
ಕಲಬುರಗಿ,ಜೂ.5-ಒಂದು ದೇಶದ ಪ್ರಗತಿಯನ್ನು ಅದರ ಆರ್ಥಿಕ ಪ್ರಗತಿಯಿಂದಅಳಿಯುವುದಲ್ಲ ಆ ದೇಶದ ನಿಜವಾದ ಪ್ರಗತಿಯನ್ನು ಕಾಣಬೇಕಾದದ್ದು ಅಲ್ಲಿನ ಕಲೆ ಮತ್ತು ಸಂಸ್ಕøತಿಯಿಂದ ಎಂಬ ಮಾತನ್ನು ಮಹಾನ್ ತತ್ವಜ್ಞಾನಿ, ಮಾಜಿ ರಾಷ್ಟ್ರಪತಿಗಳಾದಂತಹ ರಾಧಾಕೃಷ್ಣನ್ ಅವರು ಹೇಳಿರುವ ಮಾತಿನಂತೆ ನಮ್ಮ ಕಲ್ಯಾಣ ಕರ್ನಾಟಕ ಭಾಗ ಆರ್ಥಿಕವಾಗಿ ಹಿಂದುಳಿದರು ಸಾಂಸ್ಕøತಿಕವಾಗಿ ಬಹಳ ಶ್ರೀಮಂತಿಕೆ ಹೊಂದಿರುವ ಪ್ರದೇಶ. ಸಾಹಿತ್ಯ, ಶಿಲ್ಪ, ವಾಸ್ತು ಶಿಲ್ಪ, ಜಾನಪದ, ನಾಟಕ ಇತ್ಯಾದಿ ಕಲಾ ಪ್ರಕಾರಗಳು ತಮ್ಮದೇ ಆದ ವಿಶಿಷ್ಟತೆಯಿಂದ ಮೇರೆಯುತ್ತಿವೆ.
ಕಲ್ಯಾಣ ಕರ್ನಾಟಕದ ವಿಭಾಗಿಯ ಕೇಂದ್ರವಾದ ಕಲಬುರ್ಗಿ ಚಿತ್ರಕಲಾ ಕ್ಷೇತ್ರದಲ್ಲಿ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದಂತಹ ಮಹಾನಗರ. ಸಮಕಾಲಿನ ಚಿತ್ರಕಲೆಯಲ್ಲಿ ನಿರಂತರವಾಗಿ ಕೆಲಸ
ಮಾಡುವಂತಹ ಹಲವಾರು ಕಲಾವಿದರು ಇಲ್ಲಿದ್ದಾರೆ. ಅಂತಹ ಕೆಲವು ಪ್ರಮುಖ ಕಲಾವಿದರಲ್ಲಿ ಗಿರೀಶ್ ಕುಲಕರ್ಣಿ ಯವರು ಕೂಡ ಬಹಳ ಪ್ರಮುಖರು. ಇವರಿಗೆ ಪ್ರಸ್ತಕ ಸಾಲಿನ ಕರ್ನಾಟಕದ ಲಲಿತ ಕಲಾ ಅಕಾಡೆಮಿಯು ಇವರ ಕಲಾಕೃತಿಗೆ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಿದೆ. ಸುಮಾರು ಎರಡು ದಶಕಗಳಿಂದಲೂ ಕಲಾ ಕ್ಷೇತ್ರದಲ್ಲಿ ಕ್ರಿಯಾಶೀಲರಾಗಿರುವ ಇವರಿಗೆ ಇಂತಹ ಪ್ರಶಸ್ತಿ ಬಂದಿರುವುದು
ಸಂತಸದ ವಿಷಯ. ಈ ಶತಮಾನ ಕಂಡ ಅತ್ಯಂತ ಘೋರ ಮತ್ತು ದುರಂತದ ಕಾಲವೆಂದರೆ &quoಣ;ಕರೋನ&quoಣ; ಕೋವಿಡ್) ಸಾಂಕ್ರಾಮಿಕ ರೋಗದ ಸಂಕಷ್ಟದ ಕಾಲ. ಮಾನವ ಬದುಕಿನ ಜೀವನವೇ ಪಲ್ಲಟಗೊಳಿಸಿದಂತಹ, ಇಡೀ ಜಗತ್ತನ್ನೇ ತಲ್ಲಣ ಗೊಳಿಸಿದ ಈ ಮಹಾಮಾರಿಯ ರೋಗದ ಬಗ್ಗೆ ಈಗ ನೆನಪಿಸಿಕೊಂಡರೆ ಮೈ ಜುಮ್ ಎನ್ನುತ್ತದೆ. ಇಂತಹ ಸಂಕಷ್ಟದ ಅನುಭವವನ್ನು ಸಾಹಿತಿಗಳು, ಕಲಾವಿದರು, ತಮ್ಮ ಬರಹಗಳ ಮೂಲಕ, ಚಿತ್ರಗಳ ಮೂಲಕ ಚಿತ್ರಿಸಿದ್ದಾರೆ. ಇಂತಹ ಒಂದು ಕಲಾಕೃತಿ, &quoಣ;ಮರಳಿ ಗೂಡಿಗೆ&quoಣ; ಎಂಬ ಶೀರ್ಷಿಕೆಯ ಚಿತ್ರಕ್ಕೆ ವಾರ್ಷಿಕ ಪ್ರಶಸ್ತಿ ದೊರೆತಿದೆ. ಸಮಕಾಲೀನ ಕಲೆಯ
ನೆಲೆಯಲ್ಲಿ ಕಂಡುಬರುವಂತಹ ಇವರ ಕಲಾಕೃತಿಗಳು ನೋಡುಗರಿಗೆ ಒಂದು ಹೊಸ ಅನುಭವವನ್ನು ನೀಡುತ್ತವೆ. ಕಪ್ಪು ಬಣ್ಣವನ್ನು ಅತ್ಯಂತ ಗಾಢವಾಗಿ ಬಳಸಿರುವ ಇವರು ತನ್ನ ನೆಲದ ಸಾಂಕೇತಿಕವಾಗಿ ಬಳಸಿದಂತೆ
ಕಾಣುತ್ತದೆ. ಮಹಾನಗರಗಳಲ್ಲಿ ವಾಸಿಸುವ ಅದೆಷ್ಟೋ ಕೂಲಿ ಕಾರ್ಮಿಕರು ಮರಳಿ ತಮ್ಮ ಗೂಡಿಗೆ ಬರುವಂತಹ ಈ ಕಲಾಕೃತಿ ಅತ್ಯಂತ ಸೃಜನಶೀಲವಾಗಿ ಮೂಡುವಲ್ಲಿ ಯಶಸ್ವಿಯಾಗಿದೆ ಅಂತ ಹೇಳಬಹುದು. ಗಿರೀಶ್ ಅವರ ಕಲಾಕೃತಿಗಳು ಮುಂಬೈ, ಬೆಂಗಳೂರು, ಹೈದರಾಬಾದ್, ದೆಹಲಿ, ಹೀಗೆ ರಾಷ್ಟ್ರಮಟ್ಟದ ಹಲವಾರು ಪ್ರತಿಷ್ಠಿತ ಕಲಾ ಗ್ಯಾಲರಿಗಳಲ್ಲಿ ತಮ್ಮ ಕೃತಿಗಳ ಪ್ರದರ್ಶನವನ್ನು ಏರ್ಪಡಿಸಿದ್ದಾರೆ.