ಪ್ರತಿಯೊಂದು ಸಮುದಾಯಗಳಿಗೂ ರಾಜಕೀಯ ಸ್ಥಾನ ಮಾನ ಕಲ್ಪಿಸಿ

ಕೋಲಾರ,ಅ,೮- ಸಮಾಜದಲ್ಲಿ ಪ್ರತಿಯೊಂದು ಸಮುದಾಯಗಳಿಗೂ ರಾಜಕೀಯ ಸ್ಥಾನ ಮಾನ ಸಿಗುವಂತಾಗ ಬೇಕು ಆಗಾ ಮಾತ್ರ ಸಮಾಜಿಕ ನ್ಯಾಯ ದೊರಕಿಸಿದಂತಾಗುವುದು ಎಂದು ಮುಖ್ಯ ಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸ್ಸೀರ್ ಆಹಮ್ಮದ್ ಅಭಿಪ್ರಾಯ ಪಟ್ಟರು.


ನಗರದ ವಾಲ್ಮೀಕಿ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಮಾಜ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.


ರಾಜ್ಯದಲ್ಲಿ ವಾಲ್ಮೀಕಿ ಸಮುದಾಯದ ಶಾಸಕರಿಗೆ ಎರಡು ಸಚಿವ ಸ್ಥಾನವನ್ನು ನೀಡಲಾಗಿತ್ತು ಕೆಲವೊಂದು ಪ್ರಕರಣಗಳಿಂದಾಗಿ ನಾಗೇಂದ್ರ ಮತ್ತು ಕ್ಯಾತಸಂದ್ರದ ರಾಜಣ್ಣ ಅವರುಗಳು ಸ್ಥಾನವನ್ನು ಕಳೆದು ಕೊಳ್ಳ ಬೇಕಾಗಿ ಬಂದಿತು. ಮುಖ್ಯಮಂತ್ರಿಗಳು ವಾಲ್ಮೀಕಿ ಸಮುದಾಯದ ಮುಖಂಡರಿಗೆ ಎರಡು ಸ್ಥಾನ ಮಾನಗಳನ್ನು ನೀಡುವ ಚಿಂತನೆ ಹೊಂದಿದ್ದಾರೆ ಎಂದರು.


ಜಿಲ್ಲಾ ಕೇಂದ್ರದಲ್ಲಿ ವಾಲ್ಮೀಕಿ ಸಮುದಾಯಕ್ಕೆ ವಿದ್ಯಾರ್ಥಿ ನಿಲಯದ ಅವಶ್ಯಕತೆ ಇದೆಯೆಂದು ಸಮುದಾಯದ ಮುಖಂಡರು ಪ್ರಸ್ತಾಪಿಸಿದ್ದಾರೆ ಇದಕ್ಕೆ ಅಗತ್ಯವಾದ ಎಲ್ಲಾ ಸೌಲಭ್ಯಗಳಿಗೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು.


ವಿಧಾನ ಪರಿಷತ್ ಸದಸ್ಯ ಎಂ.ಎಲ್. ಅನಿಲ್ ಕುಮಾರ್ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಾ ಮಹರ್ಷಿ ವಾಲ್ಮೀಕಿ ಅವರು ೩-೪ನೇ ಶತಮಾನದಲ್ಲಿ ರಾಮಾಯಣ ರಚಿಸಿದ್ದರೂ ಸಹ ೨೧ನೇ ಶತಮಾನದಲ್ಲೂ ಪ್ರಸ್ತುತವಾಗಿದೆ ಎಂದರು.


ವಾಲ್ಮೀಕಿ ನಂತರವೂ ಬೇಡರ ಕಣ್ಣಪ್ಪ, ಏಕಲವ್ಯ, ಮದಕರಿ ನಾಯಕ ಸೇರಿದಂತೆ ಅನೇಕ ಮಹನೀಯರು ಮಾದರಿಯ ಪುರುಷರಾಗಿದ್ದು ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದ ಅವರು ಶ್ರೀ ದೇವರಾಜ್ ಅರಸು ಕಾಲದಲ್ಲಿ ಹಾವನೂರು ಅವರು ನಾಯಕ ಸಮುದಾಯಕ್ಕೆ ಸೇರಿದವರಾಗಿದ್ದು ಅನೇಕ ಸಾಧನೆಗಳು ಇತಿಹಾಸವಾಗಿದೆ,ನಾಯಕ ಸಮುದಾಯವು ಶೌರ್ಯ, ಸಾಹಸ, ಪ್ರೀತಿ, ನಂಬಿಕೆಗೆ ಹೆಸರಾಗಿದೆ ಎಂದರು.


ವಾಲ್ಮೀಕಿ ಸಮುದಾಯದ ವಿದ್ಯಾರ್ಥಿUಳ ಶೈಕ್ಷಣಿಕ ಅಭ್ಯಾಸಕ್ಕಾಗಿ ವಿದ್ಯಾರ್ಥಿ ನಿಲಯ ಅಗತ್ಯವಾದ ನಿವೇಶವು ಇದ್ದು ಕಟ್ಟಡ ನಿರ್ಮಾಣಕ್ಕೆ ಮುಖ್ಯ ಮಂತ್ರಿಗಳು ಟಿ.ಪಿ.ಎಸ್.ಸಿ.ಯೋಜನೆಯಲ್ಲಿ ವಿದ್ಯಾರ್ಥಿ ನಿಲಯವನ್ನು ನಿರ್ಮಿಸ ಬಹುದಾಗಿದೆ.ಈ ಯೋಜನೆಯೂ ಕೋಟ್ಯಾಂತರ ರೂಪಾಯಿ ಅಂದಾಜು ವೆಚ್ಚವಾಗಲಿದೆ. ಇದಕ್ಕೆ ಜನಪ್ರತಿಗಲೂ ಅನುದಾನವು ಸಕಾಗುವುದಿಲ್ಲ ಹಾಗಾಗಿ ಸರ್ಕಾರದ ವೆಚ್ಚದಲ್ಲಿಯೇ ನಿರ್ಮಿಸಿ ಕೊಡಲು ನಸ್ಸೀರ್ ಆಹಮ್ಮದ್ ಅವರ ನೇತ್ರತ್ವದಲ್ಲಿ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.


ವಾಲ್ಮೀಕಿ ನಾಯಕ ಸಮುದಾಯವು ಶಿಕ್ಷಣವನ್ನು ಪಡೆದು ಸಮಾಜ ಮುಖಿಗಳಾಗಿ ಕಾರ್ಯನಿರ್ವಹಿಸುವಂತಾಗ ಬೇಕೆಂದು ಹಾರೈಕೆಯ ನುಡಿಗಳಾಡಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಡಾ.ಜಿ.ಕೊತ್ತುರು ಮಂಜುನಾಥ್ ಮಾತನಾಡಿ ಮಹರ್ಷಿ ವಾಲ್ಮೀಕಿ ಅವರು ಯಾವೂದೇ ಒಂದು ಸಮುದಾಯಕ್ಕೆ ಮೀಸಲಾಗಿಲ್ಲ.

ಎಲ್ಲಾ ಜಾತಿ ಸಮುದಾಯಗಳಿಗೂ ಬೇಕಾದವರಾಗಿದ್ದಾರೆ. ವಾಲ್ಮೀಕಿ ಸಮುದಾಯದ ಮಾದರಿಯ ಸಣ್ಣಪುಟ್ಟ ಸಮುದಾಯಗಳ ಮೂಲ ಭೂತ ಸೌಲಭ್ಯಗಳ ಚಳುವಳಿಗೆ ಎಲ್ಲರೂ ಸಹಕಾರ ಇರುತ್ತದೆ ಸಮುದಾಯದವರಿಗೆ ಮುಖ್ಯವಾಗಿ ಶಿಕ್ಷಣ ಮತ್ತು ಉದ್ಯೋಗ ನೀಡುವಂತಾಗ ಬೇಕೆಂದ ಅವರು ಎಲ್ಲಾ ಸಮುದಾಯಕ್ಕೂ ದೇವರು ಆರೋಗ್ಯ ಭಾಗ್ಯವನ್ನು ನೀಡುವಂತಾಗಲಿ ಎಂದರು.


ವಾಲ್ಮೀಕಿ ಸಮುದಾಯದ ಮುಖಂಡರು ಹಾಗೂ ನಗರಸಭೆ ಸದಸ್ಯರಾದ ಅಂಬರೀಷ್ ಮಾತನಾಡಿ ನ್ಯಾಯಮೂರ್ತಿಗಳಾದ ಗವಾಯಿ ಅವರಿಗೆ ಆದಾ ಅಪಮಾನಕ್ಕೆ ತೀವ್ರವಾಗಿ ಖಂಡಿಸಿದರು. ವಾಲ್ಮೀಕಿ ಮಹರ್ಷಿಗಳು ರಾಮಾಯಣದ ಮೂಲಕ ರಾಮನಿಗೆ ಜನ್ಮ ನೀಡಿದರು ಅದರೆ ಇಂದು ಯಾವ ಹಿಂದು ಪರ ಸಂಘಟನೆಗಳು ವಾಲ್ಮೀಕಿ ಜಯಂತಿಯ ಅಂಗವಾಗಿ ಅವರ ಪ್ರತಿಮೆಗೆ ಒಂದು ಹೂವಿನ ಹಾರ ಹಾಕುವ ಮೂಲಕ ಕನಿಷ್ಟ ಗೌರವವನ್ನು ಸಲ್ಲಿಸದೆ ಇರುವುದು ನೋವಿನ ಸಂಗತಿಯಾಗಿದೆ ಎಂದರು.


ವೇದಿಕೆಯಲ್ಲಿ ಜಿಲ್ಲಾ ಪಂಚಾಯತ್ ಸಿ.ಇ.ಓ. ಡಾ.ಪ್ರವೀಣ್ ಬಾಗೇವಾಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್.ಬಿ. ಜಿಲ್ಲಾ ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವೈ.,ಶಿವಕುಮಾರ್, ನಗರಸಭೆ ಅಧ್ಯಕ್ಷೆ ಲಕ್ಮೀದೇವಮ್ಮ , ಕೆ.ಯು.ಡಿ.ಎ. ಅಧ್ಯಕ್ಷ ಮಹಮ್ಮದ್ ಷರೀಫ್, ಮಾಜಿ ಅಧ್ಯಕ್ಷ ಅಬ್ದುಲ್ ಖಯ್ಯೂಂ, ನಗರ ಬ್ಲಾಕ್ ಅಧ್ಯಕ್ಷ ಅಪ್ಸರ್, ಗ್ರಾಮೀಣ ಬ್ಲಾಕ್ ಅಧ್ಯಕ್ಷ ಮುರಳಿ, ದಲಿತ ಮುಖಂಡರಾದ ಪಂಡಿತ್ ಮುನಿವೆಂಕಟಪ್ಪ, ಬೆಗಾನಹಳ್ಳಿ ಮುನಿವೆಂಕಟಪ್ಪ, ಡಿ.ಪಿ.ಎಸ್.ಮುನಿರಾಜು, ಸೆನೆಟ್ ಸದಸ್ಯ ಸೀಸಂದ್ರ ಗೋಪಾಲ್, ನಗರಸಭಾ ಸದಸ್ಯರಾದ ರಾಮಯ್ಯ, ಅಮರನಾಥ್, ನರೇಂದ್ರ ಭೂಮಿ( ಗಂಗಣ್ಣ) ಬಾಲಗೋವಿಂದ್, ಮಾಲೂರು ವೆಂಕಟರಾಮ್, ವಕೀಲ ಚಲಪತಿ, ಬಾಲು( ಸುಬ್ರಮಣಿ) ಮುಂತಾದವರು ಉಪಸ್ಥಿತರಿದ್ದರು.