ಬಡಮಕ್ಕಳಿಗೆ ಉತ್ತಮ ಮಾರ್ಗದರ್ಶನ ನೀಡಿ

ಕೆಆರ್ ಪುರ,ಸೆ.೧೪-ಸರ್ಕಾರಿ ಶಾಲೆಗಳಿಗೆ ಹೆಚ್ಚಿನ ಬಡ ಮಕ್ಕಳು ವಿಧ್ಯಾಭ್ಯಾಸ ಪಡೆಯುತ್ತಾರೆ, ಅವರಿಗೆ ದಾರಿ ದೀಪ ಅವರಿಗೆ ಸರಿಯಾದ ಮಾರ್ಗದರ್ಶನ ನೀಡಿ ಅವರನ್ನು ಸಮಾಜದ ಉನ್ನತ ವ್ಯಕ್ತಿಗಳಾಗಿ ಮಾಡುವ ಕರ್ತವ್ಯ ನಿಮ್ಮದು ಎಂದು ಶಾಸಕ ಬಿ.ಎ.ಬಸವರಾಜ ಅವರು ತಿಳಿಸಿದರು.


ಕ್ಷೇತ್ರದ ರಾಮಮೂರ್ತಿನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಬೆಂಗಳೂರು ದಕ್ಷಿಣ ವಲಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಸಂಘಗಳ ಸಹಯೋಗದೊಂದಿಗೆ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಮತ್ತು ಗುರುವಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


ಇತರರಿಗೆ ಹೊಲಿಸಿದರೆ ಶಿಕ್ಷಕರ ಜವಾಬ್ದಾರಿ ಹೆಚ್ಚು ಹಲವು ಒತ್ತಡಗಳಿದ್ದರು , ಮಕ್ಕಳ ವಿದ್ಯಾಭ್ಯಾಸದ ವಿಚಾರದಲ್ಲಿ ಅವರದ್ದು ನಿಸ್ವಾರ್ಥ ಸೇವೆ ಎಂದರು ಶ್ಲಾಘಿಸಿದರು.


ಇತ್ತಿಚೆಗೆ ಸರ್ಕಾರಿ ಶಾಲಾ ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಅನೇಕ ಸೌಲಭ್ಯಯಿದೆ, ಆದರೆ ಈ ಹಿಂದೆ ಕಷ್ಟ ಕರ ದಿನಗಳನ್ನು ಎದುರಿಸಬೇಕಾಗಿತ್ತು , ಶಿಕ್ಷಣ ಪಡೆಯಲು ವಿಧ್ಯಾರ್ಥಿಗಳು , ಶಿಕ್ಷಣ ನೀಡಲು ಶಿಕ್ಷಕರು ಹತ್ತಾರು ಮೈಲಿ ನಡೆದು ಬರುತ್ತಿದ್ದರು, ಆದರೆ ಈಗ ಹಲವು ಸೌಕರ್ಯಯಿದೆ ಎಂದು ಹಳೆಯ ದಿನಗಳನ್ನು ನೆನಪಿಸಿಕೊಂಡರು.


ವಿದ್ಯಾರ್ಥಿಯಾಗಿದ್ದ ನನ್ನ ತಿದ್ದಿ ತೀಡಿ ಉತ್ತಮ ಶಿಕ್ಷಣ ನೀಡಿ ಸಮಾಜದಲ್ಲಿ ಗೌರವಾನ್ವಿತ ವ್ಯಕ್ತಿ ಮಾಡುವಲ್ಲಿ ನನಗೆ ಶಿಕ್ಷಣ ನೀಡಿದ ಗುರುವಿನ ಕಾರ್ಯ ಅನನ್ಯ ಎಂದು ತಿಳಿಸಿದರು.


ನಾನು ವಿಧ್ಯಾರ್ಥಿಯಗಿದ್ದಾಗ ನಮ್ಮ ಶಿಕ್ಷಕರು , ಉತ್ತಮ ಶಿಕ್ಷಣ ನೀಡದೆ ಇದ್ದಲ್ಲಿ ಈ ಸ್ಥಾನ ಇರುತ್ತಿರಲಿಲ್ಲ, ನಾಲ್ಕು ಬಾರಿ ಶಾಸಕ ಹಾಗೂ ರಾಜ್ಯದ ಒಂದು ಇಲಾಖೆಗೆ ಮಂತ್ರಿಯಾಗಲು ಸಾಧ್ಯವಾಗುತ್ತಿರಲಿಲ್ಲ ಎಂದು ಗುರುಗಳನ್ನು ಸ್ಮರಿಸಿದರು.


ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಗೋವಿಂದಪ್ಪ , ಇಓ ವಸಂತ್ ಕುಮಾರ್ ಪದಾಧಿಕಾರಿಗಳು ಹಾಗೂ ಶಿಕ್ಷಕರು ಇದ್ದರು.