ಅನ್ನ ಭಾಗ್ಯ ನೀಡಿ ಅನ್ನ ರಾಮಯ್ಯ ಆಗಿದಿರಾ ರೈತರ ಬೆಳೆದ ಕಬ್ಬಿಗೆ ಬೆಂಬಲ ಬೆಲೆ 3500 ನೀಡಿ ರೈತ ರಾಮಯ್ಯ ಆಗಿ:ರೈತ ಮುಖಂಡ ರಾಜು ನದಾಫ

ಜಮಖಂಡಿ:ನ.7:ಕಬ್ಬಿಗೆ ಪ್ರತಿ ಟನಗೆ 3500 ರೂಗಳ ಬೆಂಬಲ ಬೆಲೆ ನೀಡಬೇಕೆಂದು ಆಗ್ರಹಿಸಿ ರೈತ ಸಂಘಟನೆ. ಅಖಿಲ ಬಾರತ ವಿದ್ಯಾರ್ಥಿ ಪರಿಷತ್ ಕರ್ನಾಟಕ ರಕ್ಷಣಾ ವೇದಿಕೆ, ಅಟೋ ರಿಕ್ಷಾ ಸಂಘ ಸೇರಿದಂತೆ ಅನೇಕ ಸಂಘಗಳು ರೈತರ ಬೆಡಿಕೆ ಸ್ಪಂದಿಸಿ ನಗರದ ಎಜಿ ದೇಸಾಯಿ ವೃತ್ತದಲ್ಲಿ ರಸ್ತಾ ರೋಕೋ ನಡೆಸಿ ಪ್ರತಿಭಟನೆಯನ್ನು ನಡೆಸಿ ತಹಸೀಲದಾರ ಅನಿಲ ಬಡಿಗೇರಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ರೈತ ಮುಖಂಡ ರಾಜು ನಧಾಪ ಮಾತನಾಡಿ ಕಬ್ಬಿಗೆ ನಿಗದಿತ ಬೆಂಬಲ ಬೆಲೆ ಟನ್ನಿಗೆ 3500 ರೂ.ಗಳ ನೀಡಬೇಕೆಂದು ರಾಜ್ಯಾದಾಂತ್ಯ ಹೋರಾಟ ನಡೆಯುತ್ತಿದೆ. ಕಾರ್ಖಾನೆ ಮಾಲಿಕರು ಬೆಂಬಲ ಬೆಲೆ ನೀಡಲು ನಿರಾಕರಿಸುತ್ತಿದ್ದಾರೆ. ರಾಜ್ಯದ ಮುಖ್ಯ ಮಂತ್ರಿ ಸಿದ್ದ ರಾಮಯ್ಯ ಮಧ್ಯಸ್ಥಿಕೆ ವಹಿಸಿ. ರಾಜ್ಯದ ಜನತೆ ಪಂಚ್ಚ ಗ್ಯಾಂಟಿಗಳನ್ನು ನೀಡಿ ಅನ್ನರಾಮಯ್ಯ ಆಗಿದಿರಾ. ಇವಾಗ ರೈತರಾಮಯ್ಯ ಎಂದು ಹೆಸರು ತೆಗೆದುಕೊಳ್ಳಬೇಕು. 5 ಕೋಟಿ ಹಂಗಾಮು ಕಬ್ಬು ನುರಿಸಿದ್ದಾರೆ. ಇವಾಗ 2 ಕೋಟಿ ಕಬ್ಬು ನುರಿಸುತ್ತಿದ್ದಾರೆ. ಪಂಚಗ್ಯಾರಂಟಿ ಯೋಜನೆ ಮಾಡಿ ಸಾಕಷ್ಟು ಹಣವನ್ನು ಖಜಾನೆ ಖಾಲಿ ಮಾಡುತ್ತಿರಿ. ಅದೇ ರೀತಿ ಕಬ್ಬು ಬೆಳಗಾರರಿಗೆ ಬೆಂಬಲ ಬೆಲೆ ನೀಡಬೇಕು ಎಂದರು.

ಸುರೇಶ ಹಂಚಿನಾಳ ಮಾತನಾಡಿ ಕೃಷಿ ಈ ದೇಶದ ಬೆನ್ನಲಬು ರೈತನ್ನು ತುಳಿಯುವ ಕೆಲಸ ಮಾಡುತ್ತಿದೆ. ಕಾಲೇಜುಗಳಲ್ಲಿ ಡೋನೆಷನ್ ಹೆಚ್ಚಳ ಮಾಡುತ್ತಿದ್ದಾರೆ. ಎಲ್ಲ ರಾಜಕಾರಣಿಗಳ ಶಿಕ್ಷಣ ಸಂಸ್ಥೆಗಳನ್ನು ಹೊಂದಿದ್ದಾರೆ. ರೈತರ ಮಕ್ಕಳಿಗೆ ವಂಚನೆ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು ತಮ್ಮ ಊರುಗಳಲ್ಲಿ ರಸ್ತೆಗಳನ್ನು ಬಂದ ಮಾಡಿ ಹೋರಾಟಕ್ಕೆ ಬೆಂಬಲ ನೀಡುವ ಜೊತೆಗೆ ರೈತ ಬೇಡಿಕೆ ಈಡೇರಿಸುವರೆಗೆ ಬೆಂಬಲ ನೀಡಿ ಎಂದರು.

ಕರವೇ ತಾಲೂಕಾದ್ಯಕ್ಷ ಕಾಂಬಳೆ ಮಾತನಾಡಿ. ರೈತರ ಬೆಳೆದ ಬೆಲೆಗೆ ಸರಿಯಾದ ರೀತಿಯಲ್ಲಿ 3500 ರೂ.ಗಳನ್ನು ನೀಡಬೇಕು. ಇಲ್ಲದೆ ಹೋದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ. ಮತ ಕೇಳಲು ಬಂದ ರಾಜಕಾರಣಿಗಳಿಗೆ ಬಾರುಕೋಲಿನಿಂದ ಚಾಟಿ ಎಟ್ಟು ಬೀಸಬೇಕು ಎಂದರು.

ವಿದ್ಯಾರ್ಥಿನಿ ಪ್ರಿಯಾಂಕಾ ಕಡಕೋಳ ಮಾತನಾಡಿ ರಾಜ್ಯದಲ್ಲಿ ರೈತರಿಗೆ ದ್ರೋಹವಾಗುತ್ತಿದೆ. ರೈತರ ಮಕ್ಕಳಿಗೂ ಸರಕಾರ ಮತ್ತು ಕಾರ್ಖಾನೆಯವರು ದ್ರೋಹ ಮಾಡುತ್ತಿದ್ದಾರೆ. ರಾಜಕಾರಣಿಗಳು ಉದ್ಯೋಗಪತಿಗಳಿ ಹತ್ತಿರ ದುಡ್ಡ ಇದ್ದರೆ ಸಾಲದು ತಿನ್ನಲು ಹೊಟ್ಟಗೆ ಹಿಟ್ಟೇ ಬೇಕು ಹಣವಲ್ಲ ಇದನ್ನು ಅರಿಯಬೇಕು ಎಂದು ಆಕ್ರೊಶ ಭರಿತರಾಗಿ ಮಾತನಾಡಿದಳು

ಪರುಶರಾಮ ಈಟಿ ವಿದ್ಯಾರ್ಥಿ . ಪ್ರದೀಪ ಮೆಟ್ಟಗುಡ. ಅಜೇಯ ಕುಲಕರ್ಣಿ ಮಾತನಾಡಿ.ಸಾವಿರಾರು ರೈತರು, ಅಟೋರಿಕ್ಷ ಚಾಲಕರು, ಕರವೇ ಕಾರ್ಯಕರ್ತರು, ನೂರಾರು ಎಬಿವಿಪಿ ವಿದ್ಯಾರ್ಥಿಗಳು ಬೃಹತ್ ಪ್ರತಿಭಟನೆಯಲ್ಲಿದ್ದರು