬ ಹಣೆ ಪಟ್ಟಿ ಹೋಗಲಾಡಿಸಬೇಕು ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.























