Home ಜಿಲ್ಲೆ ಕಲಬುರಗಿ ಮನೆಯಲ್ಲಿ ಮಕ್ಕಳಿಗೆ ಸಂಸ್ಕಾರ ನೀಡಿ

ಮನೆಯಲ್ಲಿ ಮಕ್ಕಳಿಗೆ ಸಂಸ್ಕಾರ ನೀಡಿ

ಚಿಂಚೋಳಿ:ಫೆ.11: ತಾಲೂಕಿನ ಮಿರಿಯಾಣದ ಪೂಜ್ಯ ಶ್ರೀ ಬಸವ ಮಾಚಿದೇವ ಶಿಕ್ಷಣ ಮತ್ತು ಚಾರಿಟೇಬಲ್ ಟ್ರಸ್ಟ್ ನಿಡಗುಂದಾ ಸಂಚಾಲಿತ ಶ್ರೀ ಪಾಪನಾಶ ವಿದ್ಯಾಮಂದಿರ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಪಾಲಕರ ಸಭೆಯಲ್ಲಿ ಸರ್ಕಾರಿ ಪ್ರೌಢ ಶಾಲೆ ಮುಖ್ಯಗುರುಗಳಾದ ಉಷಾ ಓಂಕಾರ ಮಾತಾನಾಡಿ ಪಾಲಕರು ಪ್ರತಿದಿನ ಮಕ್ಕಳಿಗೆ ಶಾಲೆಯಿಂದ ಬಂದ ನಂತ ಅವರ ಚಲನ ವಲನ ನೋಡಬೇಕು, ಉತ್ತಮ ಸಂಸ್ಕಾರ ನಡೆ ನುಡಿ ಆಚಾರ ವಿಚಾರ ಹೇಳಬೇಕು. ಸಂತ ಶರಣರ ಕಥೆ ಹಾಡು ವಚನ ಹೇಳಿಸಬೇಕು ಎಂದು ದಿಶಾ ಮಾರ್ಗದರ್ಶನ ಮಾಡಿದರು. ವಿದ್ಯಾಭಾರತಿ ಜಿಲ್ಲಾ ಕಾರ್ಯದರ್ಶಿ ಕಾಶೀನಾಥ ಮಡಿವಾಳ ಮಾತನಾಡಿ ಮನೆಯಲ್ಲಿ ದೇಶಿಯ ಆಹಾರ ಊಟ ಮಾಡಿಸಿ , ಮೊಬೈಲ್ ಗಿಳಿನಿಂದ ಹೊರಬಂದು ಉತ್ತಮ ಪುಸ್ತಕಗಳನ್ನ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು. ಅಧ್ಯಕ್ಷತೆ ವಹಿಸಿದ ಪ್ರಧಾನ ಅಧ್ಯಾಪಕಿ ಸಪ್ನಾ ಬಾಚೆಟ್ಟಿ ಸರ್ಕಾರಿ ಹಾಗೂ ವಿದ್ಯಾಭಾರತಿ ಮಾರ್ಗದರ್ಶನದಲ್ಲಿ ಶೈಕ್ಷಣಿಕ ಚಟುವಟಿಕೆಗಳು ನಿರಂತರ ನಡೆಸಲಾಗುತ್ತಿದೆ ಎಂದರು. ಹಿರಿಯ ಶಿಕ್ಷಕಿ ಜಗದೀಶ್ವರಿ ಭೋವಿ ಶಾಲೆ ವಾರ್ಷಿಕ ವರದಿ ವಾಚಿಸಿದರು.ವಿದ್ಯಾರ್ಥಿಗಳಾದ ಸಾಯಿನಾಥ, ವಿಷ್ಣುತೇಜ ಪ್ರಾರ್ಥಿಸಿದರು,ನರಸಮ್ಮ ನಿರೂಪಿಸಿ, ಪ್ರಿಯಾಂಕಾ ಸ್ವಾಗತಿಸಿ, ಮಾಲಾಶ್ರೀ ವಂದಿಸಿದರು.