Home ಜಿಲ್ಲೆ ಅಂಬಾಭವಾನಿ ದೇವಸ್ಥಾನದಲ್ಲಿ ಭಕ್ತಿಭಾವದಿಂದ ಘಟಸ್ಥಾಪನೆ

ಅಂಬಾಭವಾನಿ ದೇವಸ್ಥಾನದಲ್ಲಿ ಭಕ್ತಿಭಾವದಿಂದ ಘಟಸ್ಥಾಪನೆ

ಮುದ್ದೇಬಿಹಾಳ : ಸ್ಥಳೀಯ ಬಸವನಗರದಲ್ಲಿರುವ ಕ್ಷತ್ರೀಯ ಮರಾಠಾ ಸಮಾಜದ ಕುಲದೇವತೆಯಾದ ಶ್ರೀ ಅಂಬಾಭವಾನಿ ದೇವಸ್ಥಾನದಲ್ಲಿ ನವರಾತ್ರೋತ್ಸವದ ನಿಮಿತ್ಯ ರವಿವಾರರಂದು ಘಟಸ್ಥಾಪನೆ ಭಕ್ತಿ ಭಾವದಿಂದ ನೆರವೇರಿಸಲಾಯಿತು.
ಬೆಳಿಗ್ಗೆ ಶ್ರೀ ದೇವಿಯ ಮಹಾಮೂರ್ತಿಗೆ ಅರ್ಚಕರಾದ ಕಾಳಪ್ಪ ಬಡಿಗೇರ ಅವರಿಂದ ಮಹಾಭಿಷೇಕ, ಪುಷ್ಪಾರ್ಚನೆ, ಅಲಂಕಾರ, ಮಹಾಮಂಗಳಾರತಿ ಕಾರ್ಯಕ್ರಮ ಜರುಗಿತಲ್ಲದೇ ನಂತರ ಘಟಸ್ಥಾಪನೆ ಮಾಡಿ ಒಂಬತ್ತು ದಿನಗಳ ಕಾಲ ದೇವಿಯ ವಿವಿಧ ರೂಪಗಳನ್ನು ಪೂಜಿಸುವ ಮೂಲಕ ಭಕ್ತರು ನಾಡಿನಲ್ಲಿ ಲೋಕಕಲ್ಯಾಣಕ್ಕಾಗಿ ಪ್ರಾರ್ಥಿಸಿದರು.
ಈ ಸಮಯದಲ್ಲಿ ಮರಾಠಾ ಸಮಾಜದ ಅಧ್ಯಕ್ಷರಾದ ನೇತಾಜಿ ನಲವಡೆ ಅವರು ಮಾತನಾಡಿ ಪ್ರತೀ ವರ್ಷದಂತೆ ಈ ಬಾರಿಯೂ ಭಕ್ತರು ಒಗ್ಗಟ್ಟಿನಿಂದ ನವರಾತ್ರಿ ಉತ್ಸವದಲ್ಲಿ ಪಾಲ್ಗೊಂಡು ಧಾರ್ಮಿಕ ಶ್ರದ್ದೆ ಹಾಗೂ ಸಾಂಸ್ಕøತಿಕ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಸಾಗುತ್ತಿದ್ದಾರೆ ಎಲ್ಲರೂ ಉತ್ತಮ ಬೆಳೆ ಸಮೃದ್ದ ಬೆಳೆ ಹಾಗೂ ಸುಖ ಶಾಂತಿ ಎಲ್ಲರಲ್ಲಿ ನೆಲೆಸಲಿ ಎಂದು ಪ್ರಾರ್ಥಿಸೋಣವೆಂದರು.
ಇನ್ನೋರ್ವ ಸಮಾಜದ ಹಿರಿಯರಾದ ಶ್ರೀಮತಿ ಲಕ್ಷ್ಮೀ ನಲವಡೆ ಅವರು ಮಾತನಾಡಿ ನವರಾತ್ರಿ ಉತ್ಸವದಲ್ಲಿ ಎಲ್ಲ ತಾಯಂದಿರೂ ಜೊತೆಗೂಡಿ ಈ ಘಟಸ್ಥಾಪನೆಯಲ್ಲಿ ಭಾಗವಹಿಸಿದ್ದು ಸಂತೋಷದ ವಿಷಯವಾಗಿದೆ ಈ 9 ದಿನಗಳ ಕಾಲ ಸುಮಂಗಲೆಯರು ನಸುಕಿನ ಜಾವ ಆಗಮಿಸಿ ಶ್ರೀದೇವಿಯ ದರ್ಶನ ಪಡೆಯುತ್ತಾ ಸಾಗಿದ್ದು ಸಾಯಂಕಾಲ ಭಜನೆ ಹಾಗೂ ಕೋಲಾಟ ಮಾಡುವ ಮೂಲಕ ಶ್ರೀದೇವಿಯ ನಾಮಸ್ಮರಣೆ ಮಾಡುತ್ತಾ ಸಾಗಿದ್ದಾರೆ ಇದೇ ರೀತಿ ಎಲ್ಲರೂ ದೇವಿಯ ವಿವಿಧ ರೂಪಗಳನ್ನು ಪೂಜಿಸುವ ಮೂಲಕ ಸರ್ವರ ಒಳಿತಿಗಾಗಿ ಪ್ರಾರ್ಥಿಸೋಣವೆಂದರು.
ನಂತರ ಸಮಸ್ತ ಭಕ್ತಾಧಿಗಳಿಗೆ ಮಹಾಪ್ರಸಾದ ವಿತರಿಸಲಾಯಿತು.
ಈ ಸಮಯದಲ್ಲಿ ಮುಖಂಡರಾದ ಅನೀಲ್ ಜಾಧವ, , ಕೃಷ್ಣಾಜಿ ಪವಾರ, ಭೀಮಾಜಿ ಘಾಟಗೆ, ಗಜಾನನ ನಲವಡೆ, ರಾಘವೇಂದ್ರ ಘಾಟಗೆ, ಸಚೀನ್ ಸಾಳುಂಕೆ, ವಿನಾಯಕ ಘಾಟಗೆ, ಅನೀಲ್ ಪವಾರ, ರಾಘವೇಂದ್ರ ನಲವಡೆ, ಶಿವಾಜಿ ಘಾಟಗೆ(ಹಡಲಗೇರಿ), ರಮೇಶ ಥೋರಾತಜ್ಯೋತಿರಾಮ್ ಘಾಟಗೆ, ಈಶ್ವರ ಪವಾರ, ಸಂತೋಷ ಸಾಳುಂಕೆ, ಸುನೀಲ್ ಜಾಧವ, ಅಂಬಾಜಿ ಘಾಟಗೆ, ಅನೀಲ್ ತೆಲಂಗಿ, ಹಣಮಂತ ನಲವಡೆ, ರೋಹನ್ ನಲವಡೆ, ಶೋಭಾ ಘಾಟಗೆ, ವಿಜಯಲಕ್ಷ್ಮೀ ನಲವಡೆ, ಸರೋಜಿನಿ ದೇವೂರ, ಸುಜಾತಾ ಭೋಸಲೆ, ಜಯಶ್ರೀ ಸಾಳುಂಕೆ, ಅಂಬಕ್ಕ ಪವಾರ, ಪ್ರಿಯಾಂಕಾ ನಲವಡೆ, ಮೀನಾಕ್ಷಿ ಶಿಂಧೆ, ರೇಣುಕಾ ಘೋರ್ಪಡೆ, ಜ್ಯೋತಿ ಘಾಟಗೆ, ಅಂಬು ನಲವಡೆ, ಅಕ್ಷತಾ ಘಾಟಗೆ, ಅಶ್ವಿನಿ ಭೋಸಲೆ, ಅಂಬು ಚವ್ಹಾಣ ಮೊದಲಾದವರು ಉಪಸ್ತಿತರಿದ್ದರು.